
ನವದೆಹಲಿ: ಪ್ರತಿಪಕ್ಷಗಳ ತೀವ್ರ ವಿರೋಧ ಹಾಗೂ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅನಿವಾರ್ಯವಾಗಿ ಭೂಸ್ವಾಧೀನ ವಿಧೇಯಕವನ್ನು ಸಂಸತ್ತಿನ ಜಂಟಿ ಸಮಿತಿ ಪರಿಶೀಲನೆಗೆ ಒಪ್ಪಿಸಿದ್ದು, ಇಂದು ಈ ಸಮಿತಿಗೆ ರಾಜ್ಯಸಭೆಯಿಂದ 10 ಸದಸ್ಯರನ್ನು ಆಯ್ಕೆ ಮಾಡಲಾಗಿದೆ.
ಬಿಜೆಪಿಯಿಂದ ಪ್ರಭಾತ್ ಜಾ ಮತ್ತು ರಾಮ್ ನರೇನ್ ದುದಿ, ಕಾಂಗ್ರೆಸ್‌ನಿಂದ ದಿಗ್ವಿಜಯ್ ಸಿಂಗ್, ಜೈರಾಮ್ ರಮೇಶ್ ಮತ್ತು ಪಿ.ಎಲ್.ಪುನಿಯಾ, ಸಮಾಜವಾದಿ ಪಕ್ಷದಿಂದ ರಾಮ್ ಗೋಪಾಲ್ ಯಾದವ್, ಜೆಡಿಯುನಿಂದ ಶರದ್ ಯಾದವ್, ತೃಣಮೂಲ ಕಾಂಗ್ರೆಸ್‌ನಿಂದ ಡೆರೆಕ್ ಒಬ್ರೇನ್, ಬಿಎಸ್‌ಪಿಯಿಂದ ರಾಜಪಾಲ್ ಸಿಂಗ್ ಸೈನಿ ಮತ್ತು ಎನ್‌ಸಿಪಿಯಿಂದ ಶರದ್ ಪವಾರ್ ಅವರನ್ನು ಸಂಸತ್ತಿನ ಜಂಟಿ ಸಮಿತಿಗೆ ಆಯ್ಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಸ್ವಾಧೀನ ವಿಧೇಯಕ ಸಂಬಂಧ ನಿನ್ನೆ ಲೋಕಸಭೆ 30 ಸದಸ್ಯರ ಜಂಟಿ ಸಮಿತಿ ರಚಿಸಿತ್ತು. ಲೋಕಸಭೆ ಮತ್ತು ರಾಜ್ಯಸಭೆ ಜಂಟಿ ಸಮಿತಿ ಈ ವಿಧೇಯಕವನ್ನು ಪರಿಶೀಲಿಸಿ ಮುಂಗಾರು ಅಧಿವೇಶನದ ಮೊದಲ ದಿನ ತನ್ನ ವರದಿ ಸಲ್ಲಿಸಲಿದೆ.
Advertisement