ಅರುಣಾ ಶಾನುಭಾಗ್ ಗೆ ಅಂತಿಮ ವಿದಾಯ

ಸೆಂಟ್ರಲ್ ಮುಂಬೈಯ ಕೆಇಎಂ ಆಸ್ಪತ್ರೆಯಲ್ಲಿ ಸೋಮವಾರ ಇಹಲೋಕ ತ್ಯಜಿಸಿದ ನರ್ಸ್ ಅರುಣಾ ಶಾನುಭಾಗ್ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಆಸ್ಪತ್ರೆಯ ಮುಖ್ಯಸ್ಥರು ಕೆಲವು ಬಂಧು ಮಿತ್ರರ ಸಮ್ಮುಖದಲ್ಲಿ ನೆರವೇರಿಸಿದರು...
ಅರುಣಾ ಶಾನುಭಾಗ್
ಅರುಣಾ ಶಾನುಭಾಗ್

ಮುಂಬೈ:ಸೆಂಟ್ರಲ್  ಮುಂಬೈಯ ಕೆಇಎಂ ಆಸ್ಪತ್ರೆಯಲ್ಲಿ ಸೋಮವಾರ ಇಹಲೋಕ ತ್ಯಜಿಸಿದ ನರ್ಸ್ ಅರುಣಾ ಶಾನುಭಾಗ್ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಆಸ್ಪತ್ರೆಯ ಮುಖ್ಯಸ್ಥರು ಕೆಲವು ಬಂಧು ಮಿತ್ರರ ಸಮ್ಮುಖದಲ್ಲಿ ನೆರವೇರಿಸಿದರು.

42 ವರ್ಷಗಳ ಕಾಲ ಜೀವಂತ ಶವವಾಗಿ ವೈದ್ಯರು ಮತ್ತು ದಾದಿಯರ ಆರೈಕೆಯಲ್ಲಿದ್ದು ಸಾವನ್ನಪ್ಪಿದ ಅರುಣಾ ಶಾನುಭಾಗ್ ಅವರ ಅಂತಿಮ ಸಂಸ್ಕಾರವನ್ನು ತಾವೇ ಮಾಡಬೇಕೆಂದು ಅವರ ಸಮೀಪದ ಬಂಧು ಮಿತ್ರರು ಹಠ ಹಿಡಿದಿದ್ದಾರೆ.

ಆಸ್ಪತ್ರೆಯ ಒಳಗೆ ಹೋಗಲು, ಅರುಣಾ ಮೃತದೇಹವನ್ನು ನೋಡಲು ಮತ್ತು ಮುಟ್ಟಲು  ಆಸ್ಪತ್ರೆಯ ಅಧಿಕಾರಿಗಳು ನಮಗೆ ಅವಕಾಶ ನೀಡಲಿಲ್ಲ. ವಿನಾ ಕಾರಣ ನಮಗೆ ತೊಂದರೆ ನೀಡಿದರು ಎಂದು ಅರುಣಾ ಸಂಬಂಧಿಕರು ಮಾಧ್ಯಮಗಳ ಮುಂದೆ ತಮ್ಮ ನೋವು ತೋಡಿಕೊಂಡರು.

ಅರೋಪಕ್ಕೆ ಪ್ರತಿಕ್ರಿಯಿಸಿದ ದಾದಿಯೊಬ್ಬರು," ದಶಕಗಳ ಕಾಲ ನಾವು ಅರುಣಾ ಅವರನ್ನು ನೋಡಿಕೊಂಡದ್ದರಿಂದ ಅಂತಿಮ ಕಾರ್ಯವನ್ನು  ನಾವೇ ನೆರವೇರಿಸುವುದಾಗಿ ವಾದಿಸಿದರು. 

 ನಂತರ ಒಂದು ಸಹಮತಕ್ಕೆ ಬಂದ ಆಸ್ಪತ್ರೆ ಸಿಬ್ಬಂದಿ ಮತ್ತು ಕುಟುಂಬಸ್ಥರು ಮುಂಬೈಯ ಬೊಯಿವಾಡಾ ಶವಾಗಾರದಲ್ಲಿ ಒಟ್ಟಿಗೆ ಅಂತ್ಯಸಂಸ್ಕಾರ ನೆರವೇರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com