ನವದೆಹಲಿ: ನನ್ನ ಕನಸಿನ ಭಾರತ ನಿರ್ಮಿಸುವುದೇ ಮೊದಲ ಆದ್ಯತೆ. ನಾನು ನಿಮ್ಮೆಲ್ಲರ ಪ್ರಧಾನ ಸೇವಕ. ಇದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಾತುಗಳು.
ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮೋದಿ ಮಾತನಾಡಿದರು.
ಸೇವಾ ಪರಮೋ ಧರ್ಮ ಭಾರತೀಯರ ತತ್ವ ಸಿದ್ಧಾಂತಗಳಲ್ಲೊಂದಾಗಿದೆ. ಒಂದು ವರ್ಷದ ಹಿಂದೆ ನಂಬಿಕೆ, ಪ್ರೀತಿ, ವಿಶ್ವಾಸವನ್ನಿಟ್ಟು ನನ್ನನ್ನು ನಿಮ್ಮ ಪ್ರಧಾನ ಸೇವಕನನ್ನಾಗಿ ನೇಮಿಸಿದಿರಿ. ಪ್ರತಿ ದಿನದ ಪ್ರತಿ ಕ್ಷಣದಲ್ಲೂ ನಿಮ್ಮ ಸೇವೆ ಮಾಡಲು ನಾನು ಬದ್ಧನಾಗಿದ್ದೇನೆ ಎಂದರು.
ದೇಶದಲ್ಲಿ ಭ್ರಷ್ಟಾಚಾರ, ಹಣದುಬ್ಬರ, ಆರ್ಥಿಕ ಅಭದ್ರತೆ ತಾಂಡವವಾಡುತ್ತಿದ್ದು ಸಂದರ್ಭದಲ್ಲಿ ದೇಶದ ಜನ ಆತ್ಮವಿಶ್ವಾಸ ಕಳೆದುಕೊಂಡಿದ್ದರು. ಈ ವೇಳೆ ಜನರಿಗೆ ವಿಶ್ವಾಸ ತುಂಬಿ ಮುನ್ನೆಡೆಸುವ ಅಗತ್ಯವಿತ್ತು. ಆಗ ದೇಶದ ಚುಕ್ಕಾಣಿ ಹಿಡಿದ ತಮ್ಮ ಸರ್ಕಾರ ಸವಾಲುಗಳನ್ನು ಗಂಭೀರವಾಗಿ ತೆಗೆದುಕೊಂಡು ಹಣದgಬ್ಬರ ನಿಯಂತ್ರಿಸಲು ತ್ವರಿತ ಕ್ರಮ ಕೈಗೊಂಡೆವು ಎಂದು ಪ್ರಧಾನಿ ಮೋದಿ ಹೇಳಿದರು.
ನೈಸರ್ಗಿಕ ಸಂಪನ್ಮೂಲಗಳ ಹರಾಜು ಪ್ರಕ್ರಿಯೆಯಲ್ಲಿ ಪಾರದರ್ಶಕ ಕ್ರಮ ಅನುಸರಿಸಿದೆವು. ಇನ್ನು ಕಪ್ಪು ಹಣ ವಾಪಸ್ ತರುವ ವಿಷಯದಲ್ಲೂ ಕೂಡ ಕಠಿಣ ಕ್ರಮ ತೆಗೆದುಕೊಂಡೆವು. ಎನ್ ಡಿ ಎ ಸರ್ಕಾರ ತೆಗೆದುಕೊಂಡ ದಿಟ್ಟ ಕ್ರಮಗಳಿಂದ ಪ್ರಸಕ್ತ ಆರ್ಥಿಕ ಸ್ಥಿತಿ ಸ್ಥಿರವಾಗಿದೆ ಎಂದರು
ಭ್ರಷ್ಟಾಚಾರ ನಿರ್ಮೂಲನವೇ ನಮ್ಮ ಸರ್ಕಾರದ ಮುಖ್ಯ ಧ್ಯೇಯ ಎಂದರು.
ಅಂತ್ಯೋದಯ ನಮ್ಮ ಸರ್ಕಾರದ ಪ್ರಮುಖ ತತ್ವ. ಅದರ ಮಾರ್ಗದರ್ಶನದಂತೆ, ತೀರಾ ಹಿಂದುಳಿದಿರುವ ದೇಶದ ಬಡಜನರ ಸಬಲೀಕರಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಶಾಲೆಗಳಲ್ಲಿ ಶಾಚಾಲಯ, ಐಐಟಿ, ಐಐಎಂ ಹಾಗೂ ಎಐಐಎಂಎಸ್ ಸ್ಥಾಪನೆ, ಮಕ್ಕಳಿಗೆ ಲಸಿಕೆ, ಹಾಗೂ ಸ್ವಚ್ಚ ಭಾರತ್ ಸೇರಿದಂತೆ ಹಲವು ಪ್ರಮುಖ ಕಾರ್ಯಕ್ರಮಗಳ ಬಗ್ಗೆ ಮೋದಿ ಮಾಹಿತಿ ನೀಡಿದರು. ಕಾರ್ಮಿಕರಿಗೆ ಸಾಮಾನ್ಯ ಭದ್ರತೆ ಒದಗಿಸಲು ಪಿಂಚಣಿ ಸೌಲಭ್ಯ, ಪ್ರಕೃತಿ ವಿಕೋಪಗಳಿಂದ ನೊಂದ ರೈತರಿಗೆ ನಷ್ಟ ಪರಿಹಾರ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
Advertisement