
ಮರ್ಯಾದಾ ಪುರುಷ ಶ್ರೀರಾಮ ಹುಟ್ಟಿದ್ದು ಅಯೋಧ್ಯೆಯಲ್ಲಿ ಅಲ್ವಂತೆ. ಶ್ರೀರಾಮ ಜನ್ಮ ಭೂಮಿ ಇರುವುದು ಪಾಕಿಸ್ತಾನದಲ್ಲಂತೆ. ಹೀಗಂತ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಬೋರ್ಡ್ ಸದಸ್ಯ ಅಬ್ದುಲ್ ರಹೀಂ ಖುರೇಶಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹೈದರಾಬಾದ್ ನ ಉರ್ದು ಮಸ್ಕಾನ್ ನಲ್ಲಿ ತಮ್ಮ ಅಯೋಧ್ಯೆ ಕಾ ತನಾಜ್ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು ಶ್ರೀರಾಮ ಹುಟ್ಟಿದ್ದು ಪಾಕಿಸ್ತಾನದ ರಾಮ್ ದೇರಿಯಲ್ಲಿ. ಪಾಕಿಸ್ತಾನ ಭಾರತ ಇಬ್ಭಾಗವಾದ ನಂತರ ರಾಮ್ ದೇರಿಯ ಹೆಸರು ರೆಹಮಾನ್ ದೇರಿ ಆಗಿ ಬದಲಾಯಿತು ಎಂದಿದ್ದಾರೆ.
ನಿಜವಾದ ರಾಮಜನ್ಮ ಭೂಮಿ ಇರುವುದು ಪಾಕಿಸ್ತಾನದಲ್ಲೇ ಹೊರತು ಅಯೋಧ್ಯೆಯಲ್ಲಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಒಂದು ವೇಳೆ ಶ್ರೀರಾಮ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜನ್ಮ ತಾಳಿದ್ದೇ ಆದರೆ ಅಲ್ಲಿ ಯಾವುದಾದರೂ ಕುರುಹುಗಳಿರಬೇಕಿತ್ತು. ಅಯೋಧ್ಯೆಯಲ್ಲಿ ಆ ರೀತಿಯ ಯಾವುದೇ ಕುರುಹುಗಳಿಲ್ಲ ಎಂದು ಹೇಳಿದ್ದಾರೆ.
Advertisement