`ಇಸಿಸ್ ಉಗ್ರರು ಒತ್ತೆ ಇಟ್ಟುಕೊಂಡ 39 ಭಾರತೀಯರು ಜೀವಂತವಾಗಿಲ್ಲ'

ಇರಾಕ್‍ನಲ್ಲಿ ಇಸಿಸ್ ಉಗ್ರರು ಒತ್ತಾಸೆಯಾಗಿಟ್ಟು ಕೊಂಡಿರುವ 39 ಭಾರತೀಯರು ಜೀವಂತವಾಗಿ ಉಳಿದಿಲ್ಲ ಎಂದು ಉಗ್ರರ ಸೆರೆಯಿಂದ ತಪ್ಪಿಸಿಕೊಂಡು...
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್

ನವದೆಹಲಿ: ಇರಾಕ್‍ನಲ್ಲಿ ಇಸಿಸ್ ಉಗ್ರರು ಒತ್ತಾಸೆಯಾಗಿಟ್ಟು ಕೊಂಡಿರುವ 39 ಭಾರತೀಯರು ಜೀವಂತವಾಗಿ ಉಳಿದಿಲ್ಲ ಎಂದು ಉಗ್ರರ ಸೆರೆಯಿಂದ ತಪ್ಪಿಸಿಕೊಂಡು ಬಂದಿರುವ ಪಂಜಾಬ್ ಮೂಲದ ಹರ್ಜಿತ್ ಮಸೀಹ್ ಹೇಳಿಕೊಂಡಿದ್ದಾನೆ.

`ನಾನು ಸೇರಿ ಒಟ್ಟು 40 ಮಂದಿ ಭಾರತೀಯರನ್ನು ಉಗ್ರರು ಸೆರೆಯಲ್ಲಿಟ್ಟುಕೊಂಡಿದ್ದರು. ನಂತರ ಕೋಣೆಯೊಳಗೆ ಕೂಡಿ ಹಾಕಿ ಗುಂಡುಹಾರಿಸಿದ್ದರು. ಈ ವೇಳೆ ನಾನು ಸತ್ತಂತೆ ನಟಿಸಿ ಅಲ್ಲಿಂದ ತಪ್ಪಿಸಿಕೊಂಡು ಬಂದೆ' ಎಂದು ಮಸೀಹ್ ಹೇಳಿಕೊಂಡಿದ್ದಾನೆ. ಆದರೆ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಾತ್ರ ಹರ್ಜಿತ್ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ.

ಯುದ್ಧ ಸಂತ್ರಸ್ತ ಇರಾಕ್‍ನಲ್ಲಿ ಉಗ್ರಸಂಘಟನೆ ಇಸಿಸ್‍ನಿಂದ ಅಪಹರಣಕ್ಕೊಳಗಾಗಿರುವ ಯಾವೊಬ್ಬ ಭಾರತೀಯನೂ ಸತ್ತಿಲ್ಲ. ಉಗ್ರರ ಸೆರೆಯಿಂದ ತಪ್ಪಿಸಿಕೊಂಡು ಬಂದಿರುವ ಹರ್ಜಿತ್ ಮಸೀಹ್ ಎನ್ನುವ ವ್ಯಕ್ತಿ ಹರಡುತ್ತಿರುವ ವದಂತಿ ನಿರಾಧಾರವಾದುದು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಕಳೆದ ವರ್ಷ ಅಪಹರಣಕ್ಕೊಳಗಾಗಿರುವ 40 ಮಂದಿ ಭಾರತೀಯರ ಪೈಕಿ ಪಂಜಾಬ್‍ನ ಹರ್ಜಿತ್ ಮಸೀಹ್ ತಪ್ಪಿಸಿಕೊಂಡು ಬಂದಿದ್ದರು. ಮಸೀಹ್ ಹೇಳುತ್ತಿರುವಂತೆ 39 ಮಂದಿಯನ್ನು ಇಸಿಸ್ ಕೊಂದಿರುವುದು ಸುಳ್ಳು. ನನ್ನ ಬಳಿ ಎಂಟು ನಂಬಲರ್ಹ ಮೂಲಗಳಿಂದ ಬಂದ ವರದಿಗಳಿವೆ. ಇರಾಕಿನಲ್ಲಿ ಅಪಹೃತರ ಕುಟುಂಬದ ಆಪ್ತರೊಂದಿಗೆ ಕೂಡ ಚರ್ಚಿಸಿದ್ದೇನೆ ಎಂದಿರುವ ಸುಷ್ಮಾ ಸ್ವರಾಜ್, ಅಪಹೃತರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನ ಕ್ಷಿಪ್ರಗತಿಯಲ್ಲಿ ಮುಂದುವರೆಯಲಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com