ಸಿಂಹ ಪ್ರಮಾಣ 27% ಹೆಚ್ಚಳ

ಹುಲಿಗಳ ಸಂಖ್ಯೆ ಹೆಚ್ಚಿದಂತೆ ಈಗ ಸಿಂಹಗಳ ಸಂಖ್ಯೆಯೂ ಹೆಚ್ಚಿದೆ. ದೇಶದ ಏಕೈಕ ಸಿಂಹ ಧಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗುಜರಾತ್‍ನ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಗಿರ್ (ಗುಜರಾತ್): ಹುಲಿಗಳ ಸಂಖ್ಯೆ ಹೆಚ್ಚಿದಂತೆ ಈಗ ಸಿಂಹಗಳ ಸಂಖ್ಯೆಯೂ ಹೆಚ್ಚಿದೆ. ದೇಶದ ಏಕೈಕ ಸಿಂಹ ಧಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗುಜರಾತ್‍ನ ಗಿರ್‍ನಲ್ಲಿ ಸಂಭ್ರಮದ ವಾತಾವರಣ. ಏಷ್ಯಾದ ಸಿಂಹಗಳ ಸಂಖ್ಯೆ 2010ಕ್ಕೆ ಹೋಲಿಕೆ ಮಾಡಿದರೆ 411 ರಿಂದ 523ಕ್ಕೆ ಏರಿಕೆಯಾಗಿದೆ. ಇತ್ತೀಚೆಗೆ ನಡೆದಿದ್ದ ಗಣತಿಯ ವಿವರದ ಮಾಹಿತಿಯನ್ನು ಗುಜರಾತ್ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಭಾನುವಾರ ಬಿಡುಗಡೆ ಮಾಡಿದ್ದಾರೆ.

ಗಣತಿಯಿಂದ ಗೊತ್ತಾಗಿದ್ದು
- ಏಷ್ಯಾ ವಲಯದ ಸಿಂಹಗಳ ಪ್ರಮಾಣ ಶೇ.27ಕ್ಕೆ ಹೆಚ್ಚಳ
- ಈ ಹಿಂದೆ ಸಮೀಕ್ಷೆ ನಡೆದ್ದು 2010ರಲ್ಲಿ
- 109 ಗಂಡು ಸಿಂಹಗಳು, 201 ಹೆಣ್ಣು ಸಿಂಹಗಳು, 213 ಮರಿ ಸಿಂಹಗಳು, ಕೊಂಚ ದೊಡ್ಡ ವಯಸ್ಸಿನ ಸಿಂಹಗಳು
- ಜುನಾಗಡ ವಲಯದಲ್ಲಿ ಕಂಡು ಬಂದದ್ದು 268
- ಗಿರ್-ಸೋಮನಾಥ ವಲಯದಲ್ಲಿ 44 ಏಷ್ಯಾಟಿಕ್ ಸಿಂಹ ಕಂಡು ಬರುವ ಪ್ರದೇಶಗಳು
- ಸಿರಿಯಾ, ಇರಾನ್, ಏಷ್ಯಾದ ಕೇಂದ್ರ ಪ್ರದೇಶ. ಆದರೆ ಈ ತಳಿಗೆ ಸೇರಿದ ಸಿಂಹ ಇರುವುದು ಗಿರ್‍ನಲ್ಲಿ ಮಾತ್ರ
- ಮೊದಲು ಸಿಂಹ ಗಣತಿ ನಡೆದ ವರ್ಷ- 1975
- ಆ ವರ್ಷ ಲೆಕ್ಕಕ್ಕೆ ಸಿಕ್ಕಿದ್ದ ಸಿಂಹಗಳು-177
- ನಂತರದ ಗಣತಿ ವರ್ಷ- 1990, 2001 ಮತ್ತು 2010
- ಅಮ್ರೇಲಿಯಲ್ಲಿ 174
- ಭಾವಾನಗರ 37
- ಏಷ್ಯಾ ವಲಯದ ಸಿಂಹಗಳು ಅಳಿವಿನ ಅಂಚಿನಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com