ಜಗತ್ತಿನಲ್ಲಿ 100 ಕೋಟಿಗೂ ಮೀರಿದ ಸ್ಮೋಕರ್ಸ್ ಸಂಖ್ಯೆ

ಹೊಸ ಸಮೀಕ್ಷೆಯೊಂದರ ಪ್ರಕಾರ ವಿಶ್ವಾದ್ಯಂತ ಧೂಮಪಾನಿಗಳ ಸಂಖ್ಯೆ ಗಣನೀಯವಾಗಿ ಏರುತ್ತಿದ್ದು, ಜಗತ್ತಿನಲ್ಲಿ 100 ಕೋಟಿಗೂ ಹೆಚ್ಚು ಧೂಮಪಾನಿಗಳಿದ್ದಾರೆ ಎಂಬ ಅಂಕಿಅಂಶಗಳು ಹೊರಬಿದ್ದಿವೆ...
ಧೂಮಪಾನಿಗಳು
ಧೂಮಪಾನಿಗಳು
Updated on

ನವದೆಹಲಿ: ಹೊಸ ಸಮೀಕ್ಷೆಯೊಂದರ ಪ್ರಕಾರ ವಿಶ್ವಾದ್ಯಂತ ಧೂಮಪಾನಿಗಳ ಸಂಖ್ಯೆ ಗಣನೀಯವಾಗಿ ಏರುತ್ತಿದ್ದು, ಜಗತ್ತಿನಲ್ಲಿ 100 ಕೋಟಿಗೂ ಹೆಚ್ಚು ಧೂಮಪಾನಿಗಳಿದ್ದಾರೆ ಎಂಬ ಅಂಕಿಅಂಶಗಳು ಹೊರಬಿದ್ದಿವೆ.

ಇದೇ ಅಲ್ಲದೇ, ಧೂಮಪಾನಿಗಳಂತೆ ವಿಶ್ವದಲ್ಲಿ 24 ಕೋಟಿಗೂ ಹೆಚ್ಚು ಜನರು ಮದ್ಯವ್ಯಸನಿಗಳಾಗಿದ್ದಾರೆ ಎಂದು ಆಸ್ಟ್ರೇಲಿಯಾದ ಸಮೀಕ್ಷೆಯೊಂದು ಹೇಳಿದೆ.

ಸಮೀಕ್ಷೆಯಂತೆ, ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಶೇ. 20ರಷ್ಟು ಮಂದಿ ಧೂಮಪಾನಿಗಳಿದ್ದಾರೆ. ಶೇ.5ರಷ್ಟು ಮಂದಿ ಮದ್ಯಪಾನಿಗಳಿದ್ದಾರೆ. ನಿಷೇಧಿತ ಮಾದಕ ಡ್ರಗ್ಸ್ ಗಳನ್ನು ಬಳಸುವ ಸಂಖ್ಯೆ 1.5 ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ. ನಿಷೇಧಿತ ಡ್ರಗ್ಸ್ ಗಳಿಂದ ಸಾಯುವವರ ಸಂಖ್ಯೆ ಪ್ರತೀ ಲಕ್ಷಕ್ಕೆ 83 ಮಂದಿ. ಆದರೆ, ಮದ್ಯಪಾನದಿಂದ ಮೃತಪಡುವವರ ಸಂಖ್ಯೆ 257 ಇದೆ.

ಆಸ್ಟ್ರೇಲಿಯಾದ ಜಾಗತಿಕ ವ್ಯಸನಿಗಳ ಅಂಕಿಅಂಶದ ವರದಿಯಲ್ಲಿ (Global Statistics on Addictive Behaviours: 2014 Status Report) ಈ ಎಲ್ಲಾ ವಿಷಯಗಳನ್ನ ಸವಿಸ್ತಾರವಾಗಿ ನೀಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com