
ನವದೆಹಲಿ: ಉಗ್ರಗಾಮಿ ಅಲ್ ಖೈದಾ ಸಂಘಟನೆಯ ಹಿಟ್ ಲಿಸ್ಟ್ ನಲ್ಲಿ ನರೇಂದ್ರ ಮೋದಿ ಅವರಿದ್ದು, ಇದೇ ಮೊದಲ ಬಾರಿಗೆ ನೇರವಾಗಿ ಟಾರ್ಗೆಟ್ ಮಾಡಿರುವ ಅಲ್ ಖೈದಾ ಮೋದಿಯನ್ನು ಹೆಸರಿಸಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.
ಭಾರತ ಉಪಖಂಡದ ಅಲ್ ಖೈದಾ ಮುಖ್ಯಸ್ಥ ಮೌಲಾನಾ ಅಸೀಮ್ ಉಮರ್, ಫ್ರಾನ್ಸ್ ಟು ಬಾಂಗ್ಲಾದೇಶ್ ಟೈಟಲ್ ನಲ್ಲಿ ಮೇ 2ರಂದು ವೀಡಿಯೋವನ್ನು ಬಿಡುಗಡೆ ಮಾಡಿದ್ದಾನೆ. ಮುಸ್ಲಿಂ ಉಗ್ರರ ವಿರುದ್ಧ ಹೋರಾಡಬೇಕೆಂಬ ಪ್ರಧಾನಿ ಮೋದಿ ಕರೆ ಬಗ್ಗೆ ವೀಡಿಯೋದಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಈ ವಿಡಿಯೋದಲ್ಲಿ ವಿಶ್ವಬ್ಯಾಂಕ್, ಐಎಂಎಫ್ ನೀತಿಗಳು, ಡ್ರೋನ್ ದಾಳಿ, ಚಾರ್ಲೆ ಹೆಬ್ಡೋ ಬರಹ, ನರೇಂದ್ರ ಮೋದಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಉಮರ್ ವಾಗ್ದಾಳಿ ನಡೆಸಿದ್ದಾನೆ. ಅಷ್ಟೇ ಅಲ್ಲ ಕಳೆದ ಫೆಬ್ರವರಿ ತಿಂಗಳಿನಲ್ಲಿ ಢಾಕಾದಲ್ಲಿ ಅಜಿತ್ ರಾಯ್ ಹತ್ಯೆ ಸೇರಿದಂತೆ ಪಾಕಿಸ್ತಾನ, ಬಾಂಗ್ಲಾದಲ್ಲಿನ ಹಲವು ಜಾತ್ಯತೀತ ಲೇಖಕರ ಹತ್ಯೆಯ ಹೊಣೆಯನ್ನು ಭಾರತ ಉಪಖಂಡದ ಅಲ್ ಖೈದಾ ಹೊತ್ತುಕೊಂಡಿದೆ. ಈ ವಿಡಿಯೋ ಮತ್ತು ವರದಿ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಭಾರತೀಯ ಗುಪ್ತಚರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Advertisement