
ನವದೆಹಲಿ: ಸಂಸತ್ ಮೇಲೆ ದಾಳಿ ನಡೆಸಿದ ಉಗ್ರ ಅಫ್ಜಲ್ ಗುರುವನ್ನು ಕಾಂಗ್ರೆಸ್ ರಾಜಕೀಯ ದುರುದ್ದೇಶದಿಂದ ಗಲ್ಲಿಗೇರಿಸಿತು ಎಂದು ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ದೂರಿದ್ದಾರೆ.
ಗಲ್ಲಿಗೇರಿಸುವ ಕೆಲ ಘಂಟೆಗಳ ಮುಂದೆಯಷ್ಟೇ ಸರ್ಕಾರ, ಅಪ್ಜಲ್ ಗುರುವಿಗೆ ವಿಷಯ ತಿಳಿಸಲಾಗಿತ್ತು. ಅಂದಿನ ದಿನ ನಾನು ನನ್ನ ಸಹೋದರಿ ಜೊತೆಗೆ ದೆಹಲಿಯ ರೆಸ್ಟೋರೆಂಟ್ ಗೆ ಊಟಕ್ಕೆ ತೆರಳಿದ್ದೆ.ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಕರೆ ಮಾಡಿ ನಾಳೆ ಬೆಳಗ್ಗೆ ಉಗ್ರ ಅಫ್ಜಲ್ ಗುರುವನ್ನು ಗಲ್ಲಿಗೇರಿಸುತ್ತಿರುವುದಾಗಿ, ಸಂಬಂಧ ಪಟ್ಟ ಕಾಗದ ಪತ್ರಗಳಿಗೆ ಸಹಿ ಹಾಕುತ್ತಿರುವುದಾಗಿ ತಿಳಿಸಿದರು ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಫೆಬ್ರವರಿ 9 2013 ರಂದು ಅಫ್ಜಲ್ ಗುರುವನ್ನು ಗಲ್ಲಿಗೇರಿಸಲಾಗಿತ್ತು. ಅಫ್ಜಲ್ ಗುರುವಿನ ವಿಷ್ಯದಲ್ಲಿ ಕೊನೆಯ ಕ್ಷಣದವರೆಗೂ ಏನು ಮಾಡಲಾಗದು ಎಂದು ಗೃಹ ಸಚಿವರಿಗೂ ಗೊತ್ತಿತ್ತು. ಸತ್ಯ ಇಷ್ಟ ಆಗಲಿ, ಆಗದೇ ಇರಲಿ ಅಫ್ಜಲ್ ನನ್ನು ರಾಜಕೀಯ ಕಾರಣಕ್ಕಾಗಿ ಗಲ್ಲಿಗೇರಿಸಲಾಗುತ್ತಿದೆ ಎಂದು ಸುಶೀಲ್ ಕುಮಾರ್ ಶಿಂಧೆ ಹೇಳಿದ್ದಾಗಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಲೋಕಸಭೆ ಚುನಾವಣೆ ಎದುರಿಸಲು ಮತ್ತು ಬಿಜೆಪಿಯ ಆರೋಪವನ್ನು ಸುಳ್ಳುಮಾಡಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ರಾಜಕೀಯ ಕಾರಣಗಳಿಗಾಗಿ ಅಫ್ಜಲ್ ಗುರು ಮತ್ತು ಅಜ್ಮಲ್ ಕಸಬ್ ನನ್ನು ಗಲ್ಲಿಗೇರಿಸಲಾಯಿತು ಎಂದು ದೂರಿದ್ದಾರೆ.
Advertisement