ನೇಪಾಳದಲ್ಲಿ ಮತ್ತೆ ಭೂಕಂಪ: 5.5 ರಷ್ಟು ತೀವ್ರತೆ ದಾಖಲು

ಭಾರೀ ಪ್ರಮಾಣದ ಭೂಕಂಪದಿಂದ ಈಗಾಗಲೇ ತತ್ತರಿಸಿರುವ ನೇಪಾಳದಲ್ಲಿ ಇದೀಗ ಮತ್ತೆ ಭೂಮಿ ಕಂಪಿಸಿದ್ದು. ರಿಕ್ಟರ್ ಮಾಪಕದಲ್ಲಿ 5.5 ರಷ್ಟು ತೀವ್ರತೆ ದಾಖಲಾಗಿದೆ...
ಭೂಕಂಪದಿಂದ ತತ್ತರಿಸಿರುವ ನೇಪಾಳದ ಚಿತ್ರ
ಭೂಕಂಪದಿಂದ ತತ್ತರಿಸಿರುವ ನೇಪಾಳದ ಚಿತ್ರ

ಕಠ್ಮಂಡು: ಭಾರೀ ಪ್ರಮಾಣದ ಭೂಕಂಪದಿಂದ ಈಗಾಗಲೇ ತತ್ತರಿಸಿರುವ ನೇಪಾಳದಲ್ಲಿ ಇದೀಗ ಮತ್ತೆ ಭೂಮಿ ಕಂಪಿಸಿದ್ದು. ರಿಕ್ಟರ್ ಮಾಪಕದಲ್ಲಿ 5.5 ರಷ್ಟು ತೀವ್ರತೆ ದಾಖಲಾಗಿದೆ.

ಮೂಲಗಳ ಪ್ರಕಾರ ಭೂಕಂಪದ ಕೇಂದ್ರ ಬಿಂದು 52 ಕಿ.ಮೀ ದೂರದಲ್ಲಿರುವ ಧಡಿಂಗ್ ಜಿಲ್ಲೆ ಎಂದು ತಿಳಿದುಬಂದಿದ್ದು, ಈವರೆಗೂ ಸಾವು ನೋವುಗಳು ಸಂಭವಿಸಿರುವ ಕುರಿತಂತೆ ಯಾವುದೇ ತಿಳಿದುಬಂದಿಲ್ಲ. ಭೂಕಂಪದಿಂದ ಈಗಾಗಲೇ ತತ್ತರಿಸಿರುವ ನೇಪಾಳ ಜನರಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ.

ನೇಪಾಳದಲ್ಲಿ ಕಳೆದ ವಾರಗಳ ಹಿಂದಷ್ಟೇ ಪ್ರಬಲ ಭೂಕಂಪ ಸಂಭವಿಸಿ 10 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, 20 ಸಾವಿರಕ್ಕೂ ಅಧಿಕ ಮಂದಿ ಗಂಭೀರ ಗಾಯಗೊಂಡಿದ್ದರು. ಇದಲ್ಲದೆ ಮಂಗಳವಾರ 7.1 ತೀವ್ರತೆಯಲ್ಲಿ ನೇಪಾಳ, ದೆಹಲಿ, ಬಿಹಾರ, ಅಸ್ಸಾಂ ಸೇರಿದಂತೆ ಉತ್ತರ ಭಾರತದಾದ್ಯಂತ ಮತ್ತೆ ಭೂ ಕಂಪ ಸಂಭವಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com