ಸ್ವಾತಂತ್ರ್ಯದಿಂದಲೂ ಮುಸ್ಲಿಂರು ಪರಕೀಯ ಭಾವನೆಯಲ್ಲೆ ಬದುಕುತ್ತಿದ್ದಾರೆ: ನಜ್ಮಾ ಹೆಫ್ತುಲ್ಲಾ

ಮುಸ್ಲಿಂರು ಪರಕೀಯರು ಎಂಬ ಭಾವನೆ ಈಗಿನಿಂದಲ್ಲ ಸ್ವಾತಂತ್ರ್ಯ ಸಿಕ್ಕ ನಂತರದಿಂದಲೂ ಇದೆ. ಇದೇ ಭಾವನೆಯಲ್ಲೇ ಬದುಕುತ್ತಿದ್ದೇವೆ ಎಂದು ಕೆಂದ್ರ...
ನಜ್ಮಾ ಹೆಫ್ತುಲ್ಲಾ
ನಜ್ಮಾ ಹೆಫ್ತುಲ್ಲಾ

ನವದೆಹಲಿ: ಮುಸ್ಲಿಂರು ಪರಕೀಯರು ಎಂಬ ಭಾವನೆ ಈಗಿನಿಂದಲ್ಲ ಸ್ವಾತಂತ್ರ್ಯ ಸಿಕ್ಕ ನಂತರದಿಂದಲೂ ಇದೆ. ಇದೇ ಭಾವನೆಯಲ್ಲೇ ಬದುಕುತ್ತಿದ್ದೇವೆ ಎಂದು ಕೆಂದ್ರ ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವೆ ನಜ್ಮಾ ಹೆಪ್ತುಲ್ಲಾ ಭಾನುವಾರ ಹೇಳಿದ್ದಾರೆ.

ಖಾಸಗಿ ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸಂದರ್ಭದಲ್ಲಿ ಈ ಅವರು ರೀತಿ ಅಭಿಪ್ರಾಯಪಟ್ಟಿದ್ದು, ಬಿಜೆಪಿ ಸರ್ಕಾರವಿದ್ದಾಗ ಅಲ್ಪಸಂಖ್ಯಾತರಿಗೆ ಭದ್ರತೆ ಇರುವುದಿಲ್ಲ ಎಂಬುದನ್ನು ಅವರು ಅಲ್ಲಗಳೆದರು. ಈಗ ಮಾತ್ರವಲ್ಲ ಸ್ವಾತಂತ್ರ್ಯನಂತರದಿಂದಲೂ ಮುಸ್ಲಿಮರು ಪರಕೀಯರೆಂಬ ಭಾವನೆಯಲ್ಲೇ ಇದ್ದಾರೆ. ಇದಕ್ಕೆ ಕಾಂಗ್ರೆಸ್‌ ಸರ್ಕಾರ ಮಾಡಿದ ಯೋಜನೆಗಳು ಮತ್ತು ಮಸೂದೆಗಳೇ ಕಾರಣ ಎಂದು ಆರೋಪಿಸಿದ್ದಾರೆ.

ಮುಸ್ಲಿಂರು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಅಂಶವೇ ಅವರನ್ನು ಪರಕೀಯ ಭಾವನೆಗೆ ತಳ್ಳಿದೆ ಎಂದು ನಜ್ಮಾ ಹೆಫ್ತುಲ್ಲಾ ಅಭಿಪ್ರಾಯಪಟ್ಟರು.

ಜಾತ್ಯಾತೀತತೆಯ ಮಂತ್ರ ಪಠಿಸುವ ಕಾಂಗ್ರೆಸ್ ಮುಸ್ಲಿಮರಿಗೆ ಕೇವಲ ‘ಬಾಯಿ ಮಾತಿನಲ್ಲಿ’ ಬೆಂಬಲ ನೀಡುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸುವ ಮೂಲಕ ಅವರಲ್ಲಿನ ಪರಕೀಯ ಭಾವನೆಯನ್ನು ದೂರ ಮಾಡಲು ಯತ್ನಿಸುತ್ತಿದೆ ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com