ಸಾಮಾಜಿಕ ಮಾಧ್ಯಮ ಬಳಕೆಯಲ್ಲಿ ಮೋದಿ ಮುಂಚೂಣಿ

ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯ ರಾಜಕೀಯ ನಾಯಕ...
ನರೇಂದ್ರ ಮೋದಿ
ನರೇಂದ್ರ ಮೋದಿ

ವಾಷಿಂಗ್ಟನ್: ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅತಿ ಜನಪ್ರಿಯ ನಾಯಕ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ನಂತರ ಸಾಮಾಜಿಕ ಮಾಧ್ಯಮವನ್ನು ಯಶಸ್ವಿಯಾಗಿ ಬಳಸಿದ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಪಾತ್ರರಾಗಿದ್ದಾರೆ.

ಅಮೆರಿಕದ ತಜ್ಞ ಜೊಯೊಜೀತ್ ಪಾಲ್ ಎಂಬುವವರು ಇತ್ತೀಚೆಗೆ ಟೆಲಿವಿಷನ್ ಮತ್ತು ನ್ಯೂ ಮೀಡಿಯಾ ಪತ್ರಿಕೆಗಳಿಗೆ ಬರೆದ ಲೇಖನಗಳಲ್ಲಿ ಈ ವಿಷಯ ಉಲ್ಲೇಖಿಸಿದ್ದಾರೆ. ಮೋದಿ ಅವರು ತಮ್ಮ ಸಾರ್ವಜನಿಕ ಜೀವನದಲ್ಲಿ ಸಾಮಾಜಿಕ ಜಾಲತಾಣಗಳನ್ನು ಯಶಸ್ವಿಯಾಗಿ ಬಳಸುತ್ತಿದ್ದು, ಇಂದಿನ ಯುವ ಜನರಿಗೆ ಪ್ರೇರಣೆಯಾಗಿದ್ದಾರೆ.

 ಅವರು ಸಾರ್ವತ್ರಿಕ ಚುನಾವಣಾ ಪ್ರಚಾರ ಸಂದರ್ಭದಲ್ಲಿ ತಮ್ಮ ರಾಜಕೀಯ ದೃಷ್ಟಿಕೋನದ ಬಗ್ಗೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು. ಭಾರತ ರಾಷ್ಟ್ರದ ಘಟನೆಗಳನ್ನು,ಹಬ್ಬಗಳನ್ನು ಅದರಲ್ಲಿ ಪ್ರಸ್ತಾಪಿಸಿದ್ದರು. ಸಾರ್ವಜನಿಕರಿಗೆ ಉಪಯುಕ್ತವಾಗುವ ವಿಷಯಗಳನ್ನು ಹಂಚಿಕೊಳ್ಳುವಂತೆ,ದೇಶದ ಯುವ ಮತದಾರರನ್ನು ಸೆಳೆಯುವಂತೆ  ಪ್ರಮುಖ ವ್ಯಕ್ತಿಗಳನ್ನು ಅವರು ಟ್ವಿಟ್ಟರ್ ಗೆ ಆಹ್ವಾನಿಸಿದ್ದರು. ಇವೆಲ್ಲ ಸಾರ್ವಜನಿಕ ಜೀವನದಲ್ಲಿ ಬಹು ಮುಖ್ಯ ಅಂಶವಾಗುತ್ತವೆ. ಅಲ್ಲದೆ ಅವರು, ಹೊಸ ತಂತ್ರಜ್ಞಾನಗಳನ್ನು  ಬೇಗನೆ ಅಳವಡಿಸಿಕೊಳ್ಳುತ್ತಾರೆ ಎಂದೂ ಪಾಲ್ ಹೇಳಿದ್ದಾರೆ.

ಟ್ವಿಟ್ಟರ್ ನಲ್ಲಿ 12.3 ದಶಲಕ್ಷ ಮಂದಿ ಮೋದಿಯವರ ಅನುಯಾಯಿಗಳಿದ್ದರೆ,ಭಾರತದಲ್ಲಿ ಅವರ ನಂತರ ಸಂಸದ ಶಶಿ ತರೂರ್ ಅವರು 3 ದಶಲಕ್ಷ ಮಂದಿ ಅನುಯಾಯಿಗಳನ್ನು ಹೊಂದುವ ಮೂಲಕ ನಂತರದ ಸ್ಥಾನದಲ್ಲಿದ್ದಾರೆ.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com