ಹಂಗೇರಿಯಾ ಲೇಖಕ ಲಾಸ್ಲೋ ಕ್ರಜ್ನ ಹೊರ್ಕೈ ಅವರಿಗೆ ಮ್ಯಾನ್ ಬೂಕರ್ ಪ್ರಶಸ್ತಿ

ಹಂಗೇರಿಯಾದ ಲೇಖಕ ಲಾಸ್ಲೋ ಕ್ರಜ್ನ ಹೊರ್ಕೈ ಅವರಿಗೆ ಈ ವರ್ಷದ ಪ್ರತಿಷ್ಠಿತ ಮ್ಯಾನ್ ಬೂಕರ್ ಪ್ರಶಸ್ತಿ ಲಭಿಸಿದೆ...
ಲಾಸ್ಲೋ ಕ್ರಜ್ಮ ಹೊರ್ಕೈ
ಲಾಸ್ಲೋ ಕ್ರಜ್ಮ ಹೊರ್ಕೈ

ಲಂಡನ್ :ಹಂಗೇರಿಯಾದ ಲೇಖಕ ಲಾಸ್ಲೋ ಕ್ರಜ್ನ ಹೊರ್ಕೈ ಅವರಿಗೆ ಈ ವರ್ಷದ ಪ್ರತಿಷ್ಠಿತ ಮ್ಯಾನ್ ಬೂಕರ್ ಪ್ರಶಸ್ತಿ ಲಭಿಸಿದೆ.

ಪ್ರಶಸ್ತಿಯ ಮೊತ್ತ 60 ಸಾವಿರ ಡಾಲರ್ ಆಗಿದೆ. ಈ ವರ್ಷ ಅಂತಿಮ ಸುತ್ತಿಗೆ ಆಯ್ಕೆಗೊಂಡ 10 ಮಂದಿ ಲೇಖಕರ ಪೈಕಿ ಭಾರತದ ಅಮಿತವ್ ಘೋಷ್ ಕೂಡ ಇದ್ದರು. ಅಂತಿಮವಾಗಿ ಕ್ರಜ್ನ ಹೊರ್ಕೈ ಅವರನ್ನು ಆಯ್ಕೆ ಮಾಡಲಾಯಿತು.

''ಲಾಸ್ಲೋ ಕ್ರಜ್ಮಹೊರ್ಕೈ ಅವರ ಬರಹದಲ್ಲಿ ಅಸಾಮಾನ್ಯ ತೀವ್ರತೆ ಮತ್ತು ಸ್ವರ ಶ್ರೇಣಿಯಿದೆ.ಅವರು ಒಬ್ಬ ದಾರ್ಶನಿಕ ಬರಹಗಾರರಾಗಿದ್ದು, ಪ್ರಸ್ತುತ ಕಾಲಮಾನದ ವಿದ್ಯಾಮಾನಗಳ ಬಗ್ಗೆ ದೃಶ್ಯಗಳನ್ನು ಅದ್ಭುತವಾಗಿ ಸೆರೆಹಿಡಿಯುತ್ತಾರೆ ಎಂದು ತೀರ್ಪುಗಾರರು ಮುಖ್ಯಸ್ಥೆ ಮರಿನಾ ವಾರ್ನರ್ ಶ್ಲಾಘಿಸಿದ್ದಾರೆ.

ಪ್ರತಿ ಎರಡು ವರ್ಷಗಳಿಗೊಮ್ಮೆ ಇಂಗ್ಲೀಷ್ ಅಥವಾ ಬೇರೆ ಭಾಷೆಗಳಿಂದ  ಇಂಗ್ಲೀಷ್ ಗೆ ಅನುವಾದ ಮಾಡಿದ ಬದುಕುಳಿದಿರುವ ಲೇಖಕರ ಸಮಗ್ರ ಬರಹಗಳಿಗೆ ಮ್ಯಾನ್ ಬೂಕರ್ ಪ್ರಶಸ್ತಿ ನೀಡಲಾಗುತ್ತದೆ.

 ಕ್ರಜ್ನ ಹೊರ್ಕೈ ಅವರ ಕೃತಿಯನ್ನು ಹಂಗೇರಿಯಾ ಭಾಷೆಯಿಂದ ಇಂಗ್ಲೀಷ್ ಗೆ ತರ್ಜುಮೆ ಮಾಡಿದ ಜಾರ್ಜ್ ಸಿಟ್ಸ್ರ್ ಮತ್ತು ಒಟ್ಟಿಲಿ ಮುಲ್ ಜೆಟ್ ಅವರಿಗೆ ತಲಾ 15 ಸಾವಿರ ಡಾಲರ್ ರೂಪಾಯಿ ಬಹುಮಾನ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com