
ವಾಷಿಂಗ್ಟನ್: ಇರಾಕ್ ಮತ್ತು ಸಿರಿಯಾವನ್ನು ಇಸ್ಲಾಂಮಿಕ್ ಸ್ಟೇಟ್ ಮಾಡುವುದಾಗಿ ಘೋಷಿಸಿಕೊಂಡಿರುವ ಇಸಿಸ್ ಉಗ್ರ ಸಂಘಟನೆ ಆ ಭಾಗದಲ್ಲಿ ವಿದ್ವಂಸಕ ಕೃತ್ಯಗಳನ್ನು ಎಸಗುವ ಮೂಲಕ ತನ್ನ ಹಿಂಸಾ ಪ್ರವೃತ್ತಿಯನ್ನು ತೋರಿಸುತ್ತಿದ್ದು, ದೊಡ್ಡ ಮಟ್ಟದಲ್ಲಿ ಭಾರೀ ಪ್ರಮಾಣದ ದುಷ್ಕೃತ್ಯವನ್ನು ಎಸಗುವುದಕ್ಕಾಗಿ ಪಾಕಿಸ್ತಾನದಿಂದ ವಿದ್ವಂಸಕಾರಿ ಅಣ್ವಸ್ತ್ರ ಕೊಂಡುಕೊಳ್ಳುವ ಹವಣಿಕೆಯಲ್ಲಿದೆ ಎನ್ನಲಾಗಿದೆ.
2012ರಿಂದ ಇಸಿಸ್ ಬಂಧನದಲ್ಲಿರುವ ಜಾನ್ ಕ್ಯಾನ್ಟೀಲ್ ಇಸಿಸ್ ನ ಕಾರ್ಯವೈಖರಿಗಳ ಬಗ್ಗೆ ನಿರಂತರವಾಗಿ ಬರೆಯುತ್ತಿದ್ದಾರೆ. ಇಸ್ಲಾಮಿಕ್ ಸ್ಟೇಟ್ ನ ಪ್ರಚಾರ ನಿಯತಕಾಲಿಕೆಯಲ್ಲಿ ನ್ಯೂಕ್ಲಿಯರ್ ಬಾಂಬ್ ಖರೀದಿಸುವ ಬಗ್ಗೆ ಬರೆಯಲಾಗಿದೆ. ಕೆಲ ಭ್ರಷ್ಟ ಅಧಿಕಾರಿಗಳ ಮೂಲಕ ಅಣ್ವಸ್ತ್ರಗಳ ಖರೀದಿಗೆ ಇಸಿಸ್ ಪ್ರಯತ್ನಿಸುತ್ತಿದೆ ಎಂದು ಬರೆದಿದ್ದಾರೆ.
ಬ್ರಿಟಿಷ್ ಫೋಟೋ ಜರ್ನಲಿಸ್ಟ್ ಜೋನ್ ಕಾಂಟಿಲ್ ಅವರ ಫರ್ಪೇಕ್ಟ್ ಸ್ಟೋರ್ಮ್ ಲೇಖನದಲ್ಲಿ ಇಸಿಸ್ ಉಗ್ರರು ಅಪಾಯಕಾರಿ ಶಸ್ತ್ರಾಸ್ತ್ರಗಳು ಕೊಳ್ಳಲು ಬಿಲಿಯನ್ ಗಟ್ಟಲೆ ಡಾಲರ್ ನ್ನು ವ್ಯಯಿಸಲು ಮುಂದಾಗಿದೆ. ಅದರಂತೆ ತಮ್ಮ ದುಷ್ಕೃತ್ಯವನ್ನು ಮತ್ತಷ್ಟು ಪರಿಮಾಣಕಾರಿಯಾಗಿ ಮಾಡುವ ಸಲುವಾಗಿ ಜಗತ್ತಿನ ಮಟ್ಟದಲ್ಲಿ ದೊಡ್ಡ ದುಷ್ಕೃತ್ಯ ಎಸಗುವ ಉದ್ದೇಶ ಹೊಂದಿದ್ದು, ಇದಕ್ಕಾಗಿ ಮುಂದಿನ ವರ್ಷದೊಳಗೆ ಪಾಕಿಸ್ತಾನದಿಂದ ಅಣ್ವಸ್ತ್ರ ಖರೀದಿಸಲು ಚಿಂತನೆ ನಡೆಸಿದೆ ಎಂದಿದೆ.
ಕ್ಯಾಟೀಲ್ ಇಸಿಸ್ ನ ಪರ ಲೇಖನಗಳನ್ನು ಬರೆಯುತ್ತಿದ್ದಾರೆ. ಅಲ್ಲದೆ ಇಸಿಸ್ ನ ದುಷ್ಕೃತ್ಯಗಳ ವಿಡಿಯೋಗಳನ್ನು ಯೂಟೂಬ್ ಗೆ ಅಪ್ ಲೋಡ್ ಮಾಡುತ್ತಾ ಬಂದಿದ್ದಾರೆ.
ಇಸಿಸ್ ಉಗ್ರ ಸಂಘಟನೆಯ ಧಮನಕ್ಕೆ ಮುಂದಾಗಿರುವ ಅಮೆರಿಕ ಪಡೆಗಳ ವಿರುದ್ಧ ಈ ಅಣ್ವಸ್ತ್ರ ಬಳಸುವ ಯೋಜನೆಯನ್ನು ಸಂಘಟನೆ ಇಟ್ಟುಕೊಂಡಿದೆ ಎಂದು ಬರೆದಿದ್ದಾರೆ.
Advertisement