
ಪಟ್ನಾ: ಜೆಡಿ(ಯು) ಪಕ್ಷದಿಂದ ಉಚ್ಛಾಟನೆಗೊಂಡಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರು ಹೊಸ ಪಕ್ಷ ಹಿಂದೂಸ್ತಾನ್ ಅವಾಮಿ ಮೋರ್ಚಾಗೆ(ಎಚ್‌ಎಎಂ) ಶುಕ್ರವಾರ ಔಪಚಾರಿಕವಾಗಿ ಚಾಲನೆ ನೀಡಿದ್ದಾರೆ.
ಎಚ್‌ಎಎಂ ನಾಯಕ ಶಕುನಿ ಚೌಧರಿ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಿಸಲಾಗಿದ್ದು, ಮುಂಬರುವ ವಿಧಾನಸಭೆ ಚುನಾವಣೆಯ 243 ಸ್ಥಾನಗಳಲ್ಲೂ ಪಕ್ಷ ಸ್ಪರ್ಧಿಸಲಿದೆ ಎಂದು ಜಿತನ್ ರಾಮ್ ಮಾಂಝಿ ತಿಳಿಸಿದ್ದಾರೆ.
ನೂತನ ಪಕ್ಷಕ್ಕೆ ‘ಮೇ 10ರಂದು ಚಾಲನೆ ನೀಡಬೇಕಿತ್ತು. ಆದರೆ ಮುಂದಿನ ಎರಡು ದಿನಗಳು ನಾನು ಪಟ್ನಾದಲ್ಲಿ ಇರುವುದಿಲ್ಲ ಹಾಗಾಗಿ ಔಪಚಾರಿಕವಾಗಿಹೊಸ ಪಕ್ಷಕ್ಕೆ ಚಾಲನೆ ನೀಡಲಾಗಿದೆ’ ಎಂದು ಮಾಂಝಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಚುನಾವಣಾ ಆಯೋಗದಲ್ಲಿ ಹೊಸ ಪಕ್ಷ ನೋಂದಣಿ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ. ‘ಎಚ್‌ಎಎಂ ರಾಜಕೀಯ ಪಕ್ಷವಾಗಿ ನೋಂದಣಿ ಆದ ಬಳಿಕ ಮುನ್ನೆಲೆಗೆ ಬರಲಿದೆ’ ಎಂದು ಅವರು ಹೇಳಿದ್ದಾರೆ.
Advertisement