ಭಗವಾನ್ ಬುದ್ಧನ ಆದರ್ಶಗಳಿಗೆ ದುಃಖವನ್ನು ದೂರ ಮಾಡಬಲ್ಲ ಶಕ್ತಿಯಿದೆ: ಮೋದಿ

ಭಗವಾನ್ ಬುದ್ಧನ ಆದರ್ಶಗಳು ಇಂದಿಗೂ ಮಾದರಿ, ಬುದ್ಧನ ಆದರ್ಶಗಳನ್ನು ನಾವು ಪಾಲಿಸಬೇಕು. ಬುದ್ಧನಂತೆ ನಾವು ಕೂಡ ಶಾಂತಿ...
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಭಗವಾನ್ ಬುದ್ಧನ ಆದರ್ಶಗಳು ಇಂದಿಗೂ ಮಾದರಿ, ಬುದ್ಧನ ಆದರ್ಶಗಳನ್ನು ನಾವು ಪಾಲಿಸಬೇಕು. ಬುದ್ಧನಂತೆ ನಾವು ಕೂಡ ಶಾಂತಿ ಹಾಗೂ ಸೌಹಾರ್ದತೆಗೆ ಹೆಚ್ಚು ಮಹತ್ವ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.

ದೆಹಲಿಯ ತಾಳಕಟೋರ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಬುದ್ಧ ಪೂರ್ಣಿಮೆ ದಿನ ಆಚರಣೆ ಕಾರ್ಯಕ್ರಮದಲ್ಲಿ 31 ದೇಶದ ಪ್ರತಿನಿಧಿಗಳು ಭಾಗಿಯಾಗಿದ್ದಾರೆ. ಈ ವೇಳೆ ಮಾತನಾಡಿದ ಮಾತನಾಡಿದ ಮೋದಿ ಅವರು, ಬುದ್ಧನ ಆದರ್ಶಗಳು ಇಂದಿಗೂ ಮಾದರಿ, ಬುದ್ಧನ ಆದರ್ಶಗಳನ್ನು ನಾವು ಪಾಲಿಸಬೇಕು. ಬುದ್ಧನಂತೆ ನಾವು ಕೂಡ ಶಾಂತಿ ಹಾಗೂ ಸೌಹಾರ್ದತೆಗೆ ಹೆಚ್ಚು ಮಹತ್ವ ನೀಡಬೇಕು ಎಂದು ಕರೆ ನೀಡಿದ್ದಾರೆ.

ರಾಜಮನೆತನದಲ್ಲಿ ಹುಟ್ಟಿದ ಭಗವಾನ್ ಬುದ್ಧ ರಾಜವೈಭೋಗವನ್ನು ತ್ಯಜಿಸಿ ವಿರಾಗಿಯಾದ, ರಾಜವೈಭೋಗವನ್ನು ತ್ಯಜಿಸುವುದು ಸುಲಭದ ವಿಷಯವಲ್ಲ ಎಂದರು.

ಬುದ್ಧನ ಜನ್ಮಸ್ಥಳವಾದ ನೇಪಾಳ ಇಂದು ಭೂಕಂಪದಿಂದ ಪೀಡಿತವಾಗಿದೆ. ನಾವೆಲ್ಲರೂ ಭಗವಾನ್ ಬುದ್ಧನ ಪ್ರಾರ್ಥನೆ ಮಾಡಬೇಕಿದೆ. ಭೂಕಂಪ ಪೀಡಿತರ ದುಃಖದಲ್ಲಿ ನಾವೆಲ್ಲರೂ ಭಾಗಿಯಾಗಿದ್ದೇವೆ. ನೇಪಾಳದಲ್ಲಿ ಭೂಕಂಪಕ್ಕೆ ಸಿಲುಕಿ ನರಳಾಡುತ್ತಿರುವವರ ಕಣ್ಣೀರು ಒರೆಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com