ಸಲ್ಮಾನ್ ಖಾನ್ ಗೆ ಬಿಗ್ ರಿಲೀಫ್

2002 ರ ಹಿಟ್ ಅಂಡ್ ರನ್ ಕೇಸಿನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಬಿಗ್ ರಿಲೀಫ್ ಸಿಕ್ಕಿದೆ. ಬಾಂಬೆ ಹೈ ಕೋರ್ಟ್ ಸಲ್ಮಾನ್ ಖಾನ್ ಗೆ ಷರತ್ತು ಬದ್ಧ ಜಾಮೀನು ನೀಡಿದೆ.
ಸಲ್ಮಾನ್ ಖಾನ್
ಸಲ್ಮಾನ್ ಖಾನ್

ಮುಂಬಯಿ: 2002 ರ ಹಿಟ್ ಅಂಡ್ ರನ್ ಕೇಸಿನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಬಿಗ್ ರಿಲೀಫ್ ಸಿಕ್ಕಿದೆ. ಬಾಂಬೆ ಹೈ ಕೋರ್ಟ್ ಸಲ್ಲುಗೆ ಷರತ್ತು ಬದ್ದ  ಜಾಮೀನು ನೀಡಿದೆ. ಜೊತೆಗೆ ಮುಂಬಯಿ ಸೆಷನ್ಸ್ ಕೋರ್ಟ್ ನೀಡಿದ್ದ 5 ವರ್ಷಗಳ ಕಠಿಣ ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟಿದೆ. ಯಾವುದೇ ಕಾರಣಕ್ಕೂ ಸಲ್ಮಾನ್ ಖಾನ್ ರನ್ನು ಬಂಧಿಸುವಂತಿಲ್ಲ ಎಂದು ಆದೇಶಿಸಿದೆ.

2002 ರ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಐದು ವರ್ಷ ಶಿಕ್ಷೆಗೆ ಗುರಿಯಾಗಿರುವ  ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಜಾಮೀನು ಅರ್ಜಿ ವಿಚಾರಣೆ ಬಾಂಬೆ ಹೈ ಕೋರ್ಟ್ ನಲ್ಲಿ ನ್ಯಾ. ಅಭಯ್ ಥಿಪ್ಸೆ ಪೀಠದಲ್ಲಿ  ನಡೆಯಿತು.

ನ್ಯಾಯಮೂರ್ತಿ ಅಭಯ್ ಥಿಪ್ಸೆ ಸಲ್ಮಾನ್ ಖಾನ್ ಗೆಳೆಯ ಕಮeಲ್ ಖಾನ್ ವಿಚಾರಣೆ ನಡೆಸಲಿಲ್ಲವೇಕೆ ಎಂದು ಪ್ರಶ್ನಿಸಿದ್ರು. ಇನ್ನು ಇದಕ್ಕೆ ಉತ್ತರಿಸಿದ ಶಿಂಧೆ ಕಮಾಲ್ ಖಾನ್ ಬ್ರಿಟನ್ ನಲ್ಲಿದ್ದು ಅವರು, ಬ್ರಿಟನ್ ನಾಗರಿಕರಾಗಿದ್ದಾರೆ. ಹೀಗಾಗಿ ಅವರ ವಿಚಾರಣೆ ನಡೆಸಲಾಗಲಿಲ್ಲ ಎಂದು ವಿವರಿಸಿದರು. ಇನ್ನು ಸಲ್ಮಾನ್ ಖಾನ್ ಪರ ವಕೀಲ ಅಮಿತ್ ದೇಸಾಯಿ, ಕಾರಿನ ಟೈರ್ ಸಿಡಿದಿದ್ದರಿಂದ ಕಾರು ಫುಟ್ ಪಾತ್ ಮೇಲೆ ಚಲಿಸಿತು ಎಂಬ ಹೊಸ ವಾದ ಮಂಡಿಸಿದರು.
ಇಂದು ಮಧ್ಯಾಹ್ನ ಮುಂಬೈ ಸೆಷನ್ಸ್ ಕೋರ್ಟ್ ಗೆ ಶರಣಾಗಿ ಜಾಮೀನಿನ ಷರತ್ತುಗಳನ್ನು ಈಡೇರಿಸಿ, ಬೇಲ್ ಪಡೆಯುವ ಸಾಧ್ಯತೆ ಇದೆ.

ಕೋರ್ಟ್ ಸಲ್ಮಾನ್ ಗೆ ವಿಧಿಸಿರೋ ಷರತ್ತುಗಳೇನು?
* ಖುದ್ದು ಕೋರ್ಟ್ ಗೆ ಹಾಜರಾಗಬೇಕು
* ಪಾಸ್ ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕು
* ವಿದೇಶಕ್ಕೆ ತೆರಳುವಾಗ ಅನುಮತಿ ಪಡೆಯಲು ಸೂಚನೆ
* 30 ಸಾವಿರ ರೂಪಾಯಿ ಬಾಂಡ್ ನೀಡಬೇಕು
* ಹೊಸದಾಗಿ ಶ್ಯೂರಿಟಿ ನೀಡಿ ಜಾಮೀನು ಪಡೆಯಬೇಕು


ಇನ್ನೂ ಸಲ್ಮಾನ್ ಖಾನ್ ಗೆ ಜಾಮೀನು ಸಿಕ್ಕಿದ್ದರಿಂದ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದ್ದಾರೆ. ಮುಂಬೈನ ಗ್ಯಾಲಕ್ಸಿ ಅಪಾರ್ಟ್ ಮೆಂಟ್ ನಲ್ಲಿ ಸಲ್ಮಾನ್ ಅಭಿಮಾನಿಗಳ ಸಂಭ್ರಮ ಸಡಗರ ಮುಗಿಲು ಮುಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com