ನೊಯ್ಡಾ ಭೂಸ್ವಾಧೀನ ಪ್ರಕರಣ : ಹೈಕೋರ್ಟ್ ತೀರ್ಪು ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ಗ್ರೇಟರ್ ನೊಯ್ಡಾ ಮತ್ತು ನೊಯ್ಡಾ ಎಕ್ಸ್ಟೆನ್ಷನ್ ಭೂಸ್ವಾಧೀನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೊರ್ಟ್ ನೀಡಿದ್ದ ತೀರ್ಪನ್ನು....
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಗ್ರೇಟರ್ ನೊಯ್ಡಾ ಮತ್ತು ನೊಯ್ಡಾ ಎಕ್ಸ್ಟೆನ್ಷನ್ ಭೂಸ್ವಾಧೀನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೊರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಎತ್ತಿ ಹಿಡಿದಿದೆ.

ಭೂಸ್ವಾಧೀನ ಮಾಡಿರುವುದನ್ನು ವಿರೊಧಿಸಿ, ಗ್ರೇಟರ್ ನೊಯ್ಡಾದ ರೈತರು ಸಲ್ಲಿಸಿದ್ದ ಅರ್ಜಿಗಳನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್, ರೈತರ ಜಮೀನು ವಾಪಸ್ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಫ್ಲಾಟ್‌ಗಳ ನಿರ್ಮಾಣಕ್ಕಾಗಿ, 9,000 ಸಾವಿರ ಎಕರೆಯಷ್ಟು ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು.

ಪರಿಹಾರ ಪಡೆದ ನಂತರ, ತಮ್ಮ ಭೂಮಿಯನ್ನು ವಾಪಸ್ ನೀಡಲು ಆದೇಶ ನೀಡಬೇಕೆಂದು ಕೋರ್ಟ್ ಮೆಟ್ಟಿಲೀರಿದ್ದರ ಹಿನ್ನೆಲೆಯಲ್ಲಿ, ರೈತರು ಸಲ್ಲಿಸಿದ್ದ ಅರ್ಜಿಗಳನ್ನು ತಿರಸ್ಕರಿಸಿದ್ದ ಅಲಹಾಬಾದ್ ಹೈಕೋರ್ಟ್, ರೈತರಿಗೆ ಶೇ.64.7 ರಷ್ಟು  ಪರಿಹಾರ ನೀಡುವಂತೆ ಆದೇಶ ನೀಡಿತ್ತು. 9,000 ಸಾವಿರ  ಎಕರೆ ಜಾಗದಲ್ಲಿ 100 ಯೊಜನೆಗಳು ಪ್ರಾರಂಭವಾಗಿದೆ. ಈ ಹಂತದಲ್ಲಿ ಭೂಮಿಯನ್ನು ವಾಪಸ್ ನೀಡಲು ಆದೇಶ ನೀಡಿದರೆ, ಬಿಲ್ಡರ್‌ಗಳಿಗಷ್ಟೇ ಅಲ್ಲದೇ, ಫ್ಲಾಟ್‌ಗಳನ್ನು ಕಾದಿರಿಸಿರುವ 1.5 ಲಕ್ಷ ಜನರ ಮೇಲೆ ಪರಿಣಾಮ ಬೀರಲಿದೆ ಎಂದು ಅಲಹಾಬಾದ್ ಕೋರ್ಟ್ ಅಭಿಪ್ರಾಯಟ್ಟಿತ್ತು.  ಈಗ ಸುಪ್ರೀಂ ಕೋರ್ಟ್ ಸಹ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com