ಬೊಪೋರ್ಸ್ ಹಗರಣ ಎಂದೂ ಭಾರತೀಯ ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ಬೊಪೋರ್ಸ್ ಪ್ರಕರಣ ಹಗರಣ ಎಂದು ಭಾರತದ ಯಾವುದೇ ನ್ಯಾಯಾಲಯಗಳಲ್ಲೂ ಸಾಬೀತಾಗಿಲ್ಲ.....
ಪ್ರಣಬ್ ಮುಖರ್ಜಿ
ಪ್ರಣಬ್ ಮುಖರ್ಜಿ

ನವದೆಹಲಿ: ಬೊಪೋರ್ಸ್ ಪ್ರಕರಣ ಹಗರಣ ಎಂದು ಭಾರತದ ಯಾವುದೇ ನ್ಯಾಯಾಲಯಗಳಲ್ಲೂ ಸಾಬೀತಾಗಿಲ್ಲ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಭಿಪ್ರಾಯ ಪಟ್ಟಿದ್ದಾರೆ.

ಸ್ವೀಡೀಸ್ ಅಧ್ಯಕ್ಷರ ಭೇಟಿಗೆ ತೆರಳುವ ಮುನ್ನ ಸ್ವೀಡನ್ ನಲ್ಲಿ  ಮಾತನಾಡಿದ ಅವರು, ಬೋಪೋರ್ಸ್ ಮಾಧ್ಯಮಗಳಿಂದ ಸೃಷ್ಟಿಯಾದ ಹಗರಣ ಎಂದು ಹೇಳಿದರು. ಭಾರತದ ಯಾವುದೇ ಕೋರ್ಟ್ ನಲ್ಲಿ ಇದುವರೆಗೆ ಇದೊಂದು ಹಗರಣ ಎಂದು ಸ್ಥಾಪಿತವಾಗಿಲ್ಲ ಎಂದರು.
ನಾನು ದೇಶದ ರಕ್ಷಣಾ ಸಚಿವರಾಗಿದ್ದಾಗ ಯುದ್ದಕ್ಕೆ ಸಂಬಂಧ ಪಟ್ಟ ಬಂದೂಕುಗಳಲ್ಲಿ  ಇಂದಿಗೂ ಭಾರತೀಯ ಸೇನೆ ಬಳಸುತ್ತಿರುವ ಬಂದೂಕುಗಳಲ್ಲಿ ಇದೊಂದು ಅತ್ಯಂತ ಉತ್ತಮ ಗುಣಮಟ್ಟದ್ದು ಎಂದು ಅಧಿಕಾರಿಗಳು ಪ್ರಮಾಣೀಕರಿಸಿದ್ದರು ಎಂದು ಪ್ರಣಬ್ ಮುಖರ್ಜಿ ತಿಳಿಸಿದರು.

ಇನ್ನು ಭಾರತದ ಯಾವುದೇ ನ್ಯಾಯಾಲಯ ಇದೊಂದು ಹಗರಣ ಎಂದು ಪರಿಗಣಿಸಿ ತೀರ್ಪು ನೀಡಿಲ್ಲ, ಬೊಪೋರ್ಸ್ ಹಗರಣ ಎಂಬುದು ಮಾಧ್ಯಮಗಳ ಸೃಷ್ಟಿ ಪುನರುಚ್ಚರಿಸಿದರು.

ಭಾರತ ಸರ್ಕಾರ 285 ಮಿಲಿಯನ್ ಡಾಲರ್ ವೆಚ್ಚದಲ್ಲಿ 1986ರಲ್ಲಿ 155 ಎಂಎಂ ಹೌವಿಟ್ಜರ್ ಬಂದೂಕುಗಳನ್ನು ಸ್ವೀಡೀಶ್ ನ ಬೊಪೋರ್ಸ್ ಶಸ್ತ್ರ ಕಂಪನಿಯಿಂದ ಖರೀದಿಸಿತ್ತು.

ಬೊಪೋರ್ಸ್ ಕಂಪನಿಯಿಂದ ಖರೀದಿಗೆ ಅನುಮತಿ ನೀಡಲು ರಾಜಕಾರಣಿಗಳು ಹಾಗೂ ಕೆಲವು ರಕ್ಷಣಾ ಅಧಿಕಾರಿಗಳು ಕಿಕ್ ಬ್ಯಾಕ್ ಪಡೆದುಕೊಂಡಿದ್ದವು ಎಂದು ಸ್ವೀಡನ್ ಮಾಧ್ಯಮಗಳು ವರದಿ ಮಾಡಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com