ಶಾರದಾ ಚಿಟ್ ಫಂಡ್ ಹಗರಣ: ಶೀಘ್ರವೇ ಹಣ ವಾಪಸ್ : ಮಿಥುನ್ ಚಕ್ರವರ್ತಿ ಭರವಸೆ

ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣದಲ್ಲಿ ಭಾಗಿಯಾಗಿರುವ ಬಾಲಿವುಡ್ ನಟ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದ ಮಿಥುನ್ ಚಕ್ರವರ್ತಿ......
ಮಿಥುನ್ ಚಕ್ರವರ್ತಿ
ಮಿಥುನ್ ಚಕ್ರವರ್ತಿ
Updated on

ಕೋಲ್ಕೋತಾ: ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣದಲ್ಲಿ ಭಾಗಿಯಾಗಿರುವ ಬಾಲಿವುಡ್ ನಟ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದ ಮಿಥುನ್ ಚಕ್ರವರ್ತಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ತಾವು ನೀಡಬೇಕಿರುವ ಹಣವನ್ನು ಶೀಘ್ರವೇ ವಾಪಸ್ ನೀಡುವುದಾಗಿ ಅಧಿಕಾರಿಗಳಿಗೆ ವಿಚಾರಣೆ ವೇಳೆ ಭರವಸೆ ನೀಡಿದ್ದಾರೆ.
ಸತತ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ ಅಧಿಕಾರಿಗಳು ಸಂಸದರ ಹೇಳಿಕೆಯನ್ನೆಲ್ಲಾ ರೆಕಾರ್ಡ್ ಮಾಡಿದ್ದಾರೆ. ಹಗರಣದಲ್ಲಿ ನನ್ನ ತಪ್ಪಿಲ್ಲ. ತಾನು ಶಾರದಾ ಚಿಟ್ ಫಂಡ್ ಸಂಸ್ಥೆಯ ರಾಯಭಾರಿಯಾಗಿದ್ದೆ, ಹಣದ ವಂಚನೆಗೂ ತಮಗೂ ಸಂಬಂಧವಿಲ್ಲವೆಂದು ಸ್ಪಷ್ಟನೆ ನೀಡಿರುವ ಮಿಥುನ್ ಚಕ್ರವರ್ತಿ ತಾವು ಕಂಪನ್‌ಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದಗಳ ಸಿಡಿ, ಡಿವಿಡಿ ಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ನೀಡಿದ್ದಾರೆ.
ತಮಗೆ  ಕಂಪನಿ ಜೊತೆ ವೃತ್ತಿಪರ ಸಂಬಂಧವಿತ್ತು. ಯಾರಿಗೂ ವಂಚಿಸುವ ಉದ್ದೇಶ ನನ್ನದಾಗಿರಲಿಲ್ಲ ಎಂದು ವಿಚಾರಣೆ ವೇಳೆ ಹೇಳಿದ್ದಾರೆ.
ಇನ್ನು ಮಿಥುನ್ ಚಕ್ರವರ್ತಿ ಹೇಳಿಕೆಯಿಂದ ತೃಪ್ತರಾಗಿರುವ ಇಡಿ ಅಧಿಕಾರಿಗಳು , ಪ್ರಕರಣ ಸಂಬಂಧ ಮತ್ತೊಮ್ಮೆ ಅವರನ್ನು ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com