ಚೀನಾದಲ್ಲಿ ಪ್ರಧಾನಿಗೆ ಅದ್ಧೂರಿ ಸ್ವಾಗತ, 10 ಬಿಲಿಯನ್ ಒಪ್ಪಂದದ ಮೇಲೆ ಮೋದಿ ಕಣ್ಣು

ಪ್ರಧಾನಿ ನರೇಂದ್ರ ಮೋದಿ ಅವರ ಮೂರು ದಿನಗಳ ಚೀನಾ ಪ್ರವಾಸ ಗುರುವಾರದಿಂದ ಆರಂಭವಾಗಿದ್ದು, ಇಂದು ಐತಿಹಾಸಿಕ ನಗರಿ ಕ್ಸಿಯಾನ್ ವಿಮಾನ....
ಪ್ರಧಾನಿ ನರೇಂದ್ರ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ನರೇಂದ್ರ ಮೋದಿಗೆ ಸಾಂಪ್ರದಾಯಿಕ ಸ್ವಾಗತ

ಬೀಜಿಂಗ್: ಪ್ರಧಾನಿ ನರೇಂದ್ರ ಮೋದಿ ಅವರ ಮೂರು ದಿನಗಳ ಚೀನಾ ಪ್ರವಾಸ ಗುರುವಾರದಿಂದ ಆರಂಭವಾಗಿದ್ದು, ಇಂದು ಐತಿಹಾಸಿಕ ನಗರಿ ಕ್ಸಿಯಾನ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಅದ್ಧೂರಿಯಾಗಿ ಬರಮಾಡಿಕೊಂಡರು.

ಮೋದಿ ಪ್ರಧಾನಿಯಾದ ನಂತರ ಇದೇ ಮೊದಲ ಬಾರಿಗೆ ಚೀನಾಗೆ ಭೇಟಿ ನೀಡಿದ್ದು, ಮೇ 16ರವರೆಗೆ ಚೀನಾದಲ್ಲಿ ಇರಲಿದ್ದಾರೆ.

ಚೀನಾದ ಐತಿಹಾಸಿಕ ಟೆರಾಕೋಟಾ ಯುದ್ಧವೀರರ ಮ್ಯೂಸಿಯಂಗೆ ಭೇಟಿ ನೀಡಿದ ಮೋದಿ, ಇಲ್ಲಿ ಚೀನಾದ ಮನೊದಲ ರಾಜ ಕ್ವಿನ್ ಶಿ ಹುವಾಂಗ್ ಪ್ರತಿಮೆ ಸೇರಿದಂತೆ ಹಲವು ಐತಿಹಾಸಿಕ ಯುದ್ಧವೀರರ ಪ್ರತಿಗಳನ್ನು ವಿಕ್ಷೀಸಿದರು.

ಉಭಯ ದೇಶಗಳ ನಡುವಣ ಸಂಬಂಧ ವೃದ್ಧಿಗೆ ಆರ್ಥಿಕ ಒಪ್ಪಂದಗಳು ಸಹಕಾರಿ ಎಂಬುದನ್ನು ಮನಗಂಡಿರುವ ಮೋದಿ, ಪರಸ್ಪರ ಬಂಡವಾಳ ಹೂಡಿಕೆಯ ಒಪ್ಪಂದಗಳತ್ತ ಒಲವು ತೋರಿದ್ದಾರೆ. ಅದರಂತೆ ಈ ಬಾರಿಯ ಪ್ರವಾಸದಲ್ಲಿ ಒಟ್ಟು 10 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದಗಳಿಗೆ ಪ್ರಧಾನಿ ಮೋದಿ ಸಹಿ ಹಾಕಲಿದ್ದಾರೆ ಎಂದು ಚೀನಾದ ಪ್ರಮುಖ ಆಂಗ್ಲ ದಿನ ಪತ್ರಿಕೆಯೊಂದು ವರದಿ ಮಾಡಿದೆ. ಇದು ಕಳೆದ ಐದು ವರ್ಷಗಳಲ್ಲಿ ಚೀನಾ ಭಾರತದಲ್ಲಿ ಹೂಡಿರುವ ಬಂಡವಾಳಕ್ಕಿಂತ ಆರು ಪಟ್ಟು ಹೆಚ್ಚು.

2014ರ ಅಂತ್ಯಕ್ಕೆ ಭಾರತ ಚೀನಾದಲ್ಲಿ ಹೂಡಿರುವ ಒಟ್ಟು ಬಂಡವಾಳದ ಮೊತ್ತ ಅರ್ಧ ಬಿಲಿಯನ್ ಆದರೆ ಭಾರತದಲ್ಲಿ ಚೀನಾದ ಹೂಡಿಕೆ 3 ಬಿಲಿಯನ್ ಮುಟ್ಟಿದೆ. ಚೀನಾ ಅಧ್ಯಕ್ಷ ಜಿನ್‌ಪಿಂಗ್ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಭಾರತದಲ್ಲಿ 20 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆ ಮಾಡುವುದಾಗಿ ಘೋಷಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com