ನೇಪಾಳದಲ್ಲಿ ಮತ್ತೆ ಎರಡು ಬಾರಿ ಭೂಕಂಪ, ಒಟ್ಟು 121 ಬಾರಿ ಕಂಪಿಸಿದ ಭೂಮಿ

ಭೀಕರ ದುರಂತಕ್ಕೆ ಸಾಕ್ಷಿಯಾದ ನೇಪಾಳದಲ್ಲಿ ಶನಿವಾರ ಮತ್ತೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.1ರಷ್ಟು ತೀವ್ರತೆ ದಾಖಲಾಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಠ್ಮಂಡು: ಭೀಕರ ದುರಂತಕ್ಕೆ ಸಾಕ್ಷಿಯಾದ ನೇಪಾಳದಲ್ಲಿ ಶನಿವಾರ ಮತ್ತೆ ಎರಡು ಬಾರಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.2 ಮತ್ತು 4.3ರಷ್ಟು ತೀವ್ರತೆ ದಾಖಲಾಗಿದೆ.

ಇಂದು ಬೆಳಗಿನ ಜಾವ 3.55 ಸುಮಾರಿಗೆ ಸಿಂಧುಪಾಲ್ಚೌಕ್ ಜಿಲ್ಲೆಯಲ್ಲಿ 4.2 ತೀವ್ರತೆಗೆ ಹಾಗೂ ಧೊಲಾಖ್ ಜಿಲ್ಲೆಯಲ್ಲಿ ಬೆಳಗ್ಗೆ 5.55ರ ಸುಮಾರಿಗೆ 4.3 ತೀವ್ರತಗೆ ಭೂಕಂಪ ಸಂಭವಿಸಿದೆ ಎಂದು ನೇಪಾಳ ರಾಷ್ಟ್ರೀಯ ಭೂಕಂಪ ಮಾಪನಾ ಕೇಂದ್ರ ಹೇಳಿರುವುದಾಗಿ ಹಿಮಾಲಯನ್ ಟೈಮ್ಸ್ ವರದಿ ಮಾಡಿದೆ.

ಏಪ್ರಿಲ್ 25ರಂದು ಸಂಭವಿಸಿದ ಭೀಕರ ಭೂಕಂಪದ ಬಳಿಕ ಗಾಯಕ್ಕೆ ಉಪ್ಪು ಸವರಿದಂತೆ ನೇಪಾಳದಲ್ಲೆ ಮತ್ತೆ ಮತ್ತೆ ಭೂಮಿ ಕಂಪಿಸುತ್ತಿದ್ದು, ಕಳೆದ ಒಂದು ವಾರದಲ್ಲಿ ಒಟ್ಟು 121 ಬಾರಿ ಭೂಮಿ ಕಂಪಿಸಿದೆ.

ನೇಪಾಳದಲ್ಲಿ ಸಂಭವಿಸಿದ ಪ್ರಭಲ ಭೂಕಂಪನದಿಂದಾಗಿ ಈ ವರೆಗೂ ಸುಮಾರು 6.500 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಸಾಕಷ್ಟು ಮಂದಿ ಅವಶೇಷಗಳಡಿ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ನೇಪಾಳ ಭೂಕಂಪನದಿಂದಾಗಿ ಇಡೀ ವಿಶ್ವವೇ ತಲ್ಲಣಗೊಂಡಿದ್ದು, ಭೂಮಿ ಸಣ್ಣಗೆ ಕಂಪಿಸಿದರೂ ಅತೀವವಾಗಿ ಹೆದರುವಂತಹ ಪರಿಸ್ಥಿತಿ ಎದುರಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com