ಧಾರ್ಮಿಕತೆಯನ್ನು ಬದಿಗೊತ್ತಿ ಬಾಲಕನ ಜೀವ ಉಳಿಸಿದ ಹರ್ಮನ್ ಸಿಂಗ್

ಕಾರು ಡಿಕ್ಕಿ ಹೊಡೆದ ಪರಿಣಾಮ ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಶಾಲಾ ಬಾಲಕನ ರಕ್ಷಣೆಗಾಗಿ 22 ವರ್ಷದ ಸಿಖ್ ಯುವಕನೊಬ್ಬ ತಲೆ ಮೇಲಿನ ಟರ್ಬನ್ ಬಿಚ್ಚಿ...
ಹರ್ಮನ್ ಸಿಂಗ್ ಟರ್ಬನ್ ಬಿಚ್ಚಿ ಬಾಲಕನ ತಲೆ ಕೆಳಗೆ ಹಾಕಿ ರಕ್ಷಿಸುತ್ತಿರುವ ದೃಶ್ಯ
ಹರ್ಮನ್ ಸಿಂಗ್ ಟರ್ಬನ್ ಬಿಚ್ಚಿ ಬಾಲಕನ ತಲೆ ಕೆಳಗೆ ಹಾಕಿ ರಕ್ಷಿಸುತ್ತಿರುವ ದೃಶ್ಯ

ಆಕ್‌ಲ್ಯಾಂಡ್: ಕಾರು ಡಿಕ್ಕಿ ಹೊಡೆದ ಪರಿಣಾಮ ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಶಾಲಾ ಬಾಲಕನ ರಕ್ಷಣೆಗಾಗಿ 22 ವರ್ಷದ ಸಿಖ್ ಯುವಕನೊಬ್ಬ ತಲೆ ಮೇಲಿನ ಟರ್ಬನ್ ಬಿಚ್ಚಿ ಧಾರ್ಮಿಕ ಶಿಷ್ಟಾಚಾರ ಬದಿಗೊತ್ತಿ ಮಾನವೀಯತೆ ಮೇರಿದ್ದಾನೆ.

ಆಸ್ಟ್ರೇಲಿಯಾದಲ್ಲಿ ಆಕ್ ಲ್ಯಾಂಡ್ ನ ತಮ್ಮ ಮನೆ ಬಳಿ ಹರ್ಮನ್ ಸಿಂಗ್ ನಿಂತಿದ್ದ ಸಂದರ್ಭ ಶಾಲೆಗೆ ತೆರಳುತ್ತಿದ್ದ 5 ವರ್ಷದ ಬಾಲಕನಿಗೆ ಕಾರು ಡಿಕ್ಕಿ ಹೊಡೆದಿದ್ದು, ಪರಿಣಾಮ ಬಾಲಕನಿಗೆ ರಕ್ತಸ್ರಾವವಾಗ ತೊಡಗಿದೆ. ಕೂಡಲೇ ಸ್ಥಳಕ್ಕೆ ಓಡಿಬಂದ ಹರ್ಮನ್ ಬಾಲಕನನ್ನ ರಕ್ಷಿಸಿದ್ದಾನೆ. ಯುವಕನ ಈ ಸೇವೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹರ್ಮನ್ ಸಿಂಗ್, ಈ ಸಂದರ್ಭದಲ್ಲಿ ನನಗೆ  ಟರ್ಬನ್ ತೆಗೆಯುವ ಬಗ್ಗೆ ಯಾವುದೇ ಗೊಂದಲವಿರಲಿಲ್ಲ, ಬಾಲಕನನ್ನ ರಕ್ಷಿಸುವುದಷ್ಟೇ ನನ್ನ ಉದ್ದೇಶವಾಗಿತ್ತು. ರಕ್ತಸ್ರಾವವನ್ನ ಆದಷ್ಟೂ ತಡೆಯಬೇಕಿತ್ತು. ಆ ಬಾಲಕನ ರಕ್ಷಣೆ ನನ್ನ ಹೊಣೆ’ ಎಂದು ಹರ್ಮನ್ ನುಡಿದಿದ್ದಾರೆ.

ಸಿಖ್ ಸಂಪ್ರದಾಯದಲ್ಲಿ ಟರ್ಬನ್ ಅನ್ನ ಎಲ್ಲೂ ತೆಗೆಯುವಂತಿಲ್ಲ. ಆದರೆ, ತುರ್ತು ಸಂದರ್ಭದಲ್ಲಿ ಧಾರ್ಮಿಕ ಶಿಷ್ಟಾಚಾರ ಅಡ್ಡಿಬರುವುದಿಲ್ಲ ಅಂತಾರೆ ಹರ್ಮನ್. ಈ ಸಂದರ್ಭ ಹರ್ಮನ್ ಜೊತೆಯಲ್ಲಿದ್ದ ಧಿಲ್ಲೊನ್ ಘಟನೆಯ ಫೋಟೋಗಳನ್ನ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಸಾರ್ವಜನಿಕರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com