ಕ್ರೈಸ್ತ ಸನ್ಯಾಸಿನಿ ಗ್ಯಾಂಗ್‌ ರೇಪ್‌: ನಾಲ್ವರು ಬಾಂಗ್ಲಾ ಶಂಕಿತರ ಸೆರೆ

ಕ್ರೈಸ್ತ ಸನ್ಯಾಸಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಬಾಂಗ್ಲಾದೇಶೀ ಶಂಕಿತರನ್ನು ಲೂಧಿಯಾನಾ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಕ್ರೈಸ್ತ ಸನ್ಯಾಸಿನಿ ಸಾಮೂಹಿಕ ಅತ್ಯಾಚಾರ ನಾಲ್ವರು ಬಾಂಗ್ಲಾದೇಶೀ ಶಂಕಿತರ ಬಂಧನ
ಕ್ರೈಸ್ತ ಸನ್ಯಾಸಿನಿ ಸಾಮೂಹಿಕ ಅತ್ಯಾಚಾರ ನಾಲ್ವರು ಬಾಂಗ್ಲಾದೇಶೀ ಶಂಕಿತರ ಬಂಧನ

ಲೂಧಿಯಾನಾ: ಕ್ರೈಸ್ತ ಸನ್ಯಾಸಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಬಾಂಗ್ಲಾದೇಶೀ ಶಂಕಿತರನ್ನು ಲೂಧಿಯಾನಾ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಮಾರ್ಚ್‌ 14ರಂದು ಪಶ್ಚಿಮ ಬಂಗಾಳದ ರಾಣಾಘಾಟ್‌ನಲ್ಲಿ ಸನ್ಯಾಸಿನಿಯ ಮೇಲೆ ಗ್ಯಾಂಗ್ ರೇಪ್ ನಡೆಸಿದ್ದು ಅಲ್ಲದೆ ದರೋಡೆ ಮಾಡಿ ಪರಾರಿಯಾಗಿದ್ದರು. ಲೂಧಿಯಾನಾ ಪೊಲೀಸರು ಬಂಧಿಸಿರುವ ಶಂಕಿತರ ಮೇಲೆ ದರೋಡೆ ಮತ್ತು ಹಲವು ಕೋಟಿ ರು. ಮೌಲ್ಯದ ವಿದೇಶಿ ಹಣಕಾಸು ವ್ಯವಹಾರ ನಡೆಸಿರುವ ಆರೋಪಗಳಿವೆ.

ಈ ನಾಲ್ವರು ಶಂಕಿತರು ದರೋಡೆ, ಕಳ್ಳತನ ಹಾಗೂ ವಿದೇಶ ಹಣ ವಂಚನೆಯ ಅಪರಾಧಗಳಲ್ಲಿ ತೊಡಗಿದವರಾಗಿದ್ದಾರೆ ಎಂದು ಲೂಧಿಯಾನಾ ಎಡಿಸಿಪಿ (ಕ್ರೈಂ‌) ಮುಖವೀಂದರ್ ಸಿಂಗ್‌ ಹೇಳಿದ್ದಾರೆ. ಬಂಧಿತ ನಾಲ್ಕು ಬಾಂಗ್ಲಾ ಶಂಕಿತರ ಹೆಸರು ಸಲೀಂ, ಹಬೀಬುಲ್‌, ಅಸ್ಲಾಂ ಸೋಹಾದ್‌ ಮತ್ತು ಜಿನ್ನತ್‌ ಎಂದು ಗೊತ್ತಾಗಿರುವುದು ಅವರು ತಿಳಿಸಿದರು.

ಐದು ದಿನಗಳ ಹಿಂದಷ್ಟೇ ಬಂಗಾಳ ಪೊಲೀಸರು ಮುಂಬಯಿ ಮತ್ತು ದೆಹಲಿಯಲ್ಲಿ ಇಬ್ಬರು ಶಂಕಿತರಾದ ಮೊಹಮ್ಮದ್‌ ಸಲೀಂ ಶೇಖ್‌ ಮತ್ತು ಗೋಪಾಲ್‌ ಸರ್ಕಾರ್ ಎಂಬ ಇಬ್ಬರು ಶಂಕಿತರನ್ನು ಬಂಧಿಸಿದ ಬೆನ್ನಲ್ಲೇ ಇದೀಗ ಬಾಂಗ್ಲಾದೇಶಿ ಶಂಕಿತರ ಬಂಧನವಾಗಿದೆ. ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಈ ನಾಲ್ವರು ಶಂಕಿತರ ಫೋಟೋಗಳನ್ನು ರಾಜ್ಯಾದ್ಯಂತ ಪೊಲೀಸ್‌ ಠಾಣೆಗಳಿಗೆ ಒದಗಿಸಿ ಇವರ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಬಂಗಾಳ ಪೊಲೀಸರು ಸೂಚಿಸಿದ್ದರು.

ಸದ್ಯ ತಮ್ಮ ಕಸ್ಟಡಿಗೆ ತೆಗೆದುಕೊಂಡಿರುವ ಪೊಲೀಸರು ಪ್ರಕರಣದಲ್ಲಿ ಈ ನಾಲ್ವರು ಶಂಕಿತರ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com