ಎಎಂಯು ಚುನಾವಣೆಗೆ ಸ್ಪರ್ಧಿಸಿದ್ದ ಮೊದಲ ಮಹಿಳಾ ಅಭ್ಯರ್ಥಿ ಅನುಮಾನಾಸ್ಪದ ಸಾವು

ಅಲಿಗರ್ ಮುಸ್ಲಿಮ್ ವಿಶ್ವವಿದ್ಯಾಲಯ(ಎಎಂಯು)ದ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿದ್ದ ಮೊದಲ ಮಹಿಳಾ ಅಭ್ಯರ್ಥಿ ಅನುಮಾನಾಸ್ಪದ ರೀತಿಯಲ್ಲಿ....
ಎಎಂಯು ಚುನಾವಣೆಗೆ ಸ್ಪರ್ಧಿಸಿದ್ದ ಮೊದಲ ಮಹಿಳಾ ಅಭ್ಯರ್ಥಿ
ಎಎಂಯು ಚುನಾವಣೆಗೆ ಸ್ಪರ್ಧಿಸಿದ್ದ ಮೊದಲ ಮಹಿಳಾ ಅಭ್ಯರ್ಥಿ

ಲಖನೌ: ಅಲಿಗರ್ ಮುಸ್ಲಿಮ್ ವಿಶ್ವವಿದ್ಯಾಲಯ(ಎಎಂಯು)ದ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿದ್ದ ಮೊದಲ ಮಹಿಳಾ ಅಭ್ಯರ್ಥಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.

ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿದ್ದ ಅಸ್ಮಾ ಜಾವೇದ್(28) ಅವರ ಮೃತದೇಹ ಬುಧವಾರ ಪತ್ತೆಯಾಗಿದ್ದರೂ, ಮೃತಪಟ್ಟು ಹಲವು ದಿನಗಳೇ ಕಳೆದಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.   ಅಸ್ಮಾ ಜಾವೇದ್ ನಿಧನದ ಬಗ್ಗೆ ಪ್ರತಿಕ್ರಿಯಿಸಿರುವ ಆಕೆಯ ಪೊಷಕರು, ತಮ್ಮ ಮಗಳನ್ನು ಹತ್ಯೆ ಮಾಡಲಾಗಿದೆ ಎಂದು ಅರೊಪಿಸಿದ್ದಾರೆ. ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿದ್ದರಿಂದ ಅಸ್ಮಾ ಜಾವೇದ್ ಹತ್ಯೆಗೀಡಾಗಿದ್ದಾರೆ ಎಂದು ಪೊಷಕರು ಹೇಳಿಕೆ ನೀಡಿದ್ದಾರೆ.

ಮೇ.9ರಿಂದ ಅಸ್ಮಾ ಜಾವೇದ್ ಕುಟುಂಬದವರೊಂದಿಗೆ ಸಂಪರ್ಕದಲ್ಲಿರಲಿಲ್ಲ. ಈ ಹಿನ್ನೆಲೆಯಲ್ಲಿ, ಆಕೆಯನ್ನು ಹುಡುಕಲು ಲಖನೌಗೆ ಆಗಮಿಸಿದ್ದೆ, ಆದರೆ ಅಸ್ಮಾ ಜಾವೇದ್ ತನ್ನ ಅಪಾರ್ಟ್‌ಮೆಂಟ್ ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.  ಆಕೆಯನ್ನು ಹತ್ಯೆ ಮಾಡಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ ಎಂದು ಅಸ್ಮಾ ಜಾವೇದ್ ಸಹೊದರ ಸಲ್ಮಾನ್ ಹೇಳಿದ್ದಾರೆ.

ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಅಸ್ಮಾ ಜಾವೇದ್, ಅಲಿಗರ್ ಮುಸ್ಲಿಮ್ ವಿಶ್ವವಿದ್ಯಾಲಯದಲ್ಲಿ ಪಿಹೆಚ್‌ಡಿ ಮಾಡುತ್ತಿದ್ದರು. ತಮ್ಮ ಪತಿಯಿಂದ ದೂರವಾಗಿದ್ದ ಕಾರಣ ಅಸ್ಮಾ ಜಾವೇದ್, ಮಾನಸಿಕವಾಗಿ ನೊಂದಿದ್ದರು ಎಂಬ ಅಂಶವೂ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.

ಅಪಾರ್ಟ್‌ಮೆಂಟ್‌ನ ಬಾಗಿಲು ಹೊರ ಭಾಗದಿಂದ ಲಾಕ್‌ಆಗಿದ್ದ ಕಾರಣ ಅಸ್ಮಾ ಜಾವೇದ್ ಅವರನ್ನು ಕೊಲೆ ಮಾಡಲಾಗಿದೆ ಎಂಬ ಬಲವಾದ ಅನುಮಾನ ವ್ಯಕ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com