
ಕಠ್ಮಂಡು: ಭಾರತೀಯ ಸೇನೆಯ ಸಹಾಯ ಬೇಕು ಎಂದು ನೇಪಾಳ ಕೇಳಿದರೆ ಮಾತ್ರ ಅಲ್ಲಿಗೆ ಸೇನೆಯನ್ನು ಕಳುಹಿಸಲಾಗುವುದು ಎಂದು ಭಾರತದ ಗೃಹ ಸಚಿವಾಲಯ ಹೇಳಿದೆ.
ಭೂಕಂಪದಿಂದ ನಲುಗಿರುವ ನೇಪಾಳಕ್ಕೆ ರಕ್ಷಣಾ ಪಡೆ ಕಳುಹಿಸುವುದರ ಬಗ್ಗೆ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಪ್ರಧಾನಿಯವರ ಕಚೇರಿಯ ಅಧಿಕಾರಿ, ಸಚಿವ ಸಂಪುಟದ ಕಾರ್ಯದರ್ಶಿಯವರೊಂದಿಗೆ ಮೂರು ಸಭೆಗಳನ್ನು ನಡೆಸಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್) ಮತ್ತು ಭಾರತೀಯ ವಾಯುಸೇನೆ (ಐಎಎಫ್) ನ್ನು ನೇಪಾಳಕ್ಕೆ ಕಳುಹಿಸಲು ಸನ್ನ ದ್ಧವಾಗಿದೆ.
ಈಗಾಗಲೇ ಎನ್‌ಡಿಆರ್‌ಎಫ್ ಮತ್ತು ಐಎಎಫ್ ನೇಪಾಳದ ಕರೆ ಬಂದರೆ ಅಲ್ಲಿಗೆ ಹೋಗಲು ಸಿದ್ಧವಾಗಿದೆ. ಅವರ ಉತ್ತರದ ನಿರೀಕ್ಷೆಯಲ್ಲಿ ನಾವಿದ್ದೇವೆ. ನೇಪಾಳದಲ್ಲಿರುವ ಭಾರತೀಯ ರಾಯಭಾರಿ ಅಥವಾ ದೆಹಲಿಯಲ್ಲಿರುವ ನೇಪಾಳದ ರಾಯಭಾರಿಯಿಂದ ನಮಗೆ ಕರೆ ಬಂದರೆ ರಕ್ಷಣಾ ಪಡೆಗಳನ್ನು ಕಳುಹಿಸಲಾಗುವುದು. ಅವರ ಕೆಲಸದಲ್ಲಿ ಮಧ್ಯ ಪ್ರವೇಶಿಸಲು ನಮಗೆ ಇಷ್ಟವಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಏಪ್ರಿಲ್ 25ರಂದು ನೇಪಾಳದಲ್ಲಿ ಭೂಕಂಪ ಸಂಭವಿಸಿ 10 ದಿನಗಳ ನಂತರ ನೇಪಾಳ, ಭಾರತ ಸೇರಿದಂತೆ ಇತರ ರಾಷ್ಟ್ರಗಳ ರಕ್ಷಣಾ ಪಡೆಗಳು ತಮ್ಮ ದೇಶದಿಂದ ಹೊರಹೋಗುವಂತೆ ಸೂಚಿಸಿದ್ದವು.
Advertisement