ಬಾಂಗ್ಲಾದಲ್ಲಿ ಸಹಸ್ರಮಾನದಷ್ಟು ಹಳೆಯದಾದ ದೇವಾಲಯ ಪತ್ತೆ

ವಾಯುವ್ಯ ಬಾಂಗ್ಲಾದೇಶದಲ್ಲಿ ಪುರಾತತ್ತ್ವ ಶಾಸ್ತ್ರವಿಭಾಗದ ತಂಡವೊಂದು ಸಹಸ್ರಮಾನದಷ್ಟು ಹಳೆಯದಾದ ದೇವಾಲಯವನ್ನು ಪತ್ತೆ ಮಾಡಿದೆ.
ಪುರಾತನ ಹಿಂದೂ ದೇವಾಲಯ(ಸಂಗ್ರಹ ಚಿತ್ರ)
ಪುರಾತನ ಹಿಂದೂ ದೇವಾಲಯ(ಸಂಗ್ರಹ ಚಿತ್ರ)

ಢಾಕಾ: ವಾಯುವ್ಯ ಬಾಂಗ್ಲಾದೇಶದಲ್ಲಿ ಪುರಾತತ್ತ್ವ ಶಾಸ್ತ್ರವಿಭಾಗದ ತಂಡವೊಂದು ಸಹಸ್ರಮಾನದಷ್ಟು ಹಳೆಯದಾದ ಹಿಂದೂ ದೇವಾಲಯವನ್ನು ಪತ್ತೆ ಮಾಡಿದೆ. ಈ ದೇವಾಲಯ ಪಾಲ ರಾಜವಂಶದ ಅವಧಿಯಲ್ಲಿ ನಿರ್ಮಾಣವಾಗಿರುವ ಸಾಧ್ಯತೆ ಇದೆ ಎಂದು ಪುರಾತತ್ವಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬೋಚಗಂಜ್ ಪ್ರದೇಶದಲ್ಲಿರುವ ದೀನಜ್ ಪುರದಲ್ಲಿ ಉತ್ಖನನ ನಡೆಸುತ್ತಿರಬೇಕಾದರೆ ಈ ದೇವಾಲಯ ಪತ್ತೆಯಾಗಿದೆ ಎಂದು ಉತ್ಖನನ ಅಭಿಯಾನದ ಮುಖ್ಯಸ್ಥ, ಜಹಂಗಿರ್ ನಗರ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಸ್ವಾಧೀನ್ ಸೇನ್ ಮಾಹಿತಿ ನೀಡಿದ್ದಾರೆ.  ಈ ದೇವಾಲಯ ಸುಮಾರ್ 8 -9 ನೇ ಶತಮಾನದಷ್ಟು ಹಳೆಯದ್ದು ಎಂದು ನಂಬಲಾಗಿದೆ. ಸ್ಥಳೀಯ ರೈತರು ಕೃಷಿ ಚಟುವಟಿಕೆಗೆ ಭೂಮಿಯನ್ನು ಸಿದ್ಧಪಡಿಸುತ್ತಿರಬೇಕಾದರೆ ಪುರಾತತ್ವ ಅವಶೇಷಗಳು ದೊರೆತ ಹಿನ್ನೆಲೆಯಲ್ಲಿ ಈ ದೇವಾಲಯದ ಉತ್ಖನನ ಕಾರ್ಯ ಸಾಧ್ಯವಾಗಿದೆ. 

ಸ್ಥಳೀಯ ರೈತರು ನೀಡಿದ ಮಾಹಿತಿಯನ್ನಾಧರಿಸಿ ಜಹಂಗಿರ್ ನಗರ್ ವಿಶ್ವವಿದ್ಯಾನಿಲಯದ ಪುರಾತತ್ತ್ವ ಶಾಸ್ತ್ರ ತಂಡ ಉತ್ಖನನ ಕಾರ್ಯ ಕೈಗೊಂಡಿದ್ದಾರೆ. ವಿಗ್ರಹಗಳು ಮತ್ತು ದೇವಾಲಯದ ಮೆಟ್ಟಿಲು ಪತ್ತೆಯಾಗಿದ್ದು  ಕಾಮಗಾರಿ ಮುಂದುವರೆದಿದೇ ಎಂದು ಉತ್ಖನನ ನಡೆಸುತ್ತಿರುವ ತಂಡದ ಸದಸ್ಯರು ತಿಳಿಸಿದ್ದಾರೆ.      

ಜಹಂಗಿರ್ ನಗರ್ ವಿವಿಯ ಇದೇ ತಂಡ ಇತ್ತೀಚೆಗಷ್ಟೇ ಬಾಂಗ್ಲಾ ದೇಶದಲ್ಲಿ ಬೌದ್ಧ ದೇವಾಲಯವನ್ನು ಅಗೆದು ಪತ್ತೆ ಮಾಡಿತ್ತು,  ಬಾಂಗ್ಲಾ ದೇಶದ ರಾಷ್ಟ್ರೀಯ ದೇವಸ್ಥಾನ ಢಾಕೇಶ್ವರಿ ದೇವಾಲಯ ಅಲ್ಲಿನ ಅಂತ್ಯಂತ ಪುರಾತನ ದೇವಾಲಯವಾಗಿದ್ದು,  ಬಾಂಗ್ಲಾದ ರಾಜಧಾನಿಗೂ ದೇವಾಲಯದ ಹೆಸರಿಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com