ಒಸಾಮಾ ಬಿನ್ ಲಾಡೆನ್ ಕುರಿತ ವಿಡಿಯೋ ಬಿಡುಗಡೆ

ಭಯೋತ್ಪಾದಕ ಸಂಘಟನೆ ಆಲ್-ಖೈದಾದ ಮಾಜಿ ನಾಯಕ ಒಸಾಮಾ ಬಿನ್ ಲಾಡೆನ್ ಕುರಿತಾದ ಮಾಹಿತಿ ಹೊತ್ತ ವಿಡಿಯೋ,ಆತನ ಪತ್ನಿಗೆ ಬರೆದಿರುವ ಪತ್ರಗಳು ಬುಧವಾರ ಹೊರಬಿದ್ದಿವೆ...
ಒಸಾಮಾ ಬಿನ್ ಲಾಡೆನ್
ಒಸಾಮಾ ಬಿನ್ ಲಾಡೆನ್
Updated on: 

ವಾಷಿಂಗ್ಟನ್ : ಭಯೋತ್ಪಾದಕ ಸಂಘಟನೆ ಆಲ್-ಖೈದಾದ ಮಾಜಿ ನಾಯಕ ಒಸಾಮಾ ಬಿನ್ ಲಾಡೆನ್ ಕುರಿತಾದ ಮಾಹಿತಿ ಹೊತ್ತ ವಿಡಿಯೋ,ಆತನ ಪತ್ನಿಗೆ ಬರೆದಿರುವ ಪತ್ರಗಳು ಬುಧವಾರ ಹೊರಬಿದ್ದಿದ್ದು, ಅದರಲ್ಲಿ ಬಿನ್ ಲಾಡೆನ್ ಕುರಿತಾದ ಅನೇಕ ಅಂಶಗಳು ಹೊರಬಿದ್ದಿವೆ.

ಅದರಲ್ಲಿ ಅಮೆರಿಕ ಲಾಡೆನ್ ನನ್ನು ಹೇಗೆ ಕೊಂದು ಹಾಕಿತು  ಎಂಬ ಬಗ್ಗೆ ಸಹ ವಿವರಣೆಯಿದೆ. ಭಯೋತ್ಪಾದಕ ಸಂಘಟನೆಯನ್ನು ಹುಟ್ಟುಹಾಕಲು ಆತ ಅನುಭವಿಸಿದ ಯಾತನೆಗಳನ್ನು ಅದರಲ್ಲಿ ವಿವರಿಸಲಾಗಿದೆ.

ಅಮೆರಿದ ಅವಳಿ ಕಟ್ಟಡಗಳ ಮೇಲೆ 2001, ಸೆಪ್ಟೆಂಬರ್ 11ರಂದು ನಡೆದ ದಾಳಿಯ ನಂತರ ಆಫ್ಘಾನಿಸ್ತಾನದಿಂದ ಒಡಿ ಹೋದ ಬಗ್ಗೆಯೂ ಅದರಲ್ಲಿ ವಿವರಿಸಲಾಗಿದೆ.

ವಿಡಿಯೋ ಟೇಪ್ ನಲ್ಲಿ ಒಸಮಾ ಬಿನ್ ಲಾಡೆನ್ ತನ್ನ ಸಹಚರರಿಗೆ ನೀಡುತ್ತಿದ್ದ ಮಾರ್ಗದರ್ಶನ, ಆತನ ಪತ್ನಿಗೆ ಬರೆದಿರುವ ಪತ್ರಗಳೂ ಸಿಕ್ಕಿವೆ. ತನ್ನ ಸಾವಿನ ನಂತರ ಇನ್ನೊಂದು ಮದುವೆ ಮಾಡಿಕೊಳ್ಳುವಂತೆ ಅವನು ಪತ್ನಿಗೆ ಒತ್ತಾಯಿಸಿದ್ದನು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com