
ಮುಂಬೈ: ಹೌಸಿಂಗ್ ಡಾಟ್ ಕಾಂ (Housing.Com)ನ ಸಿಇಓ ರಾಹುಲ್ ಯಾದವ್ ಅವರು ಕಂಪನಿಯಲ್ಲಿದ್ದ ರು.200 ಕೋಟಿ ಬೆಲೆಯ ಶೇರುಗಳನ್ನು ನೌಕರರಿಗೆ ಹಂಚಿದ್ದಾರೆ.
ಈ ಮೂಲಕ ಅಚ್ಚರಿ ಮೂಡಿಸಿರುವ ರಾಹುಲ್ ಯಾದವ್, ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದು, ನನಗೆ ಇನ್ನೂ 26 ವರ್ಷ ವಯಸ್ಸಾಗಿದ್ದು, ಈಗಲೇ ಹಣಕ್ಕೆ ಪ್ರಾಮುಖ್ಯತೆ ಕೊಡುವ ಅವಶ್ಯಕತೆಯಿಲ್ಲ ಎಂದಿದ್ದಾರೆ.
Housing.Com ನ ಸುಮಾರು 2,251 ನೌಕರರು ರಾಹುಲ್ ಯಾದವ್ ಅವರ ಶೇರುಗಳನ್ನು ಪಡೆಯುವ ಮೂಲಕ ಕೇವಲ ನೌಕರಿಯಿಂದ ಮಾತ್ರವಲ್ಲದೇ ಈಗ ಕಂಪನಿಯ ಒಂದು ಭಾಗವಾಗಲಿದ್ದಾರೆ. Housing.Com ಒಟ್ಟು 1,500 ಕೋಟಿ ರೂ. ಮೌಲ್ಯವನ್ನು ಹೊಂದಿದ್ದು, ಜಪಾನಿನ ಸಾಫ್ಟ್ ಬ್ಯಾಂಕ್ Housing.Com ಗೆ ಬೆನ್ನೆಲುಬಾಗಿ ನಿಂತಿದೆ.
ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ರಾಹುಲ್ ಯಾದವ್ ಅದನ್ನು ಹಿಂಪಡೆದ ಒಂದು ವಾರದೊಳಗೆ ಈ ನಿರ್ಧಾರ ಕೈಗೊಂಡಿದ್ದಾರೆ.
Advertisement