ಹಳಿ ತಪ್ಪಿದ ತುರಂತೋ ಎಕ್ಸ್ ಪ್ರೆಸ್ ; ಪ್ರಯಾಣಿಕರು ಸುರಕ್ಷಿತ

ಮುಂಬೈಯಿಂದ ಎರ್ನಾಕುಳಂಗೆ ತೆರಳುತ್ತಿದ್ದ ತುರಂತೋ ಎಕ್ಸ್‍ಪ್ರೆಸ್ ರೈಲು ಗೋವಾದ ಕಾಣಕೋಣ ಮತ್ತು ಮಡಗಾಂವ ನಡುವಣ...
ತುರಂತೋ ಎಕ್ಸ್‍ಪ್ರೆಸ್ ರೈಲು
ತುರಂತೋ ಎಕ್ಸ್‍ಪ್ರೆಸ್ ರೈಲು

ಕಾರವಾರ: ಮುಂಬೈಯಿಂದ ಎರ್ನಾಕುಳಂಗೆ ತೆರಳುತ್ತಿದ್ದ ತುರಂತೋ ಎಕ್ಸ್‍ಪ್ರೆಸ್ ರೈಲು ಗೋವಾದ ಕಾಣಕೋಣ ಮತ್ತು ಮಡಗಾಂವ ನಡುವಣ ಬಾಳ್ಳಿ ಬಳಿ ಭಾನುವಾರ ನಸುಕಿನಲ್ಲಿ ಹಳಿ ತಪ್ಪಿದೆ. ಚಾಲಕನ ಸಮಯಪ್ರಜ್ಞೆ ಯಿಂದ ಭಾರಿ ಅವಘಡ ತಪ್ಪಿಸದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ರೈಲು ಸುರಂಗ ಮಾರ್ಗದಲ್ಲಿ ಚಲಿ ಸುತ್ತಿದ್ದಾಗ ಬೆಳಗ್ಗೆ 6.24ರ ಸುಮಾರಿಗೆ ಹಳಿ ತಪ್ಪಿದೆ. ಕಟ್ಟಿಗೆ ತುಂಡು ಹಳಿ ಮೇಲಿದ್ದ ಕಾರಣ ಬೋಗಿಗಳು ಜಾರಿವೆ ಎನ್ನಲಾಗಿದೆ. ಮುಂದಿನ ಮೂರು ಬೋಗಿಗಳು ಹೊರತು ಪಡಿಸಿ ಉಳಿದ 10 ಬೋಗಿಗಳು ಹಳಿಯಿಂದ ಸರಿದಿವೆ. ರೈಲು ಹಳಿ ತಪ್ಪುತ್ತಿದ್ದಂತೆ ಘರ್ಷಣೆಯಿಂದ ರೈಲಿನಲ್ಲಿ ಬೆಂಕಿ ಕಂಡುಬಂತು. ಆದರೆ ಪ್ರಯಾಣಿಕರೇ ಸೇರಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾದರು. ತಕ್ಷಣ  ಎಚ್ಚೆತ್ತುಕೊಂಡ ಚಾಲಕ ರೈಲನ್ನು ನಿಲ್ಲಿಸುವಲ್ಲಿ ಸಫಲನಾದ. ಇದರಿಂದ ಪ್ರಯಾಣಿಕರಿಗೆ ಯಾವುದೇ ಅಪಾಯ ಉಂಟಾಗಲಿಲ್ಲ.
ಸ್ಥಳಕ್ಕೆ ಆಗಮಿಸಿದ ಆ್ಯಕ್ಸಿಡೆಂಟ್ ಮೆಡಿಕಲ್ ರಿಲೀಫ್ ವ್ಯಾನ್ (ಎಆರ್‍ಎಮ್ ವಿ) ಮತ್ತು ಆಕ್ಸಿಡೆಂಟ್ ರಿಲೀಫ್ ಟ್ರೈನ್ಸ್ (ಎಆರ್‍ಟಿಎಸ್) ಗಳು ಪರಿಶೀಲನೆ ನಡೆಸಿವೆ. ಜತೆಗೆ ಕೊಂಕಣ ರೈಲ್ವೆ ಅಧಿಕಾರಿ ತಂಡ ಸ್ಥಳಕ್ಕೆ ಆಗಮಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದಿದೆ.
ತುರಂತೋ ಎಕ್ಸಪ್ರೆಸ್‍ನ ಮೂರು ಬೋಗಿ ಗಳು ಹಾಗೂ ಲೋಕಲ್ ರೈಲಿನ ಮೂಲಕ ಪ್ರಯಾಣಿಕರನ್ನು ಕಾರವಾರದ ಶಿರವಾಡ ನಿಲ್ದಾಣಕ್ಕೆ ಸುರಕ್ಷಿತವಾಗಿ ತಲುಪಿಸಲಾಗಿದೆ.
ಕಾರವಾರ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ತಿಂಡಿ, ನೀರು ನೀಡಿ ಉಪಚರಿಸಿ, ಬೇರೆ ರೈಲಿನ ಮೂಲಕ ಎರ್ನಾಕುಲಂಗೆ ಕಳುಹಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com