ಗಿನ್ನಿಸ್ ಪುಸ್ತಕದಲ್ಲಿ ಸ್ಥಾನ ಗಿಟ್ಟಿಸಿದ ಸ್ಟ್ರಾಬೆರ್ರಿ !

ಜಗತ್ತಿನಲ್ಲೇ ಅತೀ ದೊಡ್ಡ ಸ್ಟ್ರಾಬೆರ್ರಿ ಜಪಾನಿನಲ್ಲಿ ಬೆಳೆದಿದೆ. ಇಲ್ಲಿನ ಫುಕೋಂಕಾದಲ್ಲಿ ಕೋಜೋ ನಕಾವೋ ಎಂಬವರ ತೋಟದಲ್ಲಿ ಬೆಳೆದಿರುವ ಈ ಸ್ಟ್ರಾಬೆರ್ರಿ...
ಸ್ಟ್ರಾಬೆರ್ರಿ
ಸ್ಟ್ರಾಬೆರ್ರಿ

ಟೋಕಿಯೋ: ಜಗತ್ತಿನಲ್ಲೇ ಅತೀ ದೊಡ್ಡ ಸ್ಟ್ರಾಬೆರ್ರಿ ಜಪಾನಿನಲ್ಲಿ ಬೆಳೆದಿದೆ. ಇಲ್ಲಿನ ಫುಕೋಂಕಾದಲ್ಲಿ ಕೋಜೋ ನಕಾವೋ ಎಂಬವರ ತೋಟದಲ್ಲಿ ಬೆಳೆದಿರುವ ಈ ಸ್ಟ್ರಾಬೆರ್ರಿ 250 ಗ್ರಾಂ ತೂಕವಿದೆ. ಅತೀ ದೊಡ್ಡ ಸ್ಟ್ರಾಬೆರ್ರಿ ಎಂದೇ ವಿಶ್ವ ದಾಖಲೆ ಸೃಷ್ಟಿಸಿರುವ ಇದು ಎಂಟು ಸೆ.ಮೀ ಎತ್ತರ, 12 ಸೆಮೀ ಉದ್ದ, 30 ಸೆ.ಮೀ ಸುತ್ತಳತೆ ಹೊಂದಿದೆ.

ಒಂದಕ್ಕಿಂತ ಹೆಚ್ಚು ಬೀಜಗಳು ಒಟ್ಟು ಸೇರಿರುವುದರಿಂದ ಇಷ್ಟೊಂದು ದೊಡ್ಡ ಸ್ಟ್ರಾಬೆರ್ರಿ ಬೆಳೆದಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಜಪಾನಿನಲ್ಲಿ 'ಅಮಾವೋ' ಪ್ರಬೇಧಕ್ಕೆ ಸೇರಿರುವ ಈ ಸ್ಟ್ರಾಬೆರ್ರಿ ಈಗ ಗಿನ್ನಿಸ್ ಪುಸ್ತಕದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.

1983ರಲ್ಲಿ ಇಂಗ್ಲೆಂಡ್‌ನ ಜಿ. ಆ್ಯಂಡರ್‌ಸನ್ ಎಂಬವರು ಬೆಳೆದಿದ್ದ 231 ಗ್ರಾಂ ತೂಕದ ಸ್ಟ್ರಾಬೆರ್ರಿಯ ದಾಖಲೆಯನ್ನು ಮುರಿದು 32 ವರ್ಷಗಳ ನಂತರ ಜಪಾನ್‌ನ ರೈತ ಬೆಳೆದ ಸ್ಟ್ರಾಬೆರ್ರಿ ದಾಖಲೆ ಸೃಷ್ಟಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com