ಡಿಸಿಗೆ ನೋಟಿಸ್ ಜಾರಿ ಮಾಡಿದ್ದು ಮೂರ್ಖತನದ ಕೆಲಸ: ಐಎಎಸ್ ಸಂಸ್ಥೆ

ಬಸ್ತಾರ್ ಜಿಲ್ಲಾಧಿಕಾರಿ ಸನ್ ಗ್ಲಾಸ್ ಧರಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿ ನೋಟಿಸ್ ಪಡೆದ ಪ್ರಕರಣ ಇದೀಗ ಹಲವು ಚರ್ಚೆಗಳಿಗೆ ಕಾರಣವಾಗಿದ್ದು, ಡಿಸಿಗೆ ನೋಟಿಸ್ ಜಾರಿ ಮಾಡಿದ್ದು ಸರ್ಕಾರದ ಮೂರ್ಖತನದ ಕೆಲಸ ಎಂದು ಐಎಎಸ್ ಸಂಸ್ಥೆ ಭಾನುವಾರ ಹೇಳಿದೆ...
ಸನ್ ಗ್ಲಾಸ್ ಧರಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿದ್ದ ಬಸ್ತಾರ್ ಜಿಲ್ಲಾಧಿಕಾರಿ ಅಮಿತ್ ಕಟಾರಿಯಾ
ಸನ್ ಗ್ಲಾಸ್ ಧರಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿದ್ದ ಬಸ್ತಾರ್ ಜಿಲ್ಲಾಧಿಕಾರಿ ಅಮಿತ್ ಕಟಾರಿಯಾ

ಬಸ್ತಾರ್: ಬಸ್ತಾರ್ ಜಿಲ್ಲಾಧಿಕಾರಿ ಸನ್ ಗ್ಲಾಸ್ ಧರಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿ ನೋಟಿಸ್ ಪಡೆದ ಪ್ರಕರಣ ಇದೀಗ ಹಲವು ಚರ್ಚೆಗಳಿಗೆ ಕಾರಣವಾಗಿದ್ದು, ಡಿಸಿಗೆ ನೋಟಿಸ್ ಜಾರಿ ಮಾಡಿದ್ದು ಸರ್ಕಾರದ ಮೂರ್ಖತನದ ಕೆಲಸ ಎಂದು ಐಎಎಸ್ ಸಂಸ್ಥೆ ಭಾನುವಾರ ಹೇಳಿದೆ.

ಪ್ರಧಾನಮಂತ್ರಿ ನಗರ ಭೇಟಿ ಸಂದರ್ಭದಲ್ಲಿರುವ ಸ್ವಾಗತಿಸುವ ಅಥವಾ ಭೇಟಿಯಾಗುವ ಅಧಿಕಾರಿಗಳು ನಿಯಮಗಳನ್ನು ಪಾಲಿಸಬೇಕು ನಿಜ. ಆದರೆ, ಈ ರೀತಿಯ ನಿಯಮಗಳು ನಾಗರೀಕ ಸೇವಾ ಕೈಪಿಡಿಯಲ್ಲಿ ನಮೂದನೆಯಾಗಿಲ್ಲ. ಪ್ರಧಾನಿಯನ್ನು ಸ್ವತಃ ಅಧಿಕಾರಿಯೇ ಭೇಟಿ ಮಾಡಿದ್ದರೆ ಈ ರೀತಿಯ ನಿಯಮ ಪಾಲಿಸಬೇಕಿತ್ತು. ಆದರೆ, ಈ ಪ್ರಕರಣ ಇದಕ್ಕೆ ವಿರುದ್ಧವಾಗಿದೆ. ಹಾಗಾಗಿ ಡಿಸಿಗೆ ನೋಟಿಸ್ ಮಾಡಿರುವ ಸರ್ಕಾರ ಕ್ರಮ ಮೂರ್ಖತನದ ಕೆಲಸ ಎಂದು ಹೇಳಿದೆ.

ಮೇ. 9 ರಂದು ಛತ್ತೀಸ್ ಗಢದ ನಕ್ಸಲ್ ಪೀಡಿತ ಪ್ರದೇಶ ಬಸ್ತಾರ್ ಜಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಐಎಎಸ್ ಅಧಿಕಾರಿ ಅಮಿತ್ ಕಟಾರಿಯಾ ಅವರು, ನಗರ ಭೇಟಿಗೆಂದು ಬಂದಿದ್ದ ನರೇಂದ್ರ ಮೋದಿ ಅವರನ್ನು ಸ್ವಾಗತಿಸುವ ಸಂದರ್ಭದಲ್ಲಿ ಸನ್ ಗ್ಲಾಸ್ (ತಂಪು ಕನ್ನಡಕ) ಹಾಕಿಕೊಂಡಿದ್ದರು. ಹೀಗಾಗಿ ಸರ್ಕಾರ ಕಟಾರಿಯಾ ಅವರಿಗೆ ನೋಟಿಸ್ ಜಾರಿಮಾಡಿತ್ತು. ನೋಟಿಸ್ ನಲ್ಲಿ ಕಟಾರಿಯಾ ಅವರು ಪ್ರಧಾನಿಯನ್ನು ಸ್ವಾಗತಿಸುವ ಸಂದರ್ಭದಲ್ಲಿ  (ಫಾರ್ಮಲ್ ಡ್ರೆಸ್) ಸರಿಯಾದ ರೀತಿಯಲ್ಲಿ ಬಟ್ಟೆ ಹಾಕಿಕೊಂಡಿರಲಿಲ್ಲ. ಅಲ್ಲದೆ, ಸನ್ ಗ್ಲಾಸ್ ಧರಿಸಿ ಅವರನ್ನು ಸ್ವಾಗತಿಸಿದ್ದಾರೆ. ಹೀಗಾಗಿ ಕಟಾರಿಯಾ ಪ್ರಧಾನಿಗೆ ಅಗೌರವ ಸೂಚಿಸಿದ್ದಾರೆ. ಇದು ಆಲ್ ಇಂಡಿಯಾ ಸರ್ವಿಸ್ ರೂಲ್ಸ್ ಸೆಕ್ಷನ್ 3(1) ಉಲ್ಲಂಘನೆಯಾಗಿದೆ ಎಂದು ಹೇಳಿತ್ತು.

ಸರ್ಕಾರದ ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದ ಐಎಎಸ್ ಅಧಿಕಾರಿ, ಬೇಸಿಗೆಯಲ್ಲಿ ಇಲ್ಲಿನ ವಾತಾವರಣ 45 ಡಿ.ಸೆ ನಷ್ಟಿರುತ್ತದೆ. ಇಂತಹ ವಾತಾವರಣದಲ್ಲಿ ಫಾರ್ಮಲ್ ಬಟ್ಟೆಗಳನ್ನು ಧರಿಸುವುದು, ಸನ್ ಗ್ಲಾಸ್ ಹಾಕದೆ ಹೊರಾಂಗಣದಲ್ಲಿರುವುದು ಬಹಳ ಕಷ್ಟಕರವಾಗಿರುತ್ತದೆ ಎಂದು ಹೇಳಿದ್ದರು.

ಐಎಎಸ್ ಅಧಿಕಾರಿಯ ಈ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿರುವ ಐಎಎಸ್ ಅಧಿಕಾರಿಗಳ ಸಂಸ್ಥೆಯು ಅಧಿಕಾರಿ ಹೇಳಿದ್ದು ಸತ್ಯ, ಬಿರುಬಿಸಿಲಿನ ಸಂದರ್ಭದಲ್ಲಿ ಈ ರೀತಿಯ ನಿಯಮಗಳನ್ನು ಪಾಲಿಸುವುದು ಕಷ್ಟಕರವಾಗಿರುತ್ತದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com