ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ

ರಾಹುಲ್ ಗಾಂಧಿಗೆ ಬದನೆ-ಬರ್ಗರ್ ಗಿರುವ ವ್ಯತ್ಯಾಸ ಗೊತ್ತಿಲ್ಲ: ನಖ್ವಿ

ರೈತರ ಪರವಾಗಿ ಮಾತನಾಡುತ್ತಿರುವ ರಾಹುಲ್ ಗೆ ಬದನೆಕಾಯಿ ಹಾಗೂ ಬರ್ಗರ್ ಗಿರುವ ವ್ಯತ್ಯಾಸವೇ ಗೊತ್ತಿಲ್ಲ. ಮೊದಲು ರಾಹೂಲ್ ಇವುಗಳ ವ್ಯತ್ಯಾಸ ತಿಳಿದುಕೊಳ್ಳಲಿ ನಂತರ ರೈತರ ಕುರಿತು ಮಾತನಾಡಲಿ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ...
Published on

ಭೋಪಾಲ್: ರೈತರ ಪರವಾಗಿ ಮಾತನಾಡುತ್ತಿರುವ ರಾಹುಲ್ ಗೆ ಬದನೆಕಾಯಿ ಹಾಗೂ ಬರ್ಗರ್ ಗಿರುವವ್ಯತ್ಯಾಸವೇ ಗೊತ್ತಿಲ್ಲ. ಮೊದಲು ರಾಹೂಲ್ ಇವುಗಳ ವ್ಯತ್ಯಾಸ ತಿಳಿದುಕೊಳ್ಳಲಿ ನಂತರ ರೈತರಕುರಿತು ಮಾತನಾಡಲಿ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿಹೇಳಿದ್ದಾರೆ.

 ಮಧ್ಯಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಕ್ಷದ ವಕ್ತಾರರನ್ನುದ್ದೇಶಿಸಿಮಾತನಾಡಿರುವ ಅವರು ರಾಹುಲ್ ಗಾಂಧಿಗೆ ಈರುಳ್ಳಿ-ಪಿಜ್ಜಾ ಹಾಗೂ ಬದನೆಕಾಯಿ-ಬರ್ಗರ್  ನಡುವಿನ ವ್ಯತ್ಯಾಸ ತಿಳಿದಿಲ್ಲ. ಆದರೂ ರೈತರ ಪರವಾಗಿಮಾತನಾಡುತ್ತಾರೆ. ನೈಜತೆ ಸತ್ಯಾಂಶಗಳ ಕುರಿತು ಅರಿವಿಲ್ಲದ ವ್ಯಕ್ತಿ ರೈತ ಪರವಾಗಿಮಾತನಾಡುತ್ತಿದ್ದಾರೆ. ಇದರಲ್ಲಿ ರಾಹುಲ್ ಸಫಲರಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸಾರ್ವಜನಿಕರ ಹಣ ಲೂಟಿ ಮಾಡುವವರು ಮೋದಿ ಸರ್ಕಾರ ತಿದ್ದುಪಡಿ ಮಾಡಿರುವ ಭೂ ಕಾಯ್ದೆಯನ್ನುವಿರೋಧಿಸುತ್ತಿದ್ದು, ಕಾಯ್ದೆ ಕುರಿತಂತೆ ರೈತರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಭೂಕಾಯ್ದೆ ತಿದ್ದುಪಡಿ ವಿರೋಧಿಸುತ್ತಿರುವವರುಬೇಕಿದ್ದರೆ ಸಂಸತ್ ನಲ್ಲಿ ಚರ್ಚೆ ನಡೆಸಲಿ. ಚರ್ಚೆಗೆ ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

ನಂತರ ಬಿಜೆಪಿಯ ವರ್ಷಾಚರಣೆ ಕುರಿತಂತೆ ಮಾತನಾಡಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನೇತೃತ್ವದಲ್ಲಿ ಭಾರತದ ವರ್ಚಸ್ಸು ಜಾಗತಿಕವಾಗಿ ಉನ್ನತ ಮಟ್ಟಕ್ಕೇರುತ್ತಿದೆ. ಮೋದಿ ಅವರ ವಿದೇಶಪ್ರವಾಸದಿಂದ ವಿದೇಶದಲ್ಲಿ ಭಾರತ ಹೆಸರು ಮಾಡುತ್ತಿದೆ. ಇಂದು ಭಾರತ ಹೆಮ್ಮೆ ಪಡುವಂತಹ ಸಂದರ್ಭಎದುರಾಗಿದೆ. ವಿರೋಧ ಪಕ್ಷಗಳು ಇಂದು ಮೋದಿ ಅವರನ್ನು ವಿಮರ್ಶೆ ಮಾಡುತ್ತಿದೆ. ಆದರೆ ಪಕ್ಷದ ಸಾಧನೆಕುರಿತಂತೆ ಅವರು ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

 ಇದೇ ವೇಳೆ ಅಲ್ಪಸಂಖ್ಯಾತರೊಂದಿಗೆ ಮಾತುಕತೆ ನಡೆಸಿದ ನಖ್ವಿ ಅವರು, ಸಾರ್ವಜನಿಕರಕಲ್ಯಾಣಕ್ಕೋಸ್ಕರ ಎನ್ ಡಿಎ ಸರ್ಕಾರ ಅಲ್ಪಸಂಖ್ಯಾತ ಜನರಿಗಾಗಿ ಸಾಮಾಜಿ-ಆರ್ಥಿಕ ಹಾಗೂ ಧಾರ್ಮಿಕಹಕ್ಕುಗಳೆಂಬ ಮಹತ್ವದ ಯೋಜನೆಗಳನ್ನು ಜಾರಿ ಮಾಡಿದೆ. ಇವುಗಳ ಸದುಪಯೋಗವನ್ನು ಜನರಿಗೆ ನೀಡುವುದುಸ್ಥಳೀಯ ಅಧಿಕಾರಿಗಳ ಕರ್ತವ್ಯ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com