ಭಾರತ-ಚೀನಾ ವ್ಯವಹಾರ ವೇದಿಕೆಯಲ್ಲಿ 22 ಬಿಲಿಯನ್ ಮೌಲ್ಯದ ಒಪ್ಪಂದಗಳಿಗೆ ಸಹಿ

ಮೂರು ದಿನಗಳ ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಮೂರನೇ ಹಾಗೂ ಕಡೆಯ ದಿನವಾದ ಶನಿವಾರ ಭಾರತ-ಚೀನಾ ವ್ಯವಹಾರ ವೇದಿಕೆಯಲ್ಲಿ...
ಭಾರತ-ಚೀನಾ ವ್ಯವಹಾರ ವೇದಿಕೆಯಲ್ಲಿ ಪ್ರಧಾನಿ ಮೋದಿ
ಭಾರತ-ಚೀನಾ ವ್ಯವಹಾರ ವೇದಿಕೆಯಲ್ಲಿ ಪ್ರಧಾನಿ ಮೋದಿ

ಶಾಂಘೈ: ಮೂರು ದಿನಗಳ ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಮೂರನೇ ಹಾಗೂ ಕಡೆಯ ದಿನವಾದ ಶನಿವಾರ ಭಾರತ-ಚೀನಾ ವ್ಯವಹಾರ ವೇದಿಕೆಯಲ್ಲಿ 22 ಬಿಲಿಯನ್ ಡಾಲರ್ ಮೌಲ್ಯದ 21 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

ಭಾರತ-ಚೀನಾ ವ್ಯವಹಾರ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಬಂಡವಾಳ ಹೂಡಿಕೆ ಮಾಡಲು ಚೀನಾದ ಉದ್ಯಮಗಳಿಗೆ ಭಾರತ ಐತಿಹಾಸಿಕ ಅವಕಾಶ ನೀಡುತ್ತಿದೆ ಎಂದರು.

ಮೇಕ್ ಇನ್ ಇಂಡಿಯಾದ ಮಹತ್ವಾಕಾಂಕ್ಷೆ ಯೋಜನೆಗಳ ಬಗ್ಗೆ ವಿವರಿಸಿದ ಪ್ರಧಾನಿ ಮೋದಿ, ಭಾರತದಲ್ಲಿ ತಮ್ಮ ಉತ್ಪನ್ನಗಳನ್ನು ತಯಾರಿಸುವಂತೆ ಉದ್ಯಮಿಗಳಿಗೆ ಕರೆ ನೀಡಿದರು.

ಭಾರತ-ಚೀನಾ ವ್ಯವಹಾರ ವೇದಿಕೆಯಲ್ಲಿ 22 ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದಗಳಿಗೆ ಭಾರತ, ಚೀನಾ ಸಹಿ ಹಾಕಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರು ಟ್ವೀಟ್ ಮಾಡಿದ್ದಾರೆ.

"ನಾನು ಭಾರತದ ಬಗ್ಗೆ ಉತ್ಸುಕರಾಗಿದ್ದೇವೆ. ಹಾಗೆಯೆ 'ಮೇಕ್ ಇನ್ ಇಂಡಿಯಾ' ಮತ್ತು ಡಿಜಿಟಲ್ ಇಂಡಿಯ ಬಗ್ಗೆಯೂ" ಎಂದು ಆಲಿಬಾಬ ಸಿಇಒ ಜ್ಯಾಕ್ ಮಾ ಮೋದಿ ಅವರಿಗೆ ತಿಳಿಸಿದರು ಎಂದು ವಿದೇಶಾಂಗ ಸಚಿವಾಲಯ ಟ್ವೀಟ್ ಮಾಡಿದೆ.

"ನಮಗೆ ಭಾರತದ ಬಗ್ಗೆ ಭಾರಿ ಭರವಸೆ ಇದೆ. ಭಾರತ ಅತಿ ದೊಡ್ಡ ಮಾರುಕಟ್ಟೆ ಮತ್ತು ಕೆಲಸದಾರರನ್ನು ಒದಗಿಸಿಕೊಡುತ್ತದೆ" ಎಂದು ಎಸ್ ಎ ಏನ್ ವೈ ಅಧ್ಯಕ್ಷ ಲಿಯಾಂಗ್ ವೆಂಗೆನ್ ತಿಳಿಸಿದರು ಎಂದು ಮತ್ತೊಂದು ಟ್ವೀಟ್ ಹೇಳಿದೆ.

ಪ್ರಧಾನಿ ಪ್ರವಾಸದಲ್ಲಿ ಶಾಂಘೈ ಭೇಟಿ ಕೊನೆಯದಾಗಿದ್ದು ಇನ್ನು ಮಂಗೋಲಿಯಾ ಪ್ರವಾಸ ಕೈಗೊಳ್ಳಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com