ಆರ್‌ಕೆ ಪಚೌರಿ ನಿರೀಕ್ಷಣಾ ಜಾಮೀನು ರದ್ದು ಮಾಡಲು ದೆಹಲಿ ಹೈಕೋರ್ಟ್ ನಕಾರ

ಮಹಿಳಾ ಸಹದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ವಿಜ್ಞಾನಿ ರಾಜೇಂದ್ರ ಕೆ ಪಚೌರಿ ಅವರ ನಿರೀಕ್ಷಣಾ ಜಾಮೀನು ರದ್ದು ಮಾಡಲು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ...
ಆರ್ ಕೆ ಪಚೌರಿ
ಆರ್ ಕೆ ಪಚೌರಿ

ನವದೆಹಲಿ: ಮಹಿಳಾ ಸಹದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ವಿಜ್ಞಾನಿ ರಾಜೇಂದ್ರ.ಕೆ. ಪಚೌರಿ ಅವರ ನಿರೀಕ್ಷಣಾ ಜಾಮೀನು ರದ್ದು ಮಾಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಮೂರ್ತಿ ಎಸ್.ಪಿ ಗಾರ್ಗ್ ಅವರು ಪಚೌರಿ ಅವರಿಗೆ ನೀಡಿರುವ ಜಾಮೀನನ್ನು ರದ್ದು ಮಾಡುವಂತೆ ಕೋರಿ ಸಂತ್ರಸ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಪಚೌರಿ ಜಾಮೀನು ರದ್ದು ಮಾಡಲು ನಿರಾಕರಿಸಿರುವ ಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಪಾತ್ರದ ಕುರಿತಂತೆ ಪ್ರತಿಕ್ರಿಯಿಸುವಂತೆ ಸೂಚಿಸಿದೆ.

ತಮ್ಮ ಪ್ರತಿಕ್ರಿಯೆ ನೀಡಲು ನಾಲ್ಕು ವಾರಗಳ ಗಡುವು ನೀಡಿರುವ ನ್ಯಾಯಮೂರ್ತಿಗಲು ಜುಲೈ 16ರರೊಳಗೆ ತಿಳಿಸುವಂತೆ ಆದೇಶಿಸಿದೆ.

ವಿಚಾರಣೆ ವೇಳೆ ಹಿರಿಯ ವಕೀಲರಾದ ರಮೇಶ್ ಗುಪ್ತ ಮತ್ತು ದಯಾನ್ ಕ್ರಿಷ್ಣನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಕಲಾವಕಾಶ ನೀಡುವಂತೆ ಮನವಿ ಮಾಡಿದ್ದರು.

ಇಂಧನ ಹಾಗೂ ಸಂಪನ್ಮೂಲಗಳ ಸಂಸ್ಥೆಯ ಯುವ ಸಂಶೋಧಕಿರೊಬ್ಬರು ರಾಜೇಂದ್ರ ಕೆ. ಪಚೌರಿ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಇದಾದ ಬಳಿಕ ಪಚೌರಿ ಅವರು ತಮ್ಮ ಹವಾಮಾನ ಬದಲಾವಣೆ ಕುರಿತು ಸಂಶೋಧನೆ ನಡೆಸುವ ಅಂತರಸರ್ಕಾರಿ ಸಂಸ್ಥೆಯ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com