ಜೈಲಿನಿಂದ ಪರಾರಿ ಪ್ರಕರಣ: ಮೋರ್ಸಿಗೆ ಮರಣ ದಂಡನೆ

ಈಗಾಗಲೇ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಈಜಿಪ್ಟ್ ಮಾಜಿ ಅಧ್ಯಕ್ಷ ಮೊಹಮ್ಮದ್ ಮೊರ್ಸಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಈಜಿಪ್ಟ್ ಮಾಜಿ ಅಧ್ಯಕ್ಷ ಮೊಹಮ್ಮದ್ ಮೊರ್ಸಿ
ಈಜಿಪ್ಟ್ ಮಾಜಿ ಅಧ್ಯಕ್ಷ ಮೊಹಮ್ಮದ್ ಮೊರ್ಸಿ

ಕೈರೋ: ಈಗಾಗಲೇ  20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಈಜಿಪ್ಟ್ ಮಾಜಿ ಅಧ್ಯಕ್ಷ ಮೊಹಮ್ಮದ್ ಮೊರ್ಸಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, 2011 ರಲ್ಲಿ ನಡೆದಿದ್ದ ಸಾಮೂಹಿಕವಾಗಿ ಜೈಲಿನಿಂದ ಪರಾರಿಯಾಗಿದ್ದ ಪ್ರಕರಣದಲ್ಲಿ ಮರಣ ದಂಡನೆ ವಿಧಿಸಲಾಗಿದೆ.    

ಈಜಿಪ್ಟ್ ನ ನ್ಯಾಯಾಧೀಶ ಶಾಬಾನ್ ಎಲ್-ಶಮಿ,  ಮೊಹಮ್ಮದ್ ಮೊರ್ಸಿಗೆ ಮರಣ ದಂಡನೆ ವಿಧಿಸಿ ಆದೇಶ ನೀಡಿದ್ದಾರೆ. ಮರಣ ದಂಡನೆ ಆದೇಶವನ್ನು ರಾಷ್ಟ್ರದ ಅತ್ಯುನ್ನತ ಮುಸ್ಲಿಂ ಧರ್ಮಶಾಸ್ತ್ರಜ್ಞರಿಗೆ ಕಳಿಸುವುದು ಅಲ್ಲಿನ ವಾಡಿಯಾದ್ದರಿಂದ  ಮೋರ್ಸಿಗೆ ವಿಧಿಸಿರುವ ಮರಣ ದಂಡನೆಯ ಆದೇಶವನ್ನು ನ್ಯಾಯಾಧೀಶ ಶಾಬಾನ್ ಎಲ್-ಶಮಿ ತಮ್ಮ ರಾಷ್ಟ್ರದ ಪ್ರಮುಖ ಧರ್ಮಶಾಸ್ತ್ರಜ್ಞರಿಗೆ ಕಳಿಸಿದ್ದಾರೆ. ಮುಂದಿನ ವಿಚಾರಣೆಯನ್ನು ಜೂ.2 ಕ್ಕೆ ನಿಗದಿಪಡಿಸಲಾಗಿದೆ.

ಮೊದಲ ಬಾರಿ ಚುನಾಯಿತ ಜನಪ್ರತಿನಿಧಿಯಾಗಿ ಮೊರ್ಸಿ ಅಧ್ಯಕ್ಷ ಪದವಿಗೇರಿದ್ದರು, ಅಧ್ಯಕ್ಷರಾಗಿ ಒಂದು ವರ್ಷ ಪೂರೈಸುವುದರೊಳಗೆ ಮೋರ್ಸಿ ವಿರುದ್ಧ ಆರೋಪಗಳು ಕೇಳಿಬಂದು ಈಜಿಪ್ಟ್ ನಲ್ಲಿ ಮತ್ತೆ ಅರಾಜಕತೆ ಸೃಷ್ಠಿಯಾಗಿತ್ತು.  ಬಳಿಕ ಜುಲೈ 2013 ಮೋರ್ಸಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಇದಕ್ಕೂ ಮುನ್ನ ಸುದೀರ್ಘ 30 ವರ್ಷಗಳ ಅಧಿಕಾರದಲ್ಲಿದ್ದ ಹೊಸ್ನಿ ಮುಬಾರಕ್ ಅವರ ದುರಾಡಳಿತಕ್ಕೆ ತೀವ್ರ ವಿರೋಧ ವ್ಯಕ್ತವಾದ ಕಾರಣ  2011ರಲ್ಲಿ  ರಾಜಕೀಯ ಬಿಕ್ಕಟ್ಟ ಉಲ್ಬಣವಾಗಿತ್ತು.

ಹೊಸ್ನಿ ಮುಬಾರಕ್ ವಿರುದ್ಧ ಪ್ರತಿಭಟನಾನಿರತರಾಗಿದ್ದ ಬ್ರದರ್​ಹುಡ್ ಚಳವಳಿಗಾರರ ಸಲಹೆಗಾರನಾಗಿ ಮೊಹಮ್ಮದ್ ಮೊರ್ಸಿ ಕಾರ್ಯನಿರ್ವಹಿಸಿದ್ದರು. ಈ ವೇಳೆ ನಡೆದಿದ್ದ ಸಾಮೂಹಿಕವಾಗಿ ಜೈಲಿನಿಂದ ಪರಾರಿಯಾಗಿದ್ದ ಪ್ರಕರಣದ ತೀರ್ಪು ಹೊರಬಿದ್ದಿದ್ದು ಮೊಹಮ್ಮದ್ ಮೊರ್ಸಿಗೆ ಮರಣ ದಂಡನೆ ವಿಧಿಸಲಾಗಿದೆ.  ತಮ್ಮ ಆಳ್ವಿಕೆ ಅವಧಿಯಲ್ಲಿ ಇಬ್ಬರು ವಿಪಕ್ಷ ಪ್ರತಿಭಟನಾಕಾರರು ಮತ್ತು ಒಬ್ಬ ಪತ್ರಕರ್ತನನ್ನು ತಮ್ಮ ಬೆಂಬಲಿಗರಿಂದ ಹತ್ಯೆ ಮಾಡಿಸಿದ, ಅನೇಕರನ್ನು ಅಕ್ರಮ ಬಂಧನದಲ್ಲಿರಿಸಿದ್ದ ಆರೋಪ ಸಾಬೀತಾಗಿದ್ದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಮೋರ್ಸಿ ಅವರಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com