
ನವದೆಹಲಿ: 2002ರ ಹಿಟ್ ಆಂಟ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧದ ಎಲ್ಲಾ ಆರೋಪಗಳು ಸಾಬೀತಾಗಿದ್ದು, ಸಲ್ಮಾನ್ ಖಾನ್ ತಪ್ಪಿತಸ್ಥ ಎಂದು ಮುಂಬೈ ಸೆಷನ್ಸ್ ಕೋರ್ಟ್ ಬುಧವಾರ ತೀರ್ಪು ನೀಡಿದೆ.
ಇದರಿಂದ ಅಭಿಮಾನಿಗಳಿಗಿಂತ ಬಾಲಿವುಡ್ ಭಾರಿ ತಲೆ ಕೆಡಿಸಿಕೊಂಡಿದೆ. ಏಕೆಂದರೆ, ಸಲ್ಮಾನ್ ಮೇಲೆ ಬಾಲಿವುಡ್ ನಿರ್ಮಾಪಕರು ಹೂಡಿರುವುದು ಬರೋಬ್ಬರಿ ರು. 200 ಕೋಟಿ!.
ಬಾಲಿವುಡ್ ನಟನ ವಿರುದ್ಧ ಆರೋಪ ಸಾಬೀತಾಗಿದ್ದು, 10 ವರ್ಷಗಳವರೆಗೂ ಶಿಕ್ಷೆಯಾಗುವ ಸಾಧ್ಯತೆ ಇದೆ.ಆದರೆ, ಸಲ್ಮಾನ್‍ರ ಹಲವು ಸಿನಿಮಾಗಳ ಚಿತ್ರೀಕರಣ ಬಾಕಿಯಿರುವುದು ನಿರ್ಮಾಪಕರ ನಿದ್ದೆಗೆಡಿಸಿದೆ.
Advertisement