ಮುಕುಲ್ ರಾಯ್ ಕಾಂಗ್ರೆಸ್ ಸೇರ್ಪಡೆ: ಸುಳಿವು ಕೊಟ್ಟ ರಾಜೀವ್ ಶುಕ್ಲ

ಬಹುಕೋಟಿ ಹಗರಣದಲ್ಲಿ ಸಿಲುಕಿರುವ ಟಿಎಂಸಿ ನಾಯಕ ಮುಕುಲ್ ರಾಯ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂಬ ಊಹಾಪೋಹಗಳಿಗೆ ಇದೀಗ ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲ ಸಣ್ಣದೊಂದು ಸುಳಿವು ನೀಡುವ ಮೂಲಕ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದ್ದಾರೆ...
ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲ
ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲ

ಕೋಲ್ಕತಾ: ಬಹುಕೋಟಿ ಹಗರಣದಲ್ಲಿ ಸಿಲುಕಿರುವ ಟಿಎಂಸಿ ನಾಯಕ ಮುಕುಲ್ ರಾಯ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂಬ ಊಹಾಪೋಹಗಳಿಗೆ ಇದೀಗ ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲ ಸಣ್ಣದೊಂದು ಸುಳಿವು ನೀಡುವ ಮೂಲಕ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದ್ದಾರೆ.

ಟಿಎಂಸಿ ಸಚಿವರು ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆಯೇ ಎಂಬ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿರುವ ರಾಜೀವ್ ಶುಕ್ಲ ಅವರು, ಟಿಎಂಸಿ ಪಕ್ಷದ ಸಚಿವರು ಕಾಂಗ್ರೆಸ್ ನ್ನು ಸೇರಬೇಕಿದ್ದರೆ ಅವರನ್ನು ಸ್ವಾಗತಿಸಲು ಕಾಂಗ್ರೆಸ್ ಯಾವಾಗ ಬೇಕಿದ್ದರು ಸಿದ್ಧವಿರುತ್ತದೆ. ಕಾಂಗ್ರೆಸ್ ಪಕ್ಷದ ಬಾಗಿಲು ಎಲ್ಲರಿಗೆ ಸದಾಕಾಲ ತೆಗೆದಿದ್ದು, ಯಾರು ಯಾವಾಗ ಬೇಕಿದ್ದರು ಕಾಂಗ್ರೆಸ್ ಪಕ್ಷವನ್ನು ಸೇರಬಹುದು ಎಂದು ಹೇಳಿದ್ದಾರೆ.

ಇದೇ ವೇಳೆ ಮುಕುಲ್ ರಾಯ್ ಸೇರ್ಪಡೆ ಕುರಿತಂತೆ ಮಾತನಾಡಿರುವ ಅವರು, ಯಾರು, ಯಾವಾಗ, ಹೇಗೆ ಸೇರ್ಪಡೆಗೊಳ್ಳುತ್ತಾರೆ ಎಂಬುದನ್ನು ನಿರ್ಧರಿಸಬೇಕಾದದ್ದು ಪಕ್ಷವೇ ಹೊರತು ನಾವಲ್ಲ. ಈ ಬಗ್ಗೆ ವೈಯಕ್ತಿಕವಾಗಿ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಶಾರದಾ ಹಗರಣ ಕುರಿತಂತೆ ಮಾತನಾಡಿರುವ ಅವರು, ಕಾನೂನಿನ ಮುಂದೆ ನಾವು ಏನು ಅಲ್ಲ. ಕಾನೂನಿನ ಆದೇಶಕ್ಕೆ ಎಲ್ಲರೂ ತಲೆಬಾಗಲೇಬೇಕಿದೆ. ವ್ಯಕ್ತಿ ಪಕ್ಷ ಸೇರಿದ ಮಾತ್ರಕ್ಕೆ ಆತನನ್ನು ರಕ್ಷಣೆ ಮಾಡುವ ಕೆಲಸಕ್ಕೆ ಪಕ್ಷ ಕೈ ಜೋಡಿಸುವುದಿಲ್ಲ. ಇಷ್ಟಕ್ಕೂ ನಾವು ಅಧಿಕಾರದಲ್ಲಿರುವ ಸರ್ಕಾರವೂ ಅಲ್ಲ. ಕಾನೂನು ತನ್ನ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com