
ಪಾಣಿಪತ್: ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಮಗ ನಾರಾಯಣ್ ಸಾಯಿ ವಿರುದ್ಧದ ರೇಪ್ ಕೇಸ್ ನ ಮತ್ತೊಬ್ಬ ಸಾಕ್ಷಿದಾರನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ.
ಹರ್ಯಾಣದ ಪಾಣಿಪತ್ ನ ಸನೌಲಿ ಗ್ರಾಮದ ಮಹೇಂದ್ರ ಚಾವ್ಲಾ ಎಂಬಾತನನ್ನು ಅಪರಿಚಿತ ದುಶ್ಕರ್ಮಿಗಳು ಶೂಟ್ ಮಾಡಿ ಪರಾರಿಯಾಗಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ರೋಹ್ಟಕ್ ಐಜಿಪಿ ಶ್ರೀಕಾಂತ್ ಜಾದವ್ ತಿಳಿಸಿದ್ದಾರೆ.
ಮಹೇಂದ್ರ ಚಾವ್ಲಾ 2001 ರಿಂದ 2005 ರವರೆಗೆ ಅಸಾರಾಂ ಬಾಪು ಬಳಿ ಪಿಎ ಆಗಿ ಕೆಲಸ ಮಾಡುತ್ತಿದ್ದರು. ಸೂರತ್ ನ ಇಬ್ಬರು ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದರು. ತನ್ನ ಜೀವಕ್ಕೆ ಬೆದರಿಕೆ ಇದ್ದು ತನಗೆ ಸೂಕ್ತ ರಕ್ಷಣೆ ನೀಡುವಂತೆ ಮಹೇಂದ್ರ ಚಾವ್ಲಾ ಪೊಲೀಸರ ಬಳಿ ಮನವಿ ಮಾಡಿದ್ದಾರೆ.
ರಾಜಸ್ತಾನದ ಅಶ್ರಮದಲ್ಲಿ ಶಾಲಾ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 2013ರ ಆಗಸ್ಟ್ ನಿಂದ ಅಸಾರಾಂ ಬಾಪು ಜೈಲಿನಲ್ಲಿದ್ದಾರೆ.
ಅಸಾರಾಂ ಬಾಪು ವಿರುಧ್ದ ರೇಪ್ ಕೇಸ್ ಸಂಬಂಧ ಜನವರಿಯಲ್ಲಿ ಉತ್ತರ ಪ್ರದೇಶದಲ್ಲಿ ಸಾಕ್ಷಿದಾರ ಅಖಿಲ್ ಗುಪ್ಚಾ ನ ಕೊಲೆಯಾಗಿತ್ತು. ಕಳೆದ ವರ್ಷ ಗುಜರಾತ್ ನಲ್ಲಿ ಅಮೃತಾ ಪ್ರಜಾಪತಿ ಎಂಬ ಮತ್ತೊಬ್ಬ ಸಾಕ್ಷಿದಾರನ ಕೊಲೆಯಾಗಿತ್ತು. ಇನ್ನುಳಿದ ಮೂವರು ಗುಂಡಿನ ದಾಳಿಯಿಂದ ಚೇತರಿಸಿಕೊಳ್ಳುತ್ತಿದ್ದಾರೆ.
ಅಸಾರಾಂ ಬಾಪು ಹಾಗೂ ಆತನ ಮಗ ನಾರಾಯಣ್ ಸಾಯಿ ವಿರುದ್ಧದ ಅತ್ಯಾಚಾರ ಪ್ರಕರಣ ಸಂಬಂಧ ಇದುವರೆಗೂ ಆರು ಮಂದಿ ಸಾಕ್ಷಿದಾರರ ಮೇಲೆ ಹಲ್ಲೆ ನಡೆದಿದೆ.
ಇನ್ನು ಆರೋಪಿಗಾಗಿ ಶೋಧ ನಡೆಸುತ್ತಿದ್ದು ಶೀಘ್ರವೇ ಆತನನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸೂರತ್ ನ ಆಶ್ರಮದಲ್ಲಿ ಅಸಾರಾಂ ಬಾಪು ಮಗ ನಾರಾಯಣ್ ಸಾಯಿ 2002ರಿಂದ 2005 ರ ವರೆಗೆ ತನ್ನ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದಾಗಿ ಮಹಿಳೆಯೊಬ್ಬರು ದೂರು ದಾಖಲಿಸಿದ್ದರು.
ಇನ್ನು ಈ ಸಂಬಂಧ ಆಸಾರಾಂ ಬಾಪು ಬಳಿ ಕೇಳಿದರೇ ಪ್ರತಿ ದಾಳಿಯ ಹಿಂದೆ ತನ್ನ ಕೈವಾಡವಿರುದಾಗಿ ಒಪ್ಪಿಕೊಂಡಿದ್ದಾನೆ.
Advertisement