ಅರುಣ್ ಶೌರಿ ಮತ್ತು ನರೇಂದ್ರ ಮೋದಿ
ಅರುಣ್ ಶೌರಿ ಮತ್ತು ನರೇಂದ್ರ ಮೋದಿ

ಮೋದಿ ಮೇಲೆ ಅರುಣ್ ಶೌರ್ಯ

ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದ, ಒಂದು ಕಾಲದ ಬಿಜೆಪಿ ನಿಷ್ಠ, ಈಗಲೂ ಮೋದಿ ಥಿಂಕ್ ಟ್ಯಾಂಕ್ ಸದಸ್ಯ ಎಂದೇ ಹೇಳಲಾಗುವ...
Published on

ನವದೆಹಲಿ: ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದ, ಒಂದು ಕಾಲದ ಬಿಜೆಪಿ ನಿಷ್ಠ, ಈಗಲೂ ಮೋದಿ ಥಿಂಕ್ ಟ್ಯಾಂಕ್ ಸದಸ್ಯ ಎಂದೇ ಹೇಳಲಾಗುವ ಅರುಣ್ ಶೌರಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾತ್ವಿಕ ಕೋಪ  ದರ್ಶಿಸಿದ್ದಾರೆ.

ದೇಶದ ಆರ್ಥಿಕ ವ್ಯವಸ್ಥೆ ನಿರ್ವಹಿಸುತ್ತಿರುವ ರೀತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಶೌರಿ, ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಬಗ್ಗೆ ಸರ್ಕಾರ ಉದ್ದೇಶಪೂರ್ವಕ ನಿರ್ಲಕ್ಷೆಯ ತೋರುತ್ತಿದೆ ಎಂದುಆಕ್ರೋಶ ಹೊರಹಾಕಿದ್ದಾರೆ.

ಕೇಂದ್ರ ವರ್ಷ ಪೂರೈಸಿರುವ ಸಂದರ್ಭ ದಲ್ಲಿ ಹೆಡ್‍ಲೈನ್ಸ್ ಟುಡೇ ನ್ಯೂಸ್ ಚಾನೆಲ್ ಗೆ ನೀಡಿರುವ ಸಂದರ್ಶನದಲ್ಲಿ, ಮೋದಿ ಕಾರ್ಯವೈಖರಿ ಬಗ್ಗೆ ಶೌರಿ ತಮ್ಮ ಅಭಿಪ್ರಾಯ ಹಂಚಿ ಕೊಂಡಿದ್ದಾರೆ.

ಸಂದರ್ಶನದ ಮುಖ್ಯಾಂಶಗಳು

-ಸರ್ಕಾರವನ್ನು ಬಿಜೆಪಿ ನಡೆಸುತ್ತಿಲ್ಲ. ಮೋದಿ, ಅಮಿತ್ ಶಾ ಮತ್ತು ಅರುಣ್ ಜೇಟ್ಲಿ ಎಂಬ ತ್ರಿಮೂರ್ತಿಗಳು ನಡೆಸುತ್ತಿದ್ದಾರೆ. ಇದು ಪ್ರತಿಪಕ್ಷಗಳಿಗೆ ಮಾತ್ರ ವಲ್ಲ ತಮ್ಮ ಪಕ್ಷದ ಇತರೇ ಸದಸ್ಯರಿಗೂ ಮಾಡುತ್ತಿರುವ ಅವಮಾನ.
- ಆರ್ಥಿಕ ಬೆಳವಣಿಗೆ ಶೇ.8ರಿಂದ ಸದ್ಯದಲ್ಲೇ ಶೇ.10 ರಷ್ಟು ಹೆಚ್ಚಳವಾಗಲಿದೆ ಎಂಬುದು ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸುವ ಹೇಳಿಕೆಗಳಷ್ಟೆ. ಇಂಥ ಉತ್ಪ್ರೇಕ್ಷೆಯ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು.
- ಮೋದಿ ನಾಮಿಕ್ಸ್ ದಿಕ್ಕುದೆಸೆಯಿಲ್ಲದ್ದು. ಹೇಗೆ ಜೋಡಿಸಿ ಅರ್ಥಪೂರ್ಣ ಚಿತ್ರ ಮಾಡಬೇಕೆಂದು ತಿಳಿಯದ, ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಗೋಜಲಿನಂತೆ ಮೋದಿಯ ಆರ್ಥಿಕ ಯೋಜನೆಗಳು ಕಾಣುತ್ತಿವೆ.
- ಮೋದಿ ಸರ್ಕಾರ ಪಟ್ಟಿ ಮಾಡಿ ತೋರಿ ಸುತ್ತಿರುವ ಸಾಧನೆಗಳ್ಯಾವುವೂ ಸಾಧನೆಗಳೇ ಅಲ್ಲ. ಹಣದುಬ್ಬರದ ಇಳಿಕೆ, ನೇರ ವಿದೇಶಿ ಹೂಡಿಕೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಇವ್ಯಾವು ವೂ ಪ್ರಧಾನಿಯ ಸಾಧನೆ ಅಲ್ಲ. ಜಾಗತಿಕ ಮಾರುಕಟ್ಟೆಯ ಏರಿಳಿತಗ ಳಿಂದ ಆಗಿರುವ ಪರಿಣಾಮಗಳಿವು. ಟಿ ಗಾಂಧೀಜಿ ಹೆಸರು ಪಠಿಸಿ, ಅವರ ಸರಳತೆಗೆ ತದ್ವಿರುದ್ಧವಾಗಿ ಅದ್ಧೂರಿ ರು.10 ಲಕ್ಷ ಮೌಲ್ಯದ ಸೂಟ್ ಧರಿಸಿದ್ದು ಒಪ್ಪಲಾಗದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com