ಝಕಿವುರ್ ರೆಹಮಾನ್ ಲಖ್ವಿ
ಝಕಿವುರ್ ರೆಹಮಾನ್ ಲಖ್ವಿ

ಉಗ್ರ ಲಖ್ವಿ ಮುಗ್ಧ: ಜಮಾತ್-ಉದ್-ದಾವಾ ಮುಖ್ಯಸ್ಥ ಹಫೀಜ್ ಹೇಳಿಕೆ

'ಝಕಿವುರ್ ರೆಹಮಾನ್ ಲಖ್ವಿ ವಿರುದ್ದ ಯಾವುದೇ ಆರೋಪ ಇಲ್ಲ. ಮುಂಬೈ ದಾಳಿ ಪ್ರಕರಣದಲ್ಲಿ ಭಾರತ ಸರ್ಕಾರ ಪಾಕ್ ಮೇಲೆ ಗೂಬೆ ಕೂರಿಸುತ್ತಿದೆ...

ಲಾಹೋರ್: 'ಝಕಿವುರ್ ರೆಹಮಾನ್ ಲಖ್ವಿ ವಿರುದ್ದ ಯಾವುದೇ ಆರೋಪ ಇಲ್ಲ. ಮುಂಬೈ ದಾಳಿ ಪ್ರಕರಣದಲ್ಲಿ ಭಾರತ ಸರ್ಕಾರ ಪಾಕ್ ಮೇಲೆ ಗೂಬೆ ಕೂರಿಸುತ್ತಿದೆ.

ಅಮೆರಿಕ ಮತ್ತು ವಿಶ್ವಸಂಸ್ಥೆ ಮೂಲಕ ಒತ್ತಡ ಹೇರುತ್ತಿದೆ' ಹೀಗೆಂದು ಹೇಳಿಕೊಂಡಿದ್ದು ಜಮಾತ್-ಉದ್-ದಾವಾ ಮುಖ್ಯಸ್ಥ ಹಫೀಜ್ ಸಯೀದ್. ಲಾಹೋರ್‍ನಲ್ಲಿ ಆತ, ಮುಂಬೈ ದಾಳಿಗೆ ಪೂರಕವಾಗಿ ಭಾರತ ಬಳಿ ಸಾಕ್ಷ್ಯ ಇಲ್ಲ ಎಂದು ಹೇಳಿಕೊಂಡಿದ್ದಾನೆ. ಟಿವಿ ಚಾನೆಲ್‍ಗೆ ನೀಡಿದ ಸಂದರ್ಶನದಲ್ಲಿ ಆತ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ. ಲಖ್ವಿ ಬಿಡುಗಡೆ ವಿರುದ್ಧ ವಿಶ್ವಸಂಸ್ಥೆಗೆ ಭಾರತ ದೂರು ನೀಡಿದ ಬೆನ್ನಲ್ಲೇ ಸಯೀದ್‍ನಿಂದ ನಿರೀಕ್ಷೆಯಂತೆಯೇ ಈ ಹೇಳಿಕೆ ವ್ಯಕ್ತವಾಗಿದೆ.

ಶೀಘ್ರ ವಿಚಾರಣೆ ನಡೆಯಲಿ: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಸರ್ಕಾರ ಸುಪ್ರೀಂನಲ್ಲಿ ಲಖ್ವಿ ಬಿಡುಗಡೆಗೆ ಸಂಬಂಧಿಸಿದ ಪ್ರಕರಣ ಶೀಘ್ರ ಇತ್ಯರ್ಥವಾಗಲಿ ಎಂದು ಒತ್ತಾಯಿಸಿದೆ. ಲಾಹೋರ್ ಹೈಕೋರ್ಟ್ ಲಖ್ವಿ ಬಂಧನ ರದ್ದುಗೊಳಿಸಿ ನೀಡಿದ್ದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿತ್ತು.

Related Stories

No stories found.

Advertisement

X
Kannada Prabha
www.kannadaprabha.com