ಕಪ್ಪು ಹಣ ಮಸೂದೆ ಅಸ್ತು

ಜನ ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ, ಮೋದಿ ಸರ್ಕಾರದ ಮಹತ್ವದ ಹೆಜ್ಜೆ ಗಳಲೊಂದಾದ ಕಪ್ಪು ಹಣ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾಗಿದೆ. ಬಜೆಟ್ ...
ಕಪ್ಪು ಹಣ
ಕಪ್ಪು ಹಣ

ನವದೆಹಲಿ: ಜನ ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ, ಮೋದಿ ಸರ್ಕಾರದ ಮಹತ್ವದ ಹೆಜ್ಜೆ ಗಳಲೊಂದಾದ ಕಪ್ಪು ಹಣ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾಗಿದೆ. ಬಜೆಟ್ ಅಧಿ ವೇಶನದ ಕೊನೆಯ ದಿನವಾದ ಬುಧವಾರ ಕಾಂಗ್ರೆಸ್‍ನ ಪ್ರಬಲ ವಿರೋಧದ ನಡುವೆಯೂ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕೃತವಾಗುವಲ್ಲಿ ಸಫಲವಾಯಿತು. ಮಸೂದೆಯನ್ನು ಈಗ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಅಂಕಿತಕ್ಕಾಗಿ ಕಳಿಸಲಾಗಿದೆ.
ಅಂಗೀಕೃತ ಮಸೂದೆಯ ಪ್ರಕಾರ ಆಸ್ತಿ ಮತ್ತು ಆದಾಯವನ್ನು ರಹಸ್ಯವಾಗಿಡುವವರಿಗೆ ಹಾಗೂ ತೆರಿಗೆಯಿಂದ ತಪ್ಪಿಸಿಕೊಳ್ಳಲು ವಿದೇಶಿ ಬ್ಯಾಂಕ್ ಗಳಲ್ಲಿ ಹಣ ಬಚ್ಚಿಡುವವರಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ ವಿಧಿಸಬಹುದಾಗಿದೆ. ಅಲ್ಲದೆ ಅಪರಾಧಿಗಳು ರಹಸ್ಯವಾಗಿಟ್ಟಿರುವ ಆದಾಯ ಮತ್ತು ಆಸ್ತಿಗಳ ಮೇಲೆ ಶೇ300ರಷ್ಟು ತೆರಿಗೆಯನ್ನು ದಂಡದ ರೂಪದಲ್ಲಿ ವಿಧಿಸಬಹುದಾಗಿದೆ.

ಕೇಂದ್ರ ಸಂಪುಟ ಒಪ್ಪಿಗೆ
: ದೇಶದೊಳಗೆ ಹರಿದಾಡುತ್ತಿರುವ ಕಪ್ಪುಹಣದ ವಹಿವಾಟು ತಡೆಯುವ ನಿಟ್ಟಿನಲ್ಲಿ ತಯಾರಿಸಿರುವ ಬೇನಾಮಿ ವಹಿವಾಟು ತಡೆ ಮಸೂದೆಗೂ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಸೋಮವಾರದಂದು ಲೋಕಸಭೆಯಲ್ಲಿ ಮಸೂದೆ ಪ್ರಸ್ತುತ ಪಡಿಸಿದ್ದ ಸಚಿವ ಅರುಣ್ ಜೇಟ್ಲಿ ಅದೇ ದಿನ ಅಂಗೀಕಾರ ಪಡೆಯುವಲ್ಲಿ ಯಶಸ್ವಿಯಾಗಿ ದ್ದರು. ಮಸೂದೆಯನ್ನು ಸ್ಥಾಯಿ ಸಮಿತಿಯೆದುರು ಇಡಬೇಕೆಂದು ಹಠ ಹಿಡಿದ ಕಾಂಗ್ರೆಸ್‍ನ ಮಾತಿಗೆ ತಿರುಗೇಟು ನೀಡಿದ ಜೇಟ್ಲಿ `ಕಳೆದ ಹನ್ನೊಂದು ತಿಂಗಳುಗಳಿಂದ ನೆನೆಗುದಿಗೆ ಬಿದ್ದಂತಾಗಿತ್ತು. ಆಗಲೂ ಟೀಕಿಸಿದ್ದಿರಿ. ಈಗ ಮಸೂದೆ ಅಂಗೀಕೃತ ವಾಗುವ ಹೊತ್ತಿನಲ್ಲಿ ಸ್ಥಾಯಿ ಸಮಿತಿಯ ಮುಂದಿ ಡಲು ಕೇಳಿ ವಿಳಂಬಕ್ಕೆ ಕಾರಣವಾಗುತ್ತಿದ್ದೀರಿ. ಹಠ ಬಿಟ್ಟು ಮಸೂದೆಯನ್ನು ಬೆಂಬಲಿಸಿ' ಎಂದು ಕೇಳಿಕೊಂಡರು. ವಿದೇಶಗಳಲ್ಲಿ ಬಚ್ಚಿಟ್ಟ ಹಣ ತರುವವರಿಗೆ ವಿಶೇಷ ಅವಕಾಶ ಒದಗಿಸಿರುವ ಸರ್ಕಾರ, ಹಾಗೆ ತಂದ ಹಣಕ್ಕೆ ಶೇ30 ತೆರಿಗೆ ಹಾಗೂ ಶೇ30 ದಂಡ ವಿಧಿಸಲು ನಿರ್ಧರಿಸಿದೆ.
ಇದೇ ವೇಳೆ, ಸಂಸತ್‍ನ ಬಜೆಟ್ ಅಧಿವೇಶನ ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಯಿತು.

ಸರ್ಕಾರವೇನು ಹೇಳಿತ್ತು?
ಜಾಹೀರಾತುಗಳಿಗೆ ನಿಯಂತ್ರಣ ಹೇರಲು ಮಾರ್ಗಸೂಚಿ ರಚಿಸಬೇಕು ಎಂಬ ಸುಪ್ರೀಂ ಸಲಹೆಗೆ ಕೇಂದ್ರ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಫೆ. 17ರಂದು ಈ ಬಗ್ಗೆ ಸುಪ್ರೀಂನಲ್ಲಿ ಮಾತನಾಡಿದ್ದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ, ಸರ್ಕಾರವು ಸಾರ್ವಜನಿಕರಲ್ಲಿ ಹೇಗೆ ಸಂವಹನ ನಡೆಸಬೇಕು ಎಂಬುದರಲ್ಲಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡಬಾರದು. ಈ ಎಲ್ಲ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ವನ್ನು ಸರ್ಕಾರಕ್ಕೆ ಬಿಟ್ಟುಬಿಡಬೇಕು. ಇದು ನ್ಯಾಯಾಲಯಗಳ ವ್ಯಾಪ್ತಿಗೆ ಬರುವುದಿಲ್ಲ ಎಂದು ವಾದಿಸಿದ್ದರು. ಗದ್ದಲ ಮಾಡಬೇಡಿ ನಿಮ್ಮಷ್ಟೇ ನೀವು ಮಾತನಾಡುವುದಾದರೆ ದಯವಿಟ್ಟು ಹೊರಗೆ ಹೋಗಿ. ಆಡಳಿತ ಪಕ್ಷದ ಸದಸ್ಯರ ಬದಿ ಯಿಂದಲೇ ನನಗೆ ಗದ್ದಲ ಕೇಳಿ ಬರುತ್ತಿದೆ. ಹೀಗೆಂದು ಗದರಿದ್ದು ಉಪ ಸ್ಪೀಕರ್ ಎಮ್. ತಂಬಿದುರೈ.
ಲೋಕಸಭೆ ಕಲಾಪದಲ್ಲಿ ವರ್ಗಾವಣೆಯ ಲಿಖಿತಗಳ ಅಧಿನಿಯಮ ತಿದ್ದುಪಡಿಯ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದ್ದ ವೇಳೆ ಪಿಸುಗುಟ್ಟಿಕೊಂಡು ಹರಟೆ ನಡೆಸುತ್ತಿದ್ದ ಸದಸ್ಯರಿಗೆ ಉಪ ಸ್ಪೀಕರ್ ಎಚ್ಚರಿಕೆ ನೀಡಿದ್ದಾರೆ. ಚರ್ಚೆಯ ವೇಳೆ ಮೌನದಿಂದಿರುವಂತೆ ಹಿರಿಯ ಲೋಕಸಭಾ ಸದಸ್ಯರು ಆದೇಶಿಸಿದ್ದರು. ಗದ್ದಲ ಮಾಡುತ್ತಿರುವುದು ಬಿಜೆಪಿ ಸದಸ್ಯರು ಎಂದು
ಕಾಂಗ್ರೆಸ್ ಸದಸ್ಯರು ಆರೋಪಿಸಿದ್ದರು. ಹಿಂಭಾಗ ದಲ್ಲಿ ಕುಳಿತಿದ್ದ ಬಿಜೆಪಿ ಸದಸ್ಯರು ಮುಖ್ಯವಾಗಿ ಮಹಿಳಾ ಸದಸ್ಯರು ಮಾತುಕತೆಯಲ್ಲಿ ತಲ್ಲೀನರಾಗಿ ರುವುದು ಕಂಡುಬಂದಿತ್ತು.
ಕಪ್ಪು ಹಣ ಪದಕ್ಕೆ ಆಕ್ಷೇಪ - ಮಸೂದೆ ಅಂಗೀಕೃತವಾಗುವ ಮುನ್ನ `ಕಪ್ಪು ಹಣ' ಎಂಬ ಪದಪ್ರಯೋಗದ ಬಗ್ಗೆ ರಾಜ್ಯಸಭಾ ಸದಸ್ಯರಿಂದ ಭಾರಿ ವಿರೋಧ ವ್ಯಕ್ತವಾಯಿತು. ಲೆಕ್ಕ ತೋರಿಸದ ಮೋಸದ ಹಣವನ್ನು ಕಪ್ಪು ಹಣ ಎನ್ನುವ ಮೂಲಕ ವರ್ಣಬೇಧ ನೀತಿ ಸಾರಿದಂತಾಗುತ್ತಿದೆ. ಇದಕ್ಕೆ ಪರ್ಯಾಯ ಪದ ಬಳಕೆಯಾಗಬೇಕು ಎಂದು ತೃಣಮೂಲ ಕಾಂಗ್ರೆಸ್ ಮತ್ತು ಸಿಪಿಎಂ ಒಕ್ಕೊರಲಿನ ಬೇಡಿಕೆ ಇಟ್ಟವು. ಟಿಎಂಸಿಯ ಡೆರೆಕ್ ಓಬ್ರಿಯಾನ್ ಬ್ಲ್ಯಾಕ್ ಮನಿ ಎಂಬ ಪದದ ಬದಲಿಗೆ ಡರ್ಟಿ ಮನಿ ಎಂಬ ಪದ ಬಳಸುವ ಸಲಹೆ ನೀಡಿದರೆ, ಸಿಪಿಎಂನ ಸೀತಾರಾಂ ಯೆಚೂರಿ ಅದಕ್ಕೆ ದನಿಗೂಡಿಸಿದರು. ಶತಮಾನಗಳ ಹಿಂದೆ ಯೂರೋಪಿನಲ್ಲಿ ತಯಾರಾಗುತ್ತಿದ್ದ ತಾಮ್ರ ಮಿಶ್ರಣದ ನಾಣ್ಯಗಳು ಕಪ್ಪುಬಣ್ಣಗಿದ್ದವು. ಅದನ್ನು ಬ್ಲ್ಯಾಕ್ ಮನಿ ಅನ್ನಲಾಗುತ್ತಿತ್ತು. ಆದರೆ ಈಗ ರಹಸ್ಯವಾಗಿಡುವ ಹಣವನ್ನು
ಬ್ಲ್ಯಾಕ್ ಮನಿ ಅನ್ನುವ ಮೂಲಕ ಜನಾಂಗೀಯ ನಿಂದನೆ ಮಾಡಿದಂತಾಗುತ್ತಿದೆ. ಹಾಗಾಗಿ ಆ ಪದ ಬಳಕೆ ನಿಲ್ಲಿಸಬೇಕು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com