
ಕೊಚ್ಚಿ: ಕರ್ತವ್ಯ ಕಾನೂನು ರಕ್ಷಣೆ, ಉದ್ದೇಶ ವಕೀಲಿಕೆ, ಮಾಡ್ತಿದ್ದಿದ್ದು ಕಾಪಿ...! ಇಲ್ಲಿ ನೋಡಿ ಈ ವಿಚಾರದಲ್ಲಿ ಒಂದಕ್ಕೊಂದು ಸಂಬಂಧವೇ ಇಲ್ಲ. ಹೇಳೋದು ಆಚಾರ, ಮಾಡೋದು ಅನಾಚಾರ ಎಂಬ ಕಥೆ ಇಲ್ಲಿ ಸರಿಯಾಗಿಯೇ ಸೂಟ್ ಆಗುತ್ತೆ.
ಕೇರಳದ ಐಜಿಪಿಯೊಬ್ಬರ ನಕಲಿನ ಸಂಬಂಧ ಇಷ್ಟೆಲ್ಲಾ ಹೇಳ್ಬೇಕಾಯ್ತು. ಹಿರಿಯ ಅಂದರೆ ನಿವೃತ್ತಿ ಅಂಚಲ್ಲಿರುವ ಐಪಿಎಸ್ ಅಧಿಕಾರಿಯೊಬ್ಬರು ವಕೀಲಿಕೆ ಮಾಡುವ ಸಲುವಾಗಿ ಎಲ್‍ಎಲ್‍ಬಿ ಮುಗಿಸಿ ಎಲ್ಎಲ್‍ಎಂ ಕಟ್ಟಿದ್ದಾರೆ. ಪಾಪ, ಹೋದ ವರ್ಷ ಕೂಡ ಇದೇ ಪರೀಕ್ಷೆಗೆ ಕಟ್ಟಿ, ಭಾರಿಯಾಗಿಯೇ ಓದಿ ಬರೆದಿದ್ದರಂತೆ. ಆದ್ರೆ ಫೇಲ್ ಆಗೋಗಿದ್ರಂತೆ. ಹೀಗಾಗಿ ಈ ಬಾರಿ ಫೇಲ್ ಆಗೋದೇ ಬೇಡ ಎಂದು ಅಡ್ಡದಾರಿ ಹಿಡಿದಿದ್ದಾರೆ.
ಇದಕ್ಕಾಗಿ ಅವರು ಕಾಪಿ ಚೀಟಿ ಮೊರೆ ಹೋಗಿದ್ದಾರೆ. ಮಹಾತ್ಮ ಗಾಂಧಿ(ಎಮ್ ಜಿ) ವಿಶ್ವವಿದ್ಯಾ ನಿಲಯದ ಎಲ್‍ಎಲ್‍ಎಮ್ ಪರೀಕ್ಷೆಯ ಕ್ರೈಂ-2ನೇ ಪೇಪರ್‍ನ ಪರೀಕ್ಷೆ ಬರೆಯುವ ವೇಳೆ ಈ ಘನಂದಾರಿ ಕೆಲಸ ಮಾಡಿದ್ದಾರೆ. ಕಲಮಸ್ಸೇರಿಯ ಸೈಂಟ್ ಪಾಲ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಜೋಸ್ ಅವರನ್ನು ರೆಡ್‍ಹ್ಯಾಂಡ್ ಆಗಿ ಹಿಡಿದ ಕಂಡ ಪರೀಕ್ಷಾ ಮೇಲ್ವಾಚಾರಕರು ಕೊಠಡಿಯಿಂದ ಹೊರ ಹಾಕಿದ್ದಾರೆ.
Advertisement