
ಕಠ್ಮಂಡು: 80 ವರ್ಷಗಳ ಬಳಿಕ ನೇಪಾಳವನ್ನು ಪಾತಾಳಕ್ಕೆ ನೂಕಿದ ಭೀಕರ ಭೂಕಂಪ ಸಂಭವಿಸಿ ಒಂದು ವಾರ ಕಳೆದರೂ ಇನ್ನೂ ಹಲವರು ಮೃತ್ಯುವನ್ನು ಜಯಿಸುತ್ತಾ ಅವಶೇಷಗಳಡಿಯಿಂದ ಹೊರಬರುತ್ತಿದ್ದಾರೆ. `ಅವಶೇಷಗಳಡಿ ಇನ್ನೂ ಜನ ಬದುಕಿದ್ದಾರೆ ಎಂಬ ಆಸೆಯನ್ನೇ ಕೈಬಿಟ್ಟಿ ದ್ದೇವೆ' ಎಂದು ನೇಪಾಳ ಸರ್ಕಾರ ಘೋಷಿಸಿದ ಮಾರನೇ ದಿನವೇ 101ರ ವೃದ್ಧ ಸೇರಿದಂತೆ ಮೂವರನ್ನು ಅವಶೇಷಗಳಡಿಯಿಂದ ರಕ್ಷಿಸಲಾಗಿದೆ. ಇದರ ನಡುವೆಯೇ ನೊಂದ ಜನರ ಗಾಯದ ಮೇಲೆ ಉಪ್ಪು ಸುರಿದಂತೆ ನೇಪಾಳದಲ್ಲಿ ಮತ್ತೆ ಮತ್ತೆ ಪಶ್ಚಾತ್ ಕಂಪನಗಳು ಸಂಭವಿಸುತ್ತಿವೆ. ಹೀಗಾಗಿ ಜನರು ತಂತಮ್ಮ ಮನೆಗಳಿಗೆ ಹಿಂತಿರುಗಲು ಹೆದರಿ, ಬಯಲಲ್ಲೇ ಟೆಂಟ್ ಹಾಕಿಕೊಂಡು ಜೀವಿಸುವಂತಾಗಿದೆ. ಇದರ ನಡುವೆಯೇ ನೇಪಾಳ ಭೂಕಂಪ ದಿಂದಾಗಿ 17 ಲಕ್ಷ ಮಕ್ಕಳು ಸೇರಿ 80 ಲಕ್ಷ ಮಂದಿ ಮೇಲೆ ನೇರ ಪರಿಣಾಮಗಳಾಗಿವೆ ಎಂದು ವಿಶ್ವಸಂಸ್ಥೆ ಹೇಳಿದೆ. ಇದೇ ವೇಳೆ, ನೇಪಾಳದ ರಕ್ಷಣಾ ಕಾರ್ಯಗಳ ಬಗ್ಗೆ ವರದಿ ಮಾಡುತ್ತಿರುವ ಭಾರತೀಯ ಮಾಧ್ಯಮಗಳ ಮೇಲೆ ನೇಪಾಳಿಗರು ಕೆಂಡಕಾರಿದ್ದಾರೆ. ಮಾಧ್ಯಮ ಗಳು ನೇಪಾಳ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳನ್ನು ವರದಿ ಮಾಡುವ ಬದಲಿಗೆ, ಭಾರತ ಸರ್ಕಾರದ ಪಿಆರ್‍ಒಗಳಂತೆ ವರ್ತಿಸುತ್ತಿವೆ ಎಂದು ಆರೋಪಿಸಿದ್ದಾರೆ.
ಬದುಕುಳಿದ 105ರ ವೃದ್ಧಿ !
ಭಾನುವಾರ ನೇಪಾಳದಲ್ಲಿ ವಿಸ್ಮಯಕಾರಿ ಬೆಳವಣಿಗೆ ನಡೆದಿದೆ. ಭೂಕಂಪ ಸಂಭವಿಸಿ168 ಗಂಟೆಗಳ ಬಳಿಕ 105ರ ವಯೋ ವೃದ್ಧ ಸೇರಿದಂತೆ ಮೂವರನ್ನು ಅವಶೇಷಗಳಡಿಯಿಂದ ರಕ್ಷಿಸಲಾಗಿದೆ. ಈ ಪೈಕಿ ಒಬ್ಬ ಮಹಿಳೆಯೂ ಸೇರಿದ್ದಾರೆ. ಸ್ಯಾಲಿ ಗ್ರಾಮದಲ್ಲಿ ಅವಶೇಷಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಈ ಮೂವರು ಬದುಕಿರುವುದು ಬೆಳಕಿಗೆ ಬಂತು. ತಕ್ಷಣ ಅವರನ್ನು ರಕ್ಷಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಚ್ಚಿದ ಏರ್‍ಪೋ ರ್ಟ್
ಭೂಕಂಪದಿಂದಾಗಿ ನಿರ್ವಸಿತರಾಗಿರುವ ಲಕ್ಷಾಂತರ ಜನರು ಪರಿಹಾರ ಸಾಮಗ್ರಿಗಳನ್ನು ಎದುರುನೋಡುತ್ತಿದ್ದರೆ, ನೇಪಾಳದ ವಿಮಾನ ನಿಲ್ದಾಣವೇ ಬಂದ್
ಆಗುವ ಮೂಲಕ ಇವರ ಕಾತರಕ್ಕೆ ತಣ್ಣೀರು ಬಿದ್ದಿದೆ. ಕೋಟ್ಯಂತರ ಪರಿಹಾರ ಸಾಮಗ್ರಿ ಗಳನ್ನು ಹೊತ್ತು ತಂದಿದ್ದರೂ ಬೃಹತ್ವಿಮಾನಗಳಿಗೆ ಕಠ್ಮಂಡು ವಿಮಾನ
ನಿಲ್ದಾಣದಲ್ಲಿ ಇಳಿಯಲಾಗುತ್ತಿಲ್ಲ. ಇದಕ್ಕೆ ಕಾರಣ ರನ್‍ವೇಗೆ ಆಗಿರುವ ಹಾನಿ. ವಿಮಾನ ನಿಲ್ದಾಣದ ಮುಖ್ಯ ರನ್‍ವೇಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ದೊಡ್ಡ ವಿಮಾನಗಳಿಗೆ ನಿಷೇಧಹೇರಲಾಗಿದೆ. ಹೀಗಾಗಿ ಪರಿಹಾರ ಕಾರ್ಯಕ್ಕೆ ಹಿನ್ನಡೆಯಾಗಿದೆ. ಹೀಗಿದ್ದಾಗ್ಯೂ ವಿಶ್ವಸಂಸ್ಥೆ ಮಾತ್ರ ಪರಿಹಾರ ವಿತರಣೆಯಲ್ಲಿದ್ದ ಅಡ್ಡಿಗಳು ನಿಧಾನವಾಗಿ ನಿವಾರಣೆಯಾಗುತ್ತಿದೆ ಎಂದಿದೆ. ಇದೇ ವೇಳೆ, ಭೂಕಂಪಕ್ಕೆ ಬಲಿಯಾದವರ ಸಂಖ್ಯೆ ಭಾನುವಾರ 7,040ಕ್ಕೇರಿದ್ದು, 14,123 ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಒಬ್ಬ ಭಾರತೀಯ ಸೇರಿ 50 ಮೃತದೇಹ ಪತ್ತೆ
ಕಠ್ಮಂಡುವಿನ ಹಿಮಪಾತ ಪೀಡಿತ ಪ್ರದೇಶದಿಂದ ಭಾನುವಾರ 6 ಮಂದಿ ವಿದೇಶಿ ಪರ್ವತಾರೋಹಿಗಳು ಸೇರಿದಂತೆ 51 ಮೃತದೇಹಗಳನ್ನು ನೇಪಾಳಿ ಪೋಲೀಸರು ಹೊರತೆಗೆದಿದ್ದಾರೆ. ವಿದೇಶಿಯರ ಪೈಕಿ ಒಬ್ಬ ಫ್ರೆಂಚ್ , ಒ ಬ್ಬ ಭಾರತೀಯ ಸೇರಿದ್ದರೆ, 45 ಮಂದಿ ನೇಪಾಳೀಯರು ಎಂದು ಗುರುತಿಸಲಾಗಿದೆ.
ವಿಶ್ವದ ಪುರಾತನ ಬೌದ್ಧ ದೇಗುಲಕ್ಕೆ ಹಾನಿ ವಿಶ್ವದ ಅತಿ ಪುರಾತನ ಬೌದ್ಧ ದೇಗುಲ ಎಂಬ ಖ್ಯಾತಿಗೆ ಪಾತ್ರವಾಗಿದ್ದ ಸ್ವಯಂಭುನಾಥ್ ಸ್ತೂಪವೂ ಭೂಕಂಪದಿಂದಾಗಿ ಹಾನಿಗೀಡಾಗಿದೆ. ಪಶ್ಚಿಮ ಕಠ್ಮಂಡುವಿನ ಪರ್ವತದ ಮೇಲಿರುವ 2 ಸಾವಿರ ವರ್ಷಗಳಷ್ಟು ಹಳೆಯ ಲಿಚ್ಛಾವಿ ಯುಗದ ಬೌದಟಛಿ ದೇವಾಲಯಕ್ಕೆ ಭಾಗಶಃ ಹಾನಿಯಾಗಿದ್ದು, ಮುಖ್ಯ ಸ್ತೂಪಕ್ಕೆ ಏನೂ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement