ನೇಪಾಳ ಭೂಕುಸಿತ: ಭಾರತಕ್ಕೆ ಪ್ರವಾಹ ಭೀತಿ

ಏ.25ರ ಭೂಕಂಪದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ನೇಪಾಳದಲ್ಲಿ ಶನಿವಾರ ರಾತ್ರಿ ಭಾರಿ ಭೂಕುಸಿತ ಸಂಭವಿಸಿದೆ...
ಕಾಳಿ ಗಂಡಕೀ ಅಣೆಕಟ್ಟು
ಕಾಳಿ ಗಂಡಕೀ ಅಣೆಕಟ್ಟು

ಕಠ್ಮಂಡು: ಏ.25ರ ಭೂಕಂಪದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ನೇಪಾಳದಲ್ಲಿ ಶನಿವಾರ ರಾತ್ರಿ ಭಾರಿ ಭೂಕುಸಿತ ಸಂಭವಿಸಿದೆ.

ಪಶ್ಚಿಮ ನೇಪಾಳದಲ್ಲಿ ಸಂಭವಿಸಿದ ಈ ಭೂಕುಸಿತದಿಂದ ಕಾಳಿ ಗಂಡಕೀ ನದಿಯ ಹರಿವಿಗೆ ಅಡ್ಡಿಯಾಗಿದ್ದು, ಇದು ನೇಪಾಳದಲ್ಲಿ ಮಾತ್ರವಲ್ಲದೆ, ಭಾರತದಲ್ಲೂ ಪ್ರವಾಹ ಭೀತಿ ಉಂಟುಮಾಡಿದೆ.

ಭೂಕುಸಿತದ ಪರಿಣಾಮ ಕಲ್ಲು, ಮಣ್ಣುಗಳು ಕುಸಿದು ಬಿದ್ದಿದ್ದು, ಕಾಳಿ ಗಂಡಕೀ ನದಿಯ ಹರಿವಿಗೆ ಅಡ್ಡಿಯಾಗಿದೆ. ಹೀಗಾಗಿ ನದಿಯು ಇನ್ನಷ್ಟು ಆಳಕ್ಕೆ ತಲುಪಿ, 150 ಮೀ. ಎತ್ತರಕ್ಕೆ ನೀರು ನಿಂತಿದೆ.

ನೀರಿನ ಒತ್ತಡ ಹೆಚ್ಚಾಗಿ ಕೃತಕ ಅಣೆಕಟ್ಟು ಒಡೆದು ಹೋದರೆ ಅಪಾಯ ಕಟ್ಟಿಟ್ಟಬುತ್ತಿ. ಈ ನದಿಯು ಉತ್ತರ ಪ್ರದೇಶ ಬಿಹಾರ ರಾಜ್ಯಗಳ ಗಡಿಯಲ್ಲೂ ಸಾಗುತ್ತದೆ. ಒಂದು ವೇಳೆ ಅಣೆಕಟ್ಟು ಒಡೆದರೆ ಭಾರತದಲ್ಲೂ ದಿಢೀರ್ ಪ್ರವಾಹ ಉಂಟಾಗುವ ಭೀತಿಯಿದೆ ಎಂದು ನೇಪಾಳದ ವಿಜ್ಞಾನ, ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com