ಭಾರತದ ಜಿಡಿಪಿ ಬೆಳವಣಿಗೆ ಶೇ.9ರಷ್ಟಾಗಲಿದೆ: ಬ್ರಿಕ್ಸ್‌ ಬ್ಯಾಂಕ್‌ ಅಧ್ಯಕ್ಷ ಕಾಮತ್‌

ಸಾಮಾಜಿಕ-ಆರ್ಥಿಕ ವಲಯದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುತ್ತಿರುವುದರಿಂದ ಮುಂಬರುವ ವರ್ಷಗಳಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇಕಡ 9ರಷ್ಟಾಗಲಿದೆ....
ಬ್ರಿಕ್ಸ್‌ ಬ್ಯಾಂಕ್‌ನ ಮೊದಲ ಅಧ್ಯಕ್ಷ ಕೆ.ವಿ. ಕಾಮತ್‌
ಬ್ರಿಕ್ಸ್‌ ಬ್ಯಾಂಕ್‌ನ ಮೊದಲ ಅಧ್ಯಕ್ಷ ಕೆ.ವಿ. ಕಾಮತ್‌
Updated on

ಮಡಿಕೇರಿ: ಸಾಮಾಜಿಕ-ಆರ್ಥಿಕವಲಯದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುತ್ತಿರುವುದರಿಂದಮುಂಬರುವ ವರ್ಷಗಳಲ್ಲಿ ಭಾರತದಜಿಡಿಪಿ ಬೆಳವಣಿಗೆ ಶೇಕಡ 9ರಷ್ಟಾಗಲಿದೆಎಂದು ಬ್ರಿಕ್ಸ್‌ ಬ್ಯಾಂಕ್‌ನಮೊದಲ ಅಧ್ಯಕ್ಷರಾಗಿ ನೇಮಕಗೊಂಡಿರುವಕೆ.ವಿ. ಕಾಮತ್‌ಅಭಿಪ್ರಾಯಪಟ್ಟಿದ್ದಾರೆ.

ಮಡಿಕೇರಿ ಬಳಿಯಸುಂಟಿಕೊಪ್ಪಕ್ಕೆ ಭೇಟಿ ನೀಡಿದ್ದವೇಳೆ ಮಾತನಾಡಿದ ಅವರು, ಜಿಡಿಪಿಬೆಳವಣಿಗೆ ಏರಿಕೆಯಾಗುವ ಪರಿಣಾಮದೇಶವಾಸಿಗಳ ತಲಾ ಆದಾಯ ಹೆಚ್ಚಾಗಲಿದೆಎಂದು ಹೇಳಿದ್ದಾರೆ.  

ನೂತನವಾಗಿರಚಿಸಲಾದ ಬ್ರಿಕ್ಸ್ ಬ್ಯಾಂಕ್ನಲ್ಲಿ ತಾವು ವಹಿಸಲಿರುವ ಪಾತ್ರದಬಗ್ಗೆ ಪತ್ರಕರ್ತರ ಪ್ರಶ್ನೆಗೆಉತ್ತರಿಸಿದ ಅವರು, ನವದೆಹಲಿಯಲ್ಲಿಬ್ರೆಜಿಲ್, ರಷ್ಯಾ,ಭಾರತ, ಚೀನಾಮತ್ತು ದಕ್ಷಿಣ ಆಫ್ರಿಕಾ -ಸದಸ್ಯ ರಾಷ್ಟ್ರಗಳಿಂದಪ್ರತಿನಿಧಿಗಳೊಂದಿಗೆ ಸಭೆಗಳುನಡೆಸಿ ಬ್ಯಾಂಕಿನ ಕಾರ್ಯನಿರ್ವಹಣೆಯನೀಲನಕ್ಷೆ ತಯಾರಿಸಿದ ಬಳಿಕತಮ್ಮ ಪಾತ್ರದ ಬಗ್ಗೆ ತಿಳಿಯಲಿದೆಎಂದಿದ್ದಾರೆ.

ಬ್ಯಾಂಕಿಂಗ್ಕ್ಷೇತ್ರಕ್ಕೆ ಸಲ್ಲಿಸಿರುವಸೇವೆಗಾಗಿ ತಮ್ಮನ್ನು ಗುರುತಿಸಿಬ್ರಿಕ್ಸ್‌ ಬ್ಯಾಂಕ್‌ ನ ಅಧ್ಯಕ್ಷಹುದ್ದೆ ನೀಡಿರುವುದಕ್ಕೆ ಸಂತಸವಾಗಿದೆಎಂಗಿರುವ ಖಾಮತ್, ಕೇಂದ್ರಸರ್ಕಾರದ ಕಾರ್ಯವೈಖರಿ ಬಗ್ಗೆಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನರೇಂದ್ರ ಮೋದಿಪ್ರಧಾನಿಯಾಗಿ ಅಧಿಕಾರವಹಿಸಿಕೊಂಡಾಗಿನಿಂದ, ಹಲವಾರುಬದಲಾವಣೆಗಳಾಗುತ್ತಿವೆ. ಪ್ರಧಾನಮಂತ್ರಿ ಜನ್ ಧನ್ ಯೋಜನೆಯನ್ನುಹಲವರು ಟೀಕಿಸಿದ್ದರು, ಎಲ್ಲಾಸಬ್ಸಿಡಿಗಳು, ಯೋಜನೆಗಳುಬ್ಯಾಂಕ್ ಖಾತೆಗೆ ಸಂಬಂಧಿಸಿರುವುದರಿಂದ,ಬ್ಯಾಂಕ್ ಖಾತೆಯ ಮಹತ್ವತಿಳಿಯುತ್ತಿದೆ. ಜನ್ಧನ್ ಯೋಜನೆ ಸಬ್ಸಿಡಿಗಳ ಕಳವನ್ನುತಡೆಗಟ್ಟಲು ಸಾಧ್ಯವಾಗಿದೆ ಎಂದುಖಾಮತ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com