ಬಸ್ ನಲ್ಲಿ ಲೈಂಗಿಕ ಕಿರುಕುಳ ಪ್ರಕರಣ: ಬಾಲಕಿ ಸತ್ತಿದ್ದು ದೇವರ ಇಚ್ಛೆ ಎಂದ ಪಂಜಾಬ್ ಸಚಿವ

ರೇಪ್ ಗೆ ಒಳಗಾಗಿ, ಚಲಿಸುತ್ತಿದ್ದ ಬಸ್ಸಿನಿಂದ ಹೊರಗೆಸೆದಿದ್ದರಿಂದ ಮೃತಪಟ್ಟ ೧೩ ವರ್ಷದ ಬಾಲಕಿ ಸಾವು ದೇವರ ಇಚ್ಛೆ ಎಂದು ಪಂಜಾಬ್ ನ ಶಿಕ್ಷಣ ಸಚಿವ ಸುರ್ಜಿತ್ ಸಿಂಗ್ ರಖ್ರ ಶನಿವಾರ ಹೇಳಿದ್ದಾರೆ...
ಬಾಲಕಿ ಮೇಲಿನ ದೌರ್ಜನ್ಯ ವಿರೋಧಿಸಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ನವದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ಚಿತ್ರ
ಬಾಲಕಿ ಮೇಲಿನ ದೌರ್ಜನ್ಯ ವಿರೋಧಿಸಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ನವದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ಚಿತ್ರ

ನವದೆಹಲಿ: ರೇಪ್ ಗೆ ಒಳಗಾಗಿ, ಚಲಿಸುತ್ತಿದ್ದ ಬಸ್ಸಿನಿಂದ ಹೊರಗೆಸೆದಿದ್ದರಿಂದ ಮೃತಪಟ್ಟ ೧೩ ವರ್ಷದ ಬಾಲಕಿಯ ಸಾವು ದೇವರ ಇಚ್ಛೆ ಎಂದು ಪಂಜಾಬ್ ಶಿಕ್ಷಣ ಸಚಿವ ಸುರ್ಜಿತ್ ಸಿಂಗ್ ರಖ್ರ ಶನಿವಾರ ಹೇಳಿದ್ದಾರೆ.

ಕಾರು ಅಥವಾ ವಿಮಾನ ಅಪಘಾತವಾದಾಗ ನಾವು ದೇವರ ಆಟ, ಇಚ್ಛೆ ಎಂದು ಹೇಗೆ ಭಾವಿಸುತ್ತೇವೆಯೋ ಈ ಪ್ರಕರಣವನ್ನು ದೇವರ ಇಚ್ಛೆ ಎಂದು ಭಾವಿಸಬೇಕು. ಅಪಘಾತವಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ  ಪಂಜಾಬ್ ನ ಶಿಕ್ಷಣ ಸಚಿವ ಸುರ್ಜಿತ್ ಸಿಂಗ್ ರಖ್ರ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ.

ಸುರ್ಜಿತ್ ಸಿಂಗ್ ರಖ್ರ  ಅವರ ಈ ವಿವಾದಾತ್ಮಕ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಪ್ರತಿಪಕ್ಷದ ನಾಯಕರು, ಅಧಿಕಾರದ ಮದವೇರಿರುವ  ಸಚಿವರು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಈ ರೀತಿಯ ಹೇಳಿಕೆ ಅಮಾನವೀಯವಾಗಿದ್ದು, ಹೇಳಿಕೆಯನ್ನು ಹಿಂಪಡೆಯುವಂತೆ ಕಾಂಗ್ರೆಸ್ ನಾಯಕ ರಂದೀಪ್ ಸಿಂಗ್ ಆಗ್ರಹಿಸಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರ ಒಡೆತನದ ಕಂಪನಿಗೆ ಸೇರಿದ ಬಸ್ ನಲ್ಲಿ ಸಂಬಂಧಿಕರ ಭೇಟಿಗಾಗಿ 13 ವರ್ಷದ ಬಾಲಕಿ ಹಾಗೂ ಆಕೆಯ ತಾಯಿ ಚಲಿಸುತ್ತಿದ್ದರು. ಈ ವೇಳೆ ಬಸ್ ನಲ್ಲಿದ್ದ ಕಾಮುಕರು ಇಬ್ಬರಿಗೂ ಲೈಂಗಿಕ ಕಿರುಕುಳ ನೀಡಿ ನಂತರ ಬಸ್ ನಿಂದ ಹೊರದಬ್ಬಿದ್ದರು. ಘಟನೆಯಲ್ಲಿ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಳು. ತಾಯಿಯ ಸ್ಥಿತಿ ಈಗಲೂ ಚಿಂತಾನಕವಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com