ದ್ವೇಷ ರಾಜಕಾರಣಕ್ಕೆ ಅಮೇಥಿ ಫುಡ್ ಪಾರ್ಕ್ ಬಲಿ: ರಾಹುಲ್ ಗಾಂಧಿ

ಸುದೀರ್ಘ ವಿದೇಶ ಪ್ರವಾಸದ ನಂತರ ಭಾರತಕ್ಕೆ ವಾಪಸಾಗಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸಮಯ ಸಿಕ್ಕಾಗಲೆಲ್ಲಾ ಕೇಂದ್ರ ಎನ್ ಡಿ ಎ ಸರ್ಕಾರದ ವಿರುದ್ಧ....
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ:  ಸುದೀರ್ಘ ವಿದೇಶ ಪ್ರವಾಸದ ನಂತರ ಭಾರತಕ್ಕೆ ವಾಪಸಾಗಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸಮಯ ಸಿಕ್ಕಾಗಲೆಲ್ಲಾ ಕೇಂದ್ರ ಎನ್ ಡಿ ಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಇಂದು ಸಂಸತ್ ಕಲಾಪದಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, ಎನ್ ಡಿಎ ಸರ್ಕಾರದ ದ್ವೇಷ ರಾಜಕೀಯದಿಂದ ಅಮೇಥಿಯಲ್ಲಿ ಆರಂಭವಾಗಬೇಕಿದ್ದ ಅಮೇಥಿ ಫುಡ್ ಪಾರ್ಕ್ ಬಲಿಯಾಯ್ತು ಎಂದು ಆರೋಪಿಸಿದ್ರು.
ಕಳೆದ ಲೋಕಸಭಾ ಚುನಾವಣೆ ವೇಳೆ ಅಮೇಥಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ 52 ನಿಮಿಷ ಭಾಷಣ ಮಾಡಿದ್ದರು.  ಅಭಿವೃದ್ದಿಗಾಗಿ ಮಾತ್ರ ರಾಜಕೀಯ ಮಾಡಿ ಎಂದು ಭಾಷಣದ ವೇಳೆ ನರೇಂದ್ರ ಮೋದಿ ಹೇಳಿದ್ದರು. ಆವತ್ತಿನ  ಅವರ ಭಾಷಣನಿಂದ ನಾನು ಪ್ರೇರೇಪಿತನಾಗಿದ್ದೆ. ಆದರೆ ಫುಡ್ ಪಾರ್ಕ್ ನಿರ್ಮಾಣ ಸ್ಥಗಿತಗೊಳಿಸಿದ್ದು ಅಭಿವೃದ್ಧಿಗಲ್ಲ, ಸೇಡಿನ ರಾಜಕೀಯಕ್ಕೆ ಎಂದು ರಾಹುಲ್ ಆಪಾದಿಸಿದರು.
ಫುಡ್ ಪಾರ್ಕ್ ನಿರ್ಮಾಣ ನಿಲ್ಲಿಸಿದ್ದರಿಂದ ಆ ಭಾಗದ ರೈತರಿಗೆ ಹೆಚ್ಚಿನ ಅನಾನುಕೂಲವಾಗಿದೆ. ಹೀಗಾಗಿ ರೈತರ ಹಿತದೃಷ್ಟಿಯಿಂದ ಫುಡ್ ಪಾರ್ಕ್ ಮರು ಸ್ಥಾಪನೆ ಮಾಡಬೇಕೆಂದು ಅವರು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಗೃಹ ಸಚಿವ ರಾಜನಾಥ್ ಸಿಂಗ್ ಅಮೇಥಿ ಫುಡ್ ಪಾರ್ಕ್ ವಿಷಯದಲ್ಲಿ ಯಾವುದೇ ರಾಜಕೀಯ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು. ಜೊತೆಗೆ ಸ್ಥಳೀಯ ಎಂಪಿಗೆ ತಿಳಿಸಿ ಈ ಸಂಬಂಧ ಗಮನ ಹರಿಸಲು ತಿಳಿಸುವ ಭರವಸೆ ನೀಡಿದ್ರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com