ಸುಪ್ರೀಂ ಆದೇಶ ಉಲ್ಲಂಘಿಸಿದ ಮದ್ರಾಸ್ `ಹೈ' ನ್ಯಾ. ಕರ್ಣನ್

ಸಿವಿಲ್ ನ್ಯಾಯಾಧೀಶರ ನೇಮಕ ಪ್ರಕ್ರಿಯೆಯಿಂದ ದೂರ ಇರುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನವನ್ನು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ...
ನ್ಯಾಯಾಧೀಶ ಕರ್ಣನ್
ನ್ಯಾಯಾಧೀಶ ಕರ್ಣನ್

ಚೆನ್ನೈ: ಸಿವಿಲ್ ನ್ಯಾಯಾಧೀಶರ ನೇಮಕ ಪ್ರಕ್ರಿಯೆಯಿಂದ ದೂರ ಇರುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನವನ್ನು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಸ್.ಕರ್ಣನ್ ಉಲ್ಲಂಘಿಸಿದ್ದಾರೆ.

ಈ ನೇಮಕ ಪ್ರಕ್ರಿಯೆಯ ನ್ಯಾಯಾಧೀಶ ವಿ. ಧನಪಾಲನ್ ಅವರ ಶೈಕ್ಷಣಿಕ ಹಿನ್ನೆಲೆ ಕುರಿತು ಸಮಗ್ರ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿದ್ದಾರೆ. ಈ ಮೂಲಕ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಈ ಹಿಂದೆ ಕರ್ಣನ್ ಅವರು ನ್ಯಾಯಮೂರ್ತಿ ಗಳ ನೇಮಕಕ್ಕೆ ಸಂಬಂಧಿಸಿದ ಸಂದರ್ಶನಕ್ಕಾಗಿ ಆಯ್ಕೆ ಮಾಡಲಾದ ಸಮಿತಿಯಲ್ಲಿ ನ್ಯಾ. ಧನಪಾಲನ್ ಅವರನ್ನು ಸೇರ್ಪಡೆಗೊಳಿಸಿದ್ದನ್ನು ಪ್ರಶ್ನಿಸಿ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಿದ್ದರು.

ಜತೆಗೆ, ನೇಮಕ ಪ್ರಕ್ರಿಯೆಗೇ ತಡೆ ನೀಡಿದ್ದರು. ಈಗ ಅವರು ನ್ಯಾ. ಧನ ಪಾಲನ್‍ರ ವಿದ್ಯಾರ್ಹತೆ ಕುರಿತು ತನಿಖೆ ನಡೆಸುವಂತೆ ಚೆನ್ನೈನ ಸಿಬಿಐ ಜಂಟಿ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. 3 ತಿಂಗಳೊಳಗೆ ಈ ಸಂಬಂಧ ವರದಿ ಸಲ್ಲಿಸುವಂತೆ ನಿರ್ದೇ ಶನ ನೀಡಿದ್ದಾರೆ. ಕಾನೂನು ಪದವೀಧರನಾಗಿದ್ದು ಬಾರ್ ಕೌನ್ಸಿಲ್‍ನಲ್ಲಿ ವಕೀಲಿಕೆ ಮಾಡಿದ್ದೆ ಹಾಗೂ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆಂದು ನ್ಯಾ. ಧನ ಪಾಲನ್ ಸಲ್ಲಿಸಿರುವ ಎಲ್ಲ ದಾಖಲೆಗಳೂ ಬೋಗಸ್ ಎಂದು ಹೇಳಿದ್ದಾರೆ.

ನ್ಯಾ. ಧನಪಾಲನ್ ಆ.3, 1976ರಿಂದ ನ.30, 1988ರವರೆಗೆ ಟೆಲಿಗ್ರಾಫಿಸ್ಟ್ ಆಗಿ ಆಗಿ ಕೆಲಸ ಮಾಡಿದ್ದರು. ಅವರು ಬೋಗಸ್ ದಾಖಲೆ ಸೃಷ್ಟಿಸಿ ನ್ಯಾಯಮೂರ್ತಿ ಆಗಿದ್ದಾರೆ ಎಂದು ಹೇಳಿದ್ದಾರೆ. ಜತೆಗೆ, ಈ ಸಂಬಂಧ ಕೆಲ ದಾಖಲೆ ಗಳನ್ನೂ ಸಿಬಿಐಗೆ ನೀಡಿದ್ದಾರೆ. ಸುಪ್ರೀಂಕೋರ್ಟ್ನಲ್ಲಿ  ಈ ಪ್ರಕರಣವನ್ನು ಸಾಬೀತು ಪಡಿಸಲು ಸಿಬಿಐ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ. ಈ ಹಿಂದೆ ನ್ಯಾ. ಕರ್ಣನ್ ಮದ್ರಾಸ್ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಕೆ.ಕೌಲ್ ವಿರುದ್ಧವೂ ಮಾನ ನಷ್ಟ ಮೊಕದ್ದಮೆ ದಾಖಲಿಸುವ ಬೆದರಿಕೆ ಹಾಕಿದ್ದರು. ನ್ಯಾ. ಕೌಲ್ ತಮ್ಮ ಕೆಲಸದಲ್ಲಿ ಮಧ್ಯಪ್ರವೇಶ ಮಾಡುತ್ತಾರೆ ಎಂದೂ ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com