
ರಾಯಪುರ: ಪ್ರಧಾನಿ ನರೇಂದ್ರ ಮೋದಿ ಅವರು ನಕ್ಸಲ್ ಪೀಡಿತ ಪ್ರದೇಶ ದಂತೆವಾಡ ಜಿಲ್ಲೆಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಛತ್ತೀಸ್‌ಗಢದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದು, 5 ಕಿ.ಮೀ. ರೈಲ್ವೆ ಮಾರ್ಗ ಸ್ಫೋಟಿಸಿದ್ದಾರೆ. ಮತ್ತೊಂದಡೆ 500 ಗ್ರಾಮಸ್ಥರನ್ನು ಒತ್ತೆಯಾಳಾಗಿರಿಸಿಕೊಂಡಿದ್ದಾರೆ.
ದಂತೆವಾಡ ಜಿಲ್ಲೆಯ ಕಿರಂದೂಲ್ ಸಮೀಪ ಸುಮಾರು 5 ಕಿ.ಮೀ ರೈಲ್ವೆ ಮಾರ್ಗವನ್ನು ನಕ್ಸಲರು ಸ್ಫೋಟಿಸಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಅವರ ರ್ಯಾಲಿಗೆ ತೆರಳುತ್ತಿದ್ದ ಸುಕ್ಮಾ ಜಿಲ್ಲೆಯ ಮರೇಂಗಾದ 500 ಗ್ರಾಮಸ್ಥರನ್ನು ಒತ್ತೆಯಾಳಾಗಿರಿಸಿಕೊಂಡಿದ್ದಾರೆ.
ದಂತೆವಾಡಾದಲ್ಲಿ ವಿವಿಧ ಅಭಿೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಇಂದು ಛತ್ತೀಸ್ ಗಢಕ್ಕೆ ಭೇಟಿ ನೀಡಿದ್ದು, ಕಾರ್ಯಕ್ರಮಕ್ಕೆ ಆಗಮಸುತ್ತಿದ್ದ 500ಕ್ಕೂ ಅಧಿಕ ಗ್ರಾಮಸ್ಥರನ್ನು ಒತ್ತೆಯಾಳುಗಳನ್ನಾಗಿರಿಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದೇ ವೇಳೆ ಮೋದಿ ಅವರು ಅಲ್ಟ್ರಾ ಮೆಗಾ ಉಕ್ಕು ಘಟಕ ಮತ್ತು ರಾವ್‌ಘಾಟ್-ಜಗದಲ್‌ಪುರ ರೈಲ್ವೆ ಮಾರ್ಗದ ಎರಡನೇ ಹಂತವನ್ನೂ ಉದ್ಘಾಟಿಸಲಿದ್ದಾರೆ.
Advertisement